ರಾಷ್ಟ್ರೀಯ ಸುದ್ದಿ

ತ್ರಿವರ್ಣ ಧ್ವಜ ಹಾರಿಸುವಲ್ಲಿಗೆ ಭಗವಾ ಧ್ವಜದೊಂದಿಗೆ ಎಬಿವಿಪಿ-ಬಜರಂಗದಳ ರ‍್ಯಾಲಿ : ಬಯಲಾಯ್ತು ಕಾಸ್ ಗಂಜ್ ಕೋಮು ಗಲಭೆಯ ಹಿಂದಿರುವ ಕಾರಣ !

▪ ಪರವಾನಗಿಯಿಲ್ಲದೆ ಬೈಕ್ ರಾಲಿ ನಡೆಸಿದ ಎಬಿವಿಪಿ -ಬಜರಂಗದಳ

▪ ತ್ರಿವರ್ಣ ಧ್ವಜಾರೋಹಣ ಮಾಡುತ್ತಿರುವವರಿಗೆ ದೇಶ ಬಿಟ್ಟು ಹೋಗಲು ಹೇಳಿದ ಹಿಂದುತ್ವ ಕಾರ್ಯಕರ್ತರು!

▪ಭಗವಾ ಧ್ವಜಾರೋಹಣ ಮಾಡಲು ಒಪ್ಪದಿದ್ದಾಗ, ತ್ರಿವರ್ಣ ಧ್ವಜಾರೋಹಣ ತಡೆಯುವ ಪ್ರಯತ್ನ !

ವರದಿಗಾರ (ಜ 29 ) :  ಜನವರಿ 26 ರಂದು ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ನಡೆದ ಕೋಮು ಗಲಭೆಗೆ ಚಂದನ್ ಗುಪ್ತಾ ಎನ್ನುವ ಯುವಕ ಗುಂಡಿಗೆ ಬಲಿಯಾಗಿದ್ದು, ಈ ಕುರಿತಾಗಿನ ವೀಡಿಯೋಗಳು ಹೊರಬಂದಿದ್ದು, ಅದರಲ್ಲಿ ಗಲಭೆಗೆ ಮೂಲ ಕಾರಣ ಬಯಲಾಗಿದೆ. ಕಾಸ್ ಗಂಜ್ ನ ಮುಸ್ಲಿಮರು ವೀರ್ ಹಮೀದ್ ಚೌಕ್ ನಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ನಡೆಸಿದ್ದರು. ಆ ವೇಳೆ ಅಲ್ಲಿಗೆ ಬೈಕುಗಳಲ್ಲಿ ಬಂದ ಎಬಿವಿಪಿ ಹಾಗೂ ಬಜರಂಗದಳದ ಗೂಂಡಾಗಳು ತ್ರಿವರ್ಣ ಧ್ವಜದ ಬದಲಾಗಿ ಭಗವಾ ಧ್ವಜ ಹಾರಿಸುವಂತೆ ಅಲ್ಲಿದ್ದವರ ಮೇಲೆ ಒತ್ತಾಯ ಪಡಿಸಿದ್ದರು. ಇದಕ್ಕೆ ಸ್ಥಳೀಯರು ನಿರಾಕರಿಸಿದರು ಮಾತ್ರವಲ್ಲ ನಾವೆಲ್ಲರೂ ಒಟ್ಟಿಗೆ ಸೇರಿ ತ್ರಿವರ್ಣ ಧ್ವಜಾರೋಹಣ ಮಾಡೋಣ ಎಂದು ಅಲ್ಲಿದ್ದ ಹಿರಿಯ ಮುಸ್ಲಿಂ ವ್ಯಕ್ತಿ ವಿನಂತಿಸಿದಾಗ ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ ಗೂಂಡಾಗಳು, ‘ಜೈ ಶ್ರೀ ರಾಂ, ಭಾರತದಲ್ಲಿರಬೇಕಾದರೆ ವಂದೇ ಮಾತರಂ ಹೇಳಲೇಬೇಕು” (ಹಿಂದೂಸ್ಥಾನ್ ಮೆ ರಹನಾ ಹೋಗಾ, ವಂದೇ ಮಾತರಂ ಕೆಹನಾ ಹೋಗಾ) ಸೇರಿದಂತೆ ಹಲವು ಪ್ರಚೋದನಕಾರಿ ಘೋಷಣೆಗಳೊಂದಿಗೆ ಅಲ್ಲಿದ್ದವರೊಂದಿಗೆ ಘರ್ಷಣೆಗಿಳಿದರು. ತ್ರಿವರ್ಣ ಧ್ವಜ ಸ್ಥಂಭವನ್ನು ದಾಳಿ ಮಾಡಿ ಗೂಂಡಾ ಪಡೆಗಳು ನಾಶಪಡಿಸಿದವು. ವೀಡಿಯೋದಲ್ಲಿ ಎಬಿವಿಪಿಯ ಗೂಂಡಾ ಒಬ್ಬ ಭಗವಾ ಧ್ವಜದೊಂದಿಗೆ ಹೋಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ತದ ನಂತರ ಗುಂಪು ಅಲ್ಲಿಂದ ತೆರಳುತ್ತದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಆದರೆ ಅಲ್ಲಿಂದ ತೆರಳಿದ ಗುಂಪು ನಂತರ ಬಿಲ್ರಾಂ ರಸ್ತೆಗೆ ಬಂದು ಇನ್ನೂ ಕೆಲವೊಂದು ಜನರನ್ನು ಸೇರಿಸಿಕೊಂಡು ಮಾರಕಾಯುಧಗಳೊಂದಿಗೆ ಅಲ್ಲಿದ್ದ ಮುಸ್ಲಿಮರ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿ, ಎಂದಿನಂತೆ ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಆ ಪ್ರದೇಶದಲ್ಲಿ ಎರಡೂ ಗುಂಪುಗಳು ಪರಸ್ಪರ ಘರ್ಷಣೆಗಿಳಿದು ಗುಂಡು ಹಾರಿಸಿಕೊಂಡಿದ್ದಾರೆ. ಆ ವೇಳೆ ಚಂದನ್ ಗುಪ್ತಾ ಎನ್ನುವ ವ್ಯಕ್ತಿ ಮೃತಪಟ್ಟಿದ್ದು, ಇರ್ಶಾದ್ ಎನ್ನುವ ವ್ಯಕ್ತಿಯೊಬ್ಬನ ಸಹೋದರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಉತ್ತರಪ್ರದೇಶದ ಕಾಸ್ ಗಂಜ್ ನಲ್ಲಿ ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ವೀರ್ ಹಮೀದ್ ಚೌಕ್ ನಲ್ಲಿ ಮುಸ್ಲಿಮರು ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. 1965 ರ ಭಾರತ-ಪಾಕ್ ಯುದ್ಧದಲ್ಲಿ ಹಲವು ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿದ್ದ ಕಾಸ್ ಗಂಜ್ ನ ಸೈನಿಕ ಹಮೀದ್ ರವರ ನೆನಪಿನಲ್ಲಿ ಅಲ್ಲಿನ ಪ್ರದೇಶವನ್ನು ವೀರ್ ಹಮೀದ್ ಚೌಕ್ ಎಂದು ನಾಮಕರಣ ಮಾಡಿದ್ದರು. ಆ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಅನ್ಯೋನ್ಯತೆಯಿಂದ ಬಾಳುತ್ತಿದ್ದರೆಂದು ಸ್ಥಳೀಯರು ಹೇಳುತ್ತಾರೆ. ಗಣರಾಜ್ಯೋತ್ಸವದಂದು ವೀರ್ ಹಮೀದ್ ಚೌಕ್ ಗೆ ತಿರಂಗಾ ಯಾತ್ರೆಯ ಹೆಸರಿನಲಿ ಭಗವಾ ಧ್ವಜಗಳೊಂದಿಗೆ ಬಂದ ಹೊರಗಿನ ಊರಿನ ಗೂಂಡಾ ಪಡೆಗಳು  ತ್ರಿವರ್ಣ ಧ್ವಜಕ್ಕೆ ಬದಲಾಗಿ ಕೇಸರಿ ಪತಾಕೆಯನ್ನು ಹಾರಿಸುವಂತೆ ಒತ್ತಾಯಪಡಿಸುತ್ತಾ ಸ್ಥಳೀಯ ಮುಸ್ಲಿಮರೊಂದಿಗೆ ಘರ್ಷಣೆಗಿಳಿದರೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಗಲಭೆಗೆ ಕಾರಣವಾದ ಘಟನೆಯ ವೀಡಿಯೋ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group