ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿಯಿಂದ ಬಹಿರಂಗ ವೇದಿಕೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರತಿಜ್ಞೆ ! ವೀಡಿಯೋ ವೈರಲ್

ವರದಿಗಾರ (ಫೆ 2) :  ಉತ್ತರ ಪ್ರದೇಶದ ಡಿಜಿ ಹೋಮ್ ಗಾರ್ಡ್ ಆಗಿರುವ ಸೂರ್ಯ ಕುಮಾರ್ ಶುಕ್ಲಾ ಅವರು, ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಬಹಿರಂಗ ಪ್ರತಿಜ್ಞೆ ಕೈಗೊಳ್ಳುವ ವೀಡೀಯೋ ಒಂದು ವೈರಲ್ ಆಗಿದ್ದು, 1982ರ ಶ್ರೇಣಿಯ ಐಪಿಎಸ್ ಅಧಿಕಾರಿ ವಿವಾದಕ್ಕೀಡಾಗಿದ್ದಾರೆ. ಜನವರಿ 28ರಂದು ಲಕ್ನೋದಲ್ಲಿ ನಡೆದ ಕಾಯಕ್ರಮದಲ್ಲಿ ಶುಕ್ಲಾ ಇತರೆ ಕೆಲವೊಂದು ಹಿಂದೂ ಸಂಘಟನೆಗಳ ಕಾರ್ಯಕರ್ತರ ಜೊತೆಗೆ ಈ ವಿವಾದಾತ್ಮಕ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಓರ್ವ ಐಪಿಎಸ್ ಅಧಿಕಾರಿ ಡಿಜಿ ಯಾಗಿದ್ದುಕೊಂಡೇ ರಾಜಕೀಯ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೂ ಅಲ್ಲದೆ, ಅಲ್ಲಿ ರಾಮ ಮಂದಿರ ನಿರ್ಮಾಣದಂತಹಾ ವಿವಾದಾತ್ಮಕ ವಿಷಯಗಳ ಕುರಿತಂತೆ ಶಪಥ ತೆಗೆದುಕೊಂಡಿರುವುದು ಸೇವಾ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಈ ಕಾರ್ಯಕ್ರಮದಲ್ಲಿ ಮುಸ್ಲಿಮ್ ಕಾರ್ಯಸೇವಾ ಮಂಚ್ ನ ಅಧ್ಯಕ್ಷರಾದ ಅಜಂ ಖಾನ್ ಕೂಡಾ ಉಪಸ್ಥಿತರಿದ್ದರು. ಭಾಗವಹಿಸಿದ್ದ ಎಲ್ಲರೂ “ರಾಮ ಭಕ್ತರಾದ ನಾವೆಲ್ಲರೂ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣಕ್ಕಾಗಿ ಈ ಕಾರ್ಯಕ್ರಮದ ಮೂಲಕ ಸಂಕಲ್ಪ ತೊಡುತ್ತಿದ್ದೇವೆ” ಎಂದು ಪ್ರತಿಜ್ಞೆ ತೆಗೆದುಕೊಳ್ಳುವುದು ವೀಡಿಯೋದಲ್ಲಿ ದಾಖಲಾಗಿದೆ. ಈ ವಿವಾದದ ಕುರಿತು ಡಿಜಿ ಸೂರ್ಯ ಕುಮಾರ್ ರವರಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ,  ಅದು ಮುಸ್ಲಿಮರೇ ಆಯೋಜಿಸಿದ್ದ ಕಾರ್ಯಕ್ರಮವಾಗಿತ್ತು. ರಾಮ ಮಂದಿರ ಬಲವಂತವಾಗಿ ನಿರ್ಮಿಸುವ ಕುರಿತು ಯಾರೂ ಏನೂ ಮಾತನಾಡಿಲ್ಲ, ಶಾಂತಿ ಸುವ್ಯವಸ್ಥೆಗಳೊಂದಿಗೆ ಮಂದಿರ ನಿರ್ಮಾಣದ ಮಾತುಗಳನ್ನಾಡಲಾಗಿತ್ತು ಎಂದು ಉತ್ತರಿಸಿದ್ದಾರೆ.

ಆದರೆ ಸಾಮಾಜಿಕ ತಾಣಗಳಲ್ಲಿ ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಡಿಜಿ ಸೂರ್ಯ ಕುಮಾರ್ ಶುಕ್ಲಾರವರು ಡಿಜಿಪಿ ಯಾಗುವ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ರಾಜಕೀಯದ ಪುಡಾರಿಗಳನ್ನು ಸುಂತುಷ್ಟಗೊಳಿಸುವ ನಿಟ್ಟಿನಲ್ಲಿ ಈ ರೀತಿಯ ಕೀಳು ಮಟ್ಟದ ಕೆಲಸಕ್ಕಿಳಿದಿದ್ದಾರೆ ಎಂದು ಹಲವರು ವಾಗ್ದಾಳಿ ನಡೆಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group