ಸುತ್ತ-ಮುತ್ತ

92.7 ಬಿಗ್ ಎಫ್ ಎಂ ಬೆಂಗಳೂರು ‘ಮ್ಯೂಸಿಕ್ ಯೂನಿಟ್ಸ್’ ನೊಂದಿಗೆ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ

ವರದಿಗಾರ-ಬೆಂಗಳೂರು (ಫೆ.1): ಭಾರತದಲ್ಲಿ ಮುಂಚೂಣಿಯಲ್ಲಿರುವ 92.7 ಬಿಗ್ ಎಫ್.ಎಂ ಭಾರತದ 69ನೇ ಗಣರಾಜ್ಯೋತ್ಸವದಂದು ಸಂಗೀತ ಆಚರಣೆಯೊಂದಿಗೆ ಹೆಚ್ಚಿನ ಸಂಗೀತವನ್ನು ಒದಗಿಸುವ ಭರವಸೆಯನ್ನು ನೀಡಿತ್ತು.ಬೆಂಗಳೂರಿನಲ್ಲಿ ಏಕೈಕ ದ್ವಿಭಾಷಾ ರೇಡಿಯೋ ಸ್ಟೇಷನ್ ಆಗಿರುವ 92.7 ಬಿಗ್ ಎಫ್ ಎಂ, ಜನವರಿ 26 ರಂದು ವಿವಿಧ ಸಂಗೀತ ಕಾರ್ಯಕ್ರಮಗಳೊಂದಿಗೆ ‘ಮ್ಯೂಸಿಕ್ ಯೂನಿಟ್ಸ್’ ಸಂದೇಶವನ್ನು ಉತ್ತೇಜಿಸಿತು. ‘ಸ್ಟುಡಿಯೋ-ಆನ್-ವೀಲ್ಸ್’ ಎಂಬ ಪರಿಕಲ್ಪನೆಯೊಂದಿಗೆ 5ಲಕ್ಷಕ್ಕೂ ಹೆಚ್ಚು ಬೆಂಗಳೂರಿಗರಿಗೆ ಈ ಪರಿಕಲ್ಪನೆಯ ಕುರಿತು ಸಾರಲು ಎಂಜೆಗಳು ಲಾಲ್ ಬಾಗ್ ನಲ್ಲಿ ಸೇರಿದರು. ಜನಪ್ರಿಯ ಸಂಗೀತ ತಂಡವಾದ ನಿನಾದ್ ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನಿಂದ ಸಾಕಷ್ಟು ಸಂಖ್ಯೆಯ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

92.7 ಬಿಗ್ ಎಫ್ ಎಂ ತನ್ನ ಹೊಸ ಹೊಸ ಪರಿಕಲ್ಪನೆಗಳ ಮೂಲಕ ಕೇಳುಗರಿಗೆ ಮನರಂಜನೆ ನೀಡಲು ಹೆಸರುವಾಸಿಯಾಗಿದೆ. ಈ ಗಣರಾಜ್ಯೋತ್ಸವ ದಿನದಂದು ರೇಡಿಯೋ ಸ್ಟೇಷನ್ ವಿವಿಧ ಭಾಷೆಗಳ ಜನರನ್ನು ಸಂಗೀತ ಶಕ್ತಿಯ ಮೂಲಕ ವೇದಿಕೆಯ ಮೇಲೆ ಒಟ್ಟು ಸೇರಿಸಿತು. ಸಂಗೀತ ತಂಡವು ಸ್ಯಾಂಡಲ್ ವುಡ್ ಮತ್ತು ಬಾಲಿವುಡ್ ನ ಎರಡೂ ಮನರಂಜನಾ ಕ್ಷೇತ್ರದ ಉತ್ಸಾಹಿಗಳನ್ನುಸಂಗೀತದ ಮೂಲಕ ಪ್ರೋತ್ಸಾಹಿಸಿತು.

ಗಣರಾಜೋತ್ಸವದ ಕುರಿತು ಮಾತನಾಡಿದ 92.7 ಬಿಗ್ ಎಫ್ ಎಂ ನ ಎಂ.ಜೆ ಶೃತಿ ‘ಕೇಳುಗರಿಗೆ ಅರ್ಥಪೂರ್ಣವಾದ ಮನರಂಜನೆಯನ್ನು ಒದಗಿಸುವ ಬಗ್ಗೆ ನಾವು ಪ್ರತಿ ವರ್ಷ ಪ್ರಯತ್ನಿಸುತ್ತೇವೆ. ಅದರಲ್ಲೂ ಇಂತಹ ಪ್ರಮುಖ ಸಂದರ್ಭದಲ್ಲಿ. ‘ಮ್ಯೂಸಿಕ್ ಯೂನೈಟ್ಸ್’ ಬೆಂಗಳೂರಿಗರ ನಡುವೆ ಅಸ್ತಿತ್ದಲ್ಲಿದ್ದ ವೈವಿಧ್ಯತೆಯ ಏಕತೆಯನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿತ್ತು. ನಿನಾದ್ ತಂಡವು ಈ ದಿನದಂದು ನಮ್ಮೊಂದಿಗೆ ಸೇರಿಕೊಂಡು ಎಲ್ಲರಿಗೂ ಸಂಗೀತದ ರಸದೌತಣವನ್ನು ಉಣಬಡಿಸಿತು. ಇದರ ಜತೆ ನಮ್ಮ ಬಿಗ್ ಗಣ್ಯರಿಗೆ ತುಳಸಿ ಗಿಡಗಳನ್ನು ನೀಡುವುದು ಈ ಸಂಭ್ರಮದ ಕಳೆಯನ್ನು ಇನ್ನಷ್ಟು ಹೆಚ್ಚಿಸಿತು. ಸ್ವಚ್ಛ ಹಾಗೂ ಹಸಿರುಮಯವಾದ ಪರಿಸರವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ತೆಗದುಕೊಳ್ಳುವ ಅವರ ಉತ್ಸಾಹದ ಕುರಿತು ನಮಗೆ ತಿಳಿದಿದೆ.
ಒಂದು ಒಳ್ಳೆಯ ಕಾರಣದೊಂದಿಗೆ ಮನರಂಜನೆಯನ್ನು ನೀಡುತ್ತಿರುವ ಈ ರೇಡಿಯೋ ಸ್ಟೇಷನ್ ಆಗಾಧವಾದ ಪ್ರೇಕ್ಷಕರನ್ನು ತಲುಪಿದೆ. ಈ ಬಾರಿ ‘ರೈಟ್ ಟು ಕ್ಲೀನ್ ಏರ್’ ಎಂಬ ಕಾರಣವನ್ನು ತೆಗೆದುಕೊಂಡಿದೆ.

ವರದಿ: ನರೇಶ್ ಬಂಡಾರಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group