ಆಸೆ ಇದೆ, ಆಸೆ ಇದೆ ನನಗೂ
ಬದುಕಲು ಆಸೆ ಇದೆ…
ಧರ್ಮ, ಧರ್ಮಗಳ ಮಧ್ಯೆ
ಜಾತಿ, ಜಾತಿಗಳ ಮಧ್ಯೆ
ಕಂದಕಗಳನ್ನು ನಿರ್ಮಿಸದ
ಒಂದು ಅಂಗೈ ಅಗಲ ಜಾಗ ಸಾಕು
ನಾನು ಬದುಕಲು….
ಆಸೆ ಇದೆ,ಆಸೆ ಇದೆ,
ನನಗೂ ಬದುಕಲು ಆಸೆ ಇದೆ…
ನಾನು ಉಸಿರಾಡುವ ಗಾಳಿಗೆ ಇಲ್ಲ
ಧರ್ಮ,ಜಾತಿಯ ಬೇಧಬಾವ…
ನಾನು ಕುಡಿಯುವ ನೀರಿಗೆ ಇಲ್ಲ
ಧರ್ಮ,ಜಾತಿಯ ಬೇಧಭಾವ…
ನಾನು ತಿನ್ನುವ ಆಹಾರಕ್ಕೆ ಇಲ್ಲ
ಧರ್ಮ,ಜಾತಿಯ ಬೇಧಭಾವ…
ನನ್ನ ಮೈಯಲ್ಲಿ ಹರಿಯುವ
ರಕ್ತಕ್ಕೆ ಇಲ್ಲ
ಧರ್ಮ,ಜಾತಿಯ ಬೇಧಭಾವ….
ನಾನು ಜೀವಿಸುವ ಭೂಮಿಗೆ ಇಲ್ಲ
ಧರ್ಮ,ಜಾತಿಯ ಬೇಧಭಾವ…
ಆಸೆ ಇದೆ, ಆಸೆ ಇದೆ, ನನಗೂ
ಬದುಕಲು ಆಸೆ ಇದೆ
ಧರ್ಮ, ಧರ್ಮಗಳನ್ನು ನೋಡದೆ
ಜಾತಿ, ಜಾತಿಗಳನ್ನು ನೋಡದೆ
ಮನುಷ್ಯತ್ವ ಇರುವ ಜನಗಳ ಮಧ್ಯೆ
ನನಗೂ ಬದುಕಲು ಆಸೆ ಇದೆ…
ತಂಗಿ ಸೌಜನ್ಯ, ಕಾವ್ಯ, ದಾನಮ್ಮ
ಧನ್ಯಶ್ರೀ, ಝೈಬುನ್ನಿಸಳ ಬದುಕು ಆಗುವ ಮೊದಲು…
ಆಸೆ ಇದೆ, ಆಸೆ ಇದೆ, ನನಗೂ
ಬದುಕಲು ಆಸೆ ಇದೆ,
ದಯಮಾಡಿ ನನ್ನನ್ನು ಬದುಕಲು ಬಿಡಿ.
– ರಹಿಮಾನ್ ಮಠ
