ವರದಿಗಾರ-ಬಂಟ್ವಾಳ: ಇಲ್ಲಿನ ಸಜೀಪ ಮೂಡ ಗ್ರಾಮದ ಕಾರಾಜೆ 1 ನೇ ವಾರ್ಡಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.
ಕಾರಾಜೆ 1 ನೇ ವಾರ್ಡಿನ ಮೂಲಭೂತ ಸೌಕರ್ಯಗಳಾದ ಚರಂಡಿ , ದಾರಿ ದೀಪ , ರಸ್ತೆ ದುರಸ್ತಿ, ಸಮರ್ಪಕವಾದ ನೀರಿನ ವ್ಯವಸ್ಥೆ ಹಾಗು ಇನ್ನಿತರ ಮೂಲಭೂತ ಸೌಕರ್ಯಗಳ ಅವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಗ್ರಾಮ ಪಂಚಾಯತ್, ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಶಾಸಕರು, ಸಚಿವರಿಂದ ಗ್ರಾಮಕ್ಕೆ ಬೇಕಾದ ಅನುದಾನವನ್ನು ಒದಗಿಸಬೇಕೆಂದು ಒತ್ತಾಯಿಸಿ ತಾಲೂಕ್ ಪಂಚಾಯತ್ ಸದಸ್ಯರಾದ ಸಂಜೀವ ಪೂಜಾರಿಯವರಿಗೆ ಮನವಿಯನ್ನು ಸಲ್ಲಿಸಿ ಆಗ್ರಹಿಸಲಾಯಿತು.
ಈ ಸಂದರ್ಭ ಕಾರಾಜೆ ನೂರುಲ್ ಹುದಾ ಜಮಾತ್ ಅಧ್ಯಕ್ಷ ಶೇಖಬ್ಬ ಹಾಜಿ, ಕಾರಾಜೆ ಜಮಾತ್ ಕಮಿಟಿ , ಹಯಾತುಲ್ ಇಸ್ಲಾಂ ಕಮಿಟಿ , ಪ್ರವಾಸಿ ಕಾರಾಜೆ , ಎಸ್.ಎಸ್.ಎಫ್ ಕಾರಾಜೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಅಧ್ಯಕ್ಷರು. ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
