ರಾಷ್ಟ್ರೀಯ ಸುದ್ದಿ

“ನಾನು ಬದುಕಿದ್ದೇನೆ” : ಕಾಸ್ ಗಂಜ್ ಹಿಂಸಾಚಾರದಲ್ಲಿ ‘ಸಾವಿಗೀಡಾದ’ ರಾಹುಲ್ ಉಪಾಧ್ಯಾಯ

ವರದಿಗಾರ(30-01-2018): ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಗಣರಾಜ್ಯೋತ್ಸವ ಆಚರಣೆಯ ಹಿನ್ನಲೆಯಲ್ಲಿ ಪ್ರಾರಂಭವಾದ ಹಿಂಸಾಚಾರದಲ್ಲಿ ಹರಡಲಾದ ವದಂತಿಗಳಿಗೆ ಉತ್ತರವಾಗಿ, ಸಾವಿಗೀಡಾಗಿದ್ದಾನೆಂದು ಹೇಳಲಾದ ವ್ಯಕ್ತಿಯು ಮಾಧ್ಯಮಗಳ ಮುಂದೆ ಬಂದಿದ್ದಾನೆ.

ಕಾಸ್ ಗಂಜ್ ಹಿಂಸಾಚಾರದಲ್ಲಿ ಅಭಿಷೇಕ್ ಗುಪ್ತಾ ಎಂಬ ಯುವಕನು ಗುಂಡೇಟಿಗೆ ಬಲಿಯಾಗಿದ್ದನು. ಪ್ರಕರಣದ ತೀವ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸಿದ ಮಾಧ್ಯಮ, ಪತ್ರಕರ್ತರನ್ನೊಳಗೊಂಡಂತೆ ಬಲಪಂಥೀಯರ ಪ್ರಯತ್ನವನ್ನು ರಾಹುಲ್ ಉಪಾಧ್ಯಾಯನು ವಿಫಲಗೊಳಿಸಿದ್ದಾನೆ. ಹಿಂಸಾಚಾರವನ್ನು ತಡೆಯಲು ಅಲ್ಲಿನ ಪೊಲೀಸರು ಹರಸಾಹಸ ಪಡುತ್ತಿರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪತ್ರಕರ್ತರು ರಾಹುಲ್ ಉಪಾಧ್ಯಾಯನು ಸಾವಿಗೀಡಾಗಿದ್ದಾನೆಂದು ವದಂತಿಗಳನ್ನು ಹಬ್ಬಿದರು.

24 ವರ್ಷ ಪ್ರಾಯದ ರಾಹುಲ್ ಅಲೀಘರ್ ನ ನಾಗ್ಲಾ ಕಾಂಜಿಯ ತನ್ನ ಮನೆಯಲ್ಲಿರುವಾಗ ಬಂಧು-ಬಳಗದವರ ಕರೆಗಳು ಆತನನ್ನು ಆಶ್ಚರ್ಯಚಕಿತಗೊಳಿಸಿದವು. ಮೊದಲು ಯಾರೋ ತಮಾಷೆ ಮಾಡುತ್ತಿದ್ದಾರೆಂದು ತಿಳಿದ ರಾಹುಲ್, ಕರೆಗಳು ಮುಂದುವರೆದಾಗ ಘಟನೆಯ ಗಂಭೀರತೆಯನ್ನು ಅರ್ಥಮಾಡಿಕೊಂಡನು. “ಹಿಂಸಾಚಾರವನ್ನು ತೀವ್ರಗೊಳಿಸಲು ನನ್ನ ಹೆಸರನ್ನು ಬಳಸಲಾಗಿತ್ತು” ಎಂದು ರಾಹುಲ್ ಹೇಳಿದ್ದಾನೆ. ಕೂಡಲೇ ಪೊಲೀಸ್ ಹಾಗೂ ಜಿಲ್ಲಾಡಳಿತವನ್ನು ಸಂಪರ್ಕಿಸಿದ ರಾಹುಲ್, ಆಲಿಘರ್ ಐಜಿ ಸಂಜೀವ್ ಗುಪ್ತಾರ ಸಲಹೆಯಂತೆ ಮಾಧ್ಯಮಗಳ ಮುಂದೆ ಬಂದು ತಾನು ಬದುಕಿದ್ದೇನೆಂದು ತಿಳಿಸಿದನು.

ವದಂತಿಗಳನ್ನು ಹರಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕಾಸ್ ಗಂಜ್ ಹಿಂಸಾಚಾರಕ್ಕೆ ಸಂಬಂಧಿಸಿ ಇದುವರೆಗೆ 82 ಮಂದಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು 31 ಮಂದಿಯನ್ನು ಬಂಧಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group