ವರದಿಗಾರ (ಜ.29): ನಾನು ಧೈರ್ಯದಿಂದ ಹೇಳುತ್ತಿದ್ದೇನೆ. ‘ಆರೆಸ್ಸೆಸ್ ಭಯೋತ್ಪಾದಕ ಸಂಘಟನೆ’ ಎಂದು ಹೋರಾಟಗಾರ್ತಿ, ಜೆ ಎನ್ ಯು ವಿದ್ಯಾರ್ಥಿ ನಾಯಕಿ ಶೆಹ್ಲಾ ರಷೀದ್ ಹೇಳಿದ್ದಾರೆ.
ಅವರು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಗೌರಿ ಲಂಕೇಶ್ ಹುಟ್ಟು ದಿನದ ಪ್ರಯುಕ್ತ ಆಯೋಜಿಸಿದ್ದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಆರೆಸ್ಸೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಶೆಹ್ಲಾ ರಷೀದ್, ‘ಆರೆಸ್ಸೆಸ್ ನಿಂದ ನಮಗೆ ದೇಶಪ್ರೇಮದ ಅಗತ್ಯವಿಲ್ಲ’ ಎಂದು ಹೇಳಿದ್ದಾರೆ.
‘ಕರ್ಣಿ ಸೇನೆಯ ಮುಖ್ಯಸ್ಥ ಭಾರತವನ್ನು ತುಂಡರಿಸುವ ಮಾತನ್ನಾಡಿದ್ದಾರೆ. ಆದರೆ ಅವರು ದೇಶದ್ರೋಹಿಗಳಾಗುವುದಿಲ್ಲ ಎಂದು ಖೇಧ ವ್ಯಕ್ತಪಡಿಸುತ್ತಾ, ಯಾವತ್ತೂ ದೇಶದ್ರೋಹದ ಬಗ್ಗೆ ಒಂದು ಒಂದು ಮಾತನಾಡದ ಉಮರ್ ಖಾಲಿದ್ ಮುಸ್ಲಿಮನೆಂಬ ಏಕ ಕಾರಣಕ್ಕೆ ದೇಶದ್ರೋಹಿಯಾಗುತ್ತಾನೆ’ ಎಂದು ಅವರು ಹೇಳಿದರು.
‘ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಸಿಗದೇ ಮಕ್ಕಳು ಸಾಯುತ್ತಿರುವಾಗ, ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಇಲ್ಲಿನ ಆರೋಗ್ಯ ಪರಿಸ್ಥಿತಿ ಕೆಟ್ಟು ಹೋಗಿದೆ ಎಂದು ಹೇಳುತ್ತಿದ್ದಾರೆ’ ಎಂದು ಯೋಗಿ ಆದಿತ್ಯನಾಥ್ ಟಾಂಗ್ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ, ಬಹುಭಾಷಾ ನಟ ಪ್ರಕಾಶ್ ರೈ, ಹೋರಾಟಗಾರ ಮತ್ತು ವಿದ್ಯರ್ಥಿ ನಾಯಕ ಕನ್ಹಯ್ಯ ಕುಮಾರ್, ಗುಜರಾತಿನ ವಡ್ಗಾಂವ್ ಶಾಸಕ ಜಿಗ್ನೇಶ್ ಮೆವಾನಿ, ,ಉಮರ್ ಖಾಲೀದ್, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಕವಿತಾ ಲಂಕೇಶ್, ಕೆ. ನೀಲಾ, ಎನ್. ಮುನಿಸ್ವಾಮಿ, ವಡ್ಡಗೆರೆ ನಾಗರಾಜ್ ಹಾಗೂ ಇನ್ನಿತರ ಹೋರಾಟಗಾರರು ಉಪಸ್ಥಿತರಿದ್ದರು.
ಕೆ.ಎಲ್.ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳ ಸಹಿತ ಹಲವಾರು ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
