ವರದಿಗಾರ-ಮಂಗಳೂರು: ಸಫರ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ (ರಿ) ಹಾಗೂ ಫಿದಾ ಗೈಯ್ಸ್ ಮಂಚಿಲ,ಉಳ್ಳಾಲ ಇದರ ವತಿಯಿಂದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ 71 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು ಸ್ವಾತಂತ್ರ್ಯ ದಿನದಂದು ಉಳ್ಳಾಳದ ಮದನಿ ಜೂನಿಯರ್ ಕಾಲೇಜ್ ರೋಡ್ ಬಳಿ ಅದ್ದೂರಿಯಾಗಿ ನಡೆಯಿತು.
ಸಫರ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕದಷರಾದ ನಜೀರ್ ಹುಸೈನ್ ರವರು ದ್ವಜಾರೋಹಣಗೈಯ್ಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾತಂತ್ರ್ಯೋತ್ಸವದ ಸಂದೇಶವನ್ನು ನೀಡಿದರು.ಮಂಚಿಲ ಜುಮ್ಮಾ ಮಸೀದಿ ಖತೀಬರು ದುಃವಾಶೀರ್ವಚನ ಮೂಲಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೌನ್ಸಿಲರ್ ಫಾರೂಕ್ ಯು.ಎಚ್, ಅಯ್ಯೂಬ್ ಯು.ಪಿ, ಸಲೀಂ ಯು.ಬಿ, ಯು.ಕೆ.ಮುಹಮ್ಮದ್ ಮುಸ್ತಫಾ, ಇಸ್ಮಾಯಿಲ್, ಇಮ್ರಾನ್ ಅಡ್ಡೂರು, ಮಹಮ್ಮದ್ ಕಮಾಲ್, ಯು.ಎಚ್.ಮನ್ಸೂರ್ ಮುಂತಾದವರು ಆಗಮಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಹಾಗೂ ಸಫರ್ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಧ್ಯಕ್ಷರಾದ ನಜೀರ್ ಹುಸೈನ್ ರವರನ್ನು ಸನ್ಮಾನಿಸಲಾಯಿತು.
ಬೃಹತ್ ರಕ್ತದಾನ ಶಿಬಿರದಲ್ಲಿ 73 ಜನ ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೇನಪೋಯ ಮೆಡಿಕಲ್ ಕಾಲೇಜ್ ಬ್ಲಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಸಂಘಟಕರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
