ಅನಿವಾಸಿ ಕನ್ನಡಿಗರ ವಿಶೇಷ

ತಬೂಕ್ : ಇಂಡಿಯನ್ ಸೋಶಿಯಲ್ ಫೋರಂ ನೆರವಿನಿಂದ ಊರಿಗೆ ತಲುಪಿದ ಆಸಿಫ್ ತಲಪಾಡಿ

ತಬೂಕ್ : ಹಲವು ವರ್ಷಗಳಿಂದ ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ದುಡಿಯುತ್ತಿದ್ದ ಆಸೀಫ್ ಕೆಲವು ದಿನಗಳಿಂದ ಕೆಲಸವಿಲ್ಲದ ಕಾರಣ ಕೆಲಸ ಹುಡುಕಿಕೊಂಡು ಸೌದಿ ಅರೇಬಿಯಾದ ತಬೂಕಿಗೆ ಬಂದಿದ್ದರು ಆದರೆ ದುರದ್ರಷ್ಟಕರ ಇಖಾಮ ಮುಗಿದಿತ್ತು ಇದರಿಂದ ಕಂಗಾಲಾದ ಆಸೀಫ್ ಪುನಃ ದಮ್ಮಾಮ್ ಗೆ ಹೋಗಿ ಊರಿಗೆ ಹೋಗುವ ಪ್ರಯತ್ನದಲ್ಲಿದ್ದರು ಆದರೆ ಸೌದಿ ಅರೇಬಿಯಾದ ಪೋಲಿಸರು ಇಖಾಮ ತಪಾಸಣೆ ನಡೆಸುವಾಗ ಆಸೀಫ್ ಎ೦ಬವರ ಇಖಾಮದ ಅವಧಿ ಮುಗಿದಿದ್ದ ಕಾರಣ ತಬೂಕಿನ ಪೋಲಿಸರು ಬಂಧಿಸಿದರು , ಬಂಧನದ ವಿಷಯ ತಿಳಿದ ಆಸೀಫ್ ನ ಪ್ರಾಯೋಜಕ (ಕಫೀಲ್) ಉರೂಬ್ (ನನ್ನ ಕೆಲಸದವ ಕಾಣೆಯಾಗಿದ್ದಾನೆ ಎನ್ನುವಂತಹ ಕೇಸು) ಹಾಕತ್ತಾರೆ , ಇದನ್ನರಿತ ಪೋಲಿಸರು ಆಸೀಫ್ ನನ್ನು ಊರಿಗೆ ಕಳುಹಿಸುವ ಸಲುವಾಗಿ ತಬೂಕಿನಿಂದ ಜಿದ್ದಾ ಜೈಲಿಗೆ ಕಳುಹಿಸಿಕೊಡುತ್ತಾರೆ ಆದರೆ ಆಸೀಫ್ ನ ಪ್ರಾಯೋಜಕ (ಕಫೀಲ್)ಕೆಲವು ದಿನಗಳ ನಂತರ ಊರೂಬ್ ಹಿಂಪಡೆದ ಕಾರಣಕ್ಕೆ ಆಸೀಫ್ ಊರಿಗೆ ಹೋಗಲಾಗದೆ ಮತ್ತೆ ಜಿದ್ದಾದಿಂದ ತಬೂಕ್ ಜೈಲಿಗೆ ಬರಬೇಕಾಯಿತು ಇದನ್ನರಿತ ಆಸೀಫ್ ನ ಅಣ್ಣ ಅಶ್ರಫ್ ತಬೂಕಿನಲ್ಲಿರುವ ಪರಿಚಯಸ್ಥರನ್ನು ಸಂಪರ್ಕಿಸಿ ಆಸೀಫ್ ನ ವಿಷಯದಲ್ಲಿ ಸಹಕರಿಸುವಂತೆ ಸಹಾಯ ಕೇಳುತ್ತಾರೆ ಆದರೆ ಆಸೀಫ್ ನ ವಿಷಯದಲ್ಲಿ ಪರಿಚಯಸ್ಥರಿಂದ ಯಾವುದೆ ಸ್ಪಂದನೆ ಸಿಗದ ಕಾರಣದಿಂದಾಗಿ ಆಸೀಫ್ ರವರು 40 ದಿನಕ್ಕಿಂತ ಹೆಚ್ಚು ಕಾಲ ತಬೂಕ್ ಜೈಲಿನಲ್ಲಿ ಕಾಲ ಕಳೆಯುವಂತಾಯಿತು.

ಯಾರ ಸಹಾಯವಿಲ್ಲದೆ ಕಂಗಲಾಗಿದ್ದ ಆಸೀಫ್ ಗೆ ಜೈಲಿನಲ್ಲಿ ಮ೦ಜೇಶ್ವರ ಮೂಲದ ಯಹ್ಯಾ ಎ೦ಬವರ ಪರಿಚಯವಾಗಿ ಯಹ್ಯಾರವರಲ್ಲಿ ತನ್ನ ಕಷ್ಟಗಳನೆಲ್ಲ ಹೇಳಿಕೊಂಡಾಗ ಯಹ್ಯರವರು ಆಸೀಫ್ ಗೆ ಸಾಂತ್ವಾನ ಹೇಳಿ ಯಹ್ಯರವರ ಕಷ್ಟಕ್ಕೆ ಸ್ಪಂಧಿಸುತಿದ್ದ ಇ೦ಡಿಯನ್ ಸೋಷಿಯಲ್ ಫೋರಮ್ ತಬೂಕ್ ಇದರ ಅಧ್ಯಕ್ಷರಾದ ಲತೀಫ್ ಉಪ್ಪಿನ೦ಗಡಿಯವರ ದೂರವಾಣಿ ಸಂಖ್ಯೆಯನ್ನು ನೀಡಿ ಸಹಾಯಮಾಡಲು ಕೇಳಿಕೊಳ್ಳಲು ಸಲಹೆ ನೀಡದರು , ಆಸೀಫ್ ರವರು ತನಗೆ ನೀಡಿದ ದೂರವಾಣಿ ಸಂಖ್ಯೆಯನ್ನು ದಮ್ಮಾಮ್ ನಲ್ಲಿರುವ ಅಣ್ಣ ಅಶ್ರಫ್ ಗೆ ನೀಡಿ ಇಂಡಿಯನ್ ಸೋಷಿಯಲ್ ಫಾರಮ್ ತಬೂಕ್ ಘಟಕವನ್ನು ಸಂಪರ್ಕಿಸಲು ಹೇಳುತ್ತಾರೆ

ಸೌದಿ ಅರೇಬಿಯಾದ ದಮ್ಮಾಮಿನಲ್ಲಿರುವ ಆಸೀಫ್ ನ ಅಣ್ಣ ಅಶ್ರಫ್ ಇಂಡಿಯನ್ ಸೋಷಿಯಲ್ ಫಾರಮ್ ತಬೂಕ್ ಅಧ್ಯಕ್ಷರಾದ ಲತೀಫ್ ಉಪ್ಪಿನಂಗಡಿಯವರನ್ನು ಸಂಪರ್ಕಿಸಿ ತಮ್ಮ ಆಸೀಫ್ ನ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡರು, ವಿಷಯ ತಿಳಿದು ಕಾರ್ಯಪ್ರವರ್ತರಾದ ಲತೀಫ್ ಉಪ್ಪಿನಂಗಡಿ ಹಾಗೂ ಮಜೀದ್ ವಿಟ್ಲ ರವರು ಹಲವು ದಿನಗಳಿಂದ ಜೈಲಿನಲ್ಲಿದ್ದ ಆಸೀಫ್ ನನ್ನು ಭೇಟಿಯಾಗಿ ಸಾಂತ್ವಾನ ಹೇಳಿ ಆದಷ್ಟು ಬೇಗನೆ ಊರಿಗೆ ಕಳುಹಿಸುವ ಭರವಸೆ ನೀಡಿ ತಕ್ಷಣಕ್ಕೆ ಬೇಕಾದ ಸಹಾಯ ಮಾಡುತ್ತಾರೆ , ನಂತರ ಇಂಡಿಯನ್ ಸೋಷಿಯಲ್ ಫಾರಮ್ ತಂಡ ಜೈಲು ಅಧಿಕಾರಿಗಳನ್ನು ಭೇಟಿಯಾಗಿ ಆಸೀಫ್ ರವರನ್ನು ಊರಿಗೆ ಕಳುಹಿಸಲು ಬೇಕಾದ ದಾಖಲೆಗಳನ್ನು ನೀಡುವ ಮೂಲಕ ಅಲ್ ಹಮ್ದುಲಿಲ್ಲ ಆಸೀಫ್ ರವರು ಇಂಡಿಯನ್ ಸೋಷಿಯಲ್ ಫಾರಮ್ನ ಕೆಲಸ ಕಾರ್ಯ ಶ್ಲಾಖಿಸುತ್ತಾ , ತಾಯ್ನಾಡಿಗೆ ತಲುಪಿದರು

ವರದಿ : ಇಂಡಿಯನ್ ಸೋಷಿಯಲ್ ಫಾರಂ ತಬೂಕ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group