ನಿಮ್ಮ ಬರಹ

ಕರಾವಳಿಯ ಶಾಂತಿ : ಯಾರ ಜವಾಬ್ದಾರಿ ? -ಎ ಆರ್ ಎಂ ತುಂಬೆ

ಜಾಗತಿಕ ಮಟ್ಟದಲ್ಲಿ ಮಂಗಳೂರು ನಗರ ಅತ್ಯುತ್ತಮ ನಗರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಧಾರ್ಮಿಕ ಆಚರಣೆ ವಿಚಾರ, ಹಬ್ಬ ಹರಿದಿನಗಳು ಒಂದಕ್ಕೊಂದು ವಿಭಿನ್ನವಾಗಿದೆ. ಇಲ್ಲಿನ ವಾತಾವರಣ ಶಿಕ್ಷಣದ ಗುಣಮಟ್ಟದಲ್ಲಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ರಾಜ್ಯದಲ್ಲಿ ಮುಂದುವರಿದ ಜಿಲ್ಲೆಯಾಗಿದೆ. ರಾಜಕೀಯ ನಾಯಕರು ಕೇಂದ್ರ ಸರಕಾರದ ಸಚಿವರಾಗಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದಾರೆ. ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ದೇಶದ ವಿವಿಧೆಡೆಯಿಂದ ಜನರು ಹರಿದು ಬರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿ ರಾಜಕೀಯ ನಾಯಕರ ಮಾತುಗಳು, ಅವರ ನಡೆ , ಹೇಳಿಕೆಗಳು ರಾಜ್ಯಕ್ಕೆ ಅಗೌರವ ತರುವಂತಾಗಿದೆ. ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳನ್ನು ತಮ್ಮ ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಾ, ಪ್ರತಿದಿನವೂ ನೀಡುವ ವಿಭಿನ್ನ ಹೇಳಿಕೆಗಳು, ಪರಸ್ಪರ ಪಕ್ಷ ಪಕ್ಷಗಳ ನಡುವೆ ಕಚ್ಚಾಟಕ್ಕೆ ಕಾರಣವಾಗುತ್ತಿವೆ. ಇದು ಕೋಮು ಸಂಘರ್ಷವನ್ನು ಇನ್ನಷ್ಟು ಉದ್ರೇಕಗೊಳಿಸುವತ್ತ ಹೆಜ್ಜೆಯಿಡುತ್ತಿವೆ. ಅದರಲ್ಲೂ ಅತ್ಯಂತ ಶಿಸ್ತಿನ ಪಕ್ಷ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಿದ್ದ BJP ನಾಯಕರ ಒಂದೊಂದು ಹೇಳಿಕೆಗಳು ಅವರ ಒಡೆದು ಆಳುವ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ಸದ್ಯ ಕರಾವಳಿ ತಣ್ಣಗೆ ಇರುವ ಸಂದರ್ಭದಲ್ಲಿ ಇನ್ನಷ್ಟು ಕುದಿಯುವಂತೆ ಮಾಡುವ ರಾಜಕೀಯ ನಾಯಕರ ಹೇಳಿಕೆಗಳಿಗೆ ಕಡಿವಾಣ ಹಾಕಬೇಕಿದೆ. ಕಾಂಗ್ರೆಸ್-BJP ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಕಾಲಹರಣ ಮಾಡುವ ಬದಲು ಜಿಲ್ಲೆಯಲ್ಲಿ ಶಾಂತಿ-ಸಾಮರಸ್ಯ ಸೌಹಾರ್ದತೆ ಕಾಪಾಡಲು ಗರಿಷ್ಟ ಪ್ರಯತ್ನ ಮಾಡಬೇಕು. ಇನ್ನು ಮುಂದೆ ಈ ರೀತಿ ಮರುಕಳಿಸದ ಹಾಗೆ ಶಾಶ್ವತ ಪರಿಹಾರ ಕಾಣಬೇಕಾಗಿದೆ. ಜಿಲ್ಲೆಯ ಎಲ್ಲಾ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಸಭೆ ಸೇರಿ ಜಿಲ್ಲೆಯಲ್ಲಿದ್ದ ಕೋಮುಸೌಹಾರ್ದತೆ, ಸಹೋದರತ್ವ ಪುನರ್ ಸ್ಥಾಪಿಸಲು ಪಣತೊಡಬೇಕು. ಧಾರ್ಮಿಕ ಹಬ್ಬದ ಸಂದರ್ಭದಲ್ಲಿ ಉಭಯ ಧಾರ್ಮಿಕ ಮುಖಂಡರ ಸ್ನೇಹ ಸಂಗಮ ಕಾರ್ಯಕ್ರಮ ಏರ್ಪಡಿಸುವ ಮೂಲಕ ಧಾರ್ಮಿಕ ಸೌಹಾರ್ದ ಸಂದೇಶವನ್ನು ಸಾರಬಹುದು. ಯಾವುದೇ ಕೋಮು ಉದ್ರೇಕಾರಿ ಭಾಷಣಗಾರರಿಗೆ ಯಾವುದೇ ಕಾರ್ಯಕ್ರಮದಲ್ಲಿ ಅವಕಾಶ ನೀಡಬಾರದು ಮತ್ತು ಅವರಿಗೆ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಕೋಮು ಗಲಭೆ ನಡೆಸುವ ದುಷ್ಕರ್ಮಿಗಳ ಮೇಲೆ ತೀವ್ರ ನಿಗಾ ಇಡಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ನೈಜ ಆರೋಪಿಗಳಿಗೆ ಸಚಿವರಾಗಲಿ, ಶಾಸಕರಾಗಲಿ ಅಥವಾ ಪೋಲೀಸರಾಗಲಿ ಅಭಯ ಹಸ್ತ ನೀಡಬಾರದು ಮತ್ತು ಅಮಾಯಕ ಜನರನ್ನು ವಿನಾಕಾರಣ ಆರೋಪಿಗಳನ್ನಾಗಿ ಮಾಡಿ, ಅವರನ್ನು ಜೈಲು ಪಾಲು ಮಾಡುವ ಪದ್ಧತಿ ನಿಲ್ಲಬೇಕು. ಅವರ ಕುಟುಂಬದ ಜೀವನದ ಬಗ್ಗೆ ಕಿಂಚಿತ್ತಾದರೂ ಮಾನವೀಯತೆ ಇರಲಿ.

 

ಪ್ರತ್ಯೇಕವಾಗಿ ಇಂದಿನ ಕೋಮುಸಂಘರ್ಷಕ್ಕೆ ತುಪ್ಪ ಸುರಿಯುವ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಮೇಲೊಂದು ಕಣ್ಣಿಡಬೇಕು. ಇವುಗಳು ಬ್ರೇಕಿಂಗ್ ನ್ಯೂಸ್ ಮತ್ತು ಡಿಬೇಟ್’ಗಳನ್ನು ನಡೆಸುವ ಭರಾಟೆಯಲ್ಲಿ ,  TRP ಗೊಸ್ಕರ ತಮ್ಮ ಚಾನೆಲಿನಲ್ಲಿ ಮೊದಲು ಸುದ್ದಿ ಮಾಡಬೇಕು ಎನ್ನುವ ಪೈಪೋಟಿಯೊಂದಿಗೆ ಕೋಮುವಾದಿ ವರದಿಗಾರರು ಮತ್ತು ಕಾರ್ಯಕ್ರಮ ನಿರೂಪಕರು ಇಲ್ಲಸಲ್ಲದ ವಿಷಯಗಳನ್ನು ಪ್ರಸ್ತಾಪ ಮಾಡುತ್ತಾ ಒಂದು ಧರ್ಮ ಅಥವಾ ರಾಜಕೀಯ ಪಕ್ಷ , ಧಾರ್ಮಿಕ ಸಂಘಟನೆಗಳ ವಿರುದ್ಧ ಕಪೋಕಲ್ಪಿತ ವರದಿ ಮಾಡುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹದಗೆಡಲು ಮೂಲ ಕಾರಣವಾಗಿದೆ. ಅಲ್ಲದೇ ಸುಳ್ಳು ಸುದ್ದಿ, ನಿಂದನಾತ್ಮಕ ಪೋಸ್ಟ್ ಕಾಮೆಂಟ್’ಗಳಿಂದ ಇಂದು ವಿಜೃಂಭಿಸುತ್ತಿರುವ ಸಾಮಾಜಿಕ ಜಾಲತಾಣಗಳ ಅತಿಯಾದ ದುರ್ಬಳಕೆ ಇವುಗಳ ವಿರುದ್ಧ ಬಿಗಿಯಾದ ಕ್ರಮ ಪೋಲೀಸ್ ಮತ್ತು ಸರಕಾರ ಕೈಗೊಳ್ಳಬೇಕು. ಹಾಗಾದಾಗಲೇ ರಾಜ್ಯದಲ್ಲಿಯೂ, ದೇಶದಲ್ಲಿಯೂ ಶಾಂತಿ ನೆಲೆಸಲು ಸಾಧ್ಯ.

 

ಬರಹ : ಏ ಆರ್ ಎಮ್ ತುಂಬೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group