ಸುತ್ತ-ಮುತ್ತ

ಮಾದರಿ ಕಾರ್ಯಕ್ರಮದಲ್ಲಿ ತೊಡಗಿಸಿ, ಮಾನವೀಯತೆಗೆ ಸಾಕ್ಷಿಯಾದ ಬ್ಯಾರಿ ನಿಖಾಃ ಹೆಲ್ಪ್ ಲೈನ್

ವರದಿಗಾರ-ಮಂಗಳೂರು(ಜ.29) : ನಗರ ವ್ಯಾಪ್ತಿಯಲ್ಲಿ ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡವು ಅತ್ಯುನ್ನತ ಪರಿಶ್ರಮದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಜಾತಿ ಮತ ಭೇದವಿಲ್ಲದೇ ಲೇಡಿಗೋಷನ್ ಆಸ್ಪತ್ರೆಯಲ್ಲಿರುವ ಬಡ ಒಳ ರೋಗಿಗಳಿಗೆ ಹಾಗೂ ವೆನ್ಲಾಕ್ ಆಸ್ಪತ್ರೆ ಹೊರಭಾಗದಲ್ಲಿ ತಂಗಿರುವ ನಿರ್ಗತಿಕರಿಗೆ ಉಡುವ ವಸ್ತ್ರಗಳನ್ನು ತಂಡದ ವತಿಯಿಂದ ವಿತರಿಸಿ ಮಾನವೀಯತೆಗೆ ಸಾಕ್ಷಿಯಾಯಿತು.

ತಂಡದ ಸ್ಥಾಪಕರಾದ ರಾಶ್ ಬ್ಯಾರಿಯವರು ಸುಮಾರು ಒಂದೂವರೆ ವರ್ಷಗಳಿಂದ ಇಂತಹ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು 17 ಸದಸ್ಯರನ್ನೊಳಗೊಂಡ ಈ ತಂಡವು ಇದುವರೆಗೆ ನಗರದ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳಿಗೆ ಈ ಮೊದಲು ಬಟ್ಟೆಗಳನ್ನು ವಿತರಿಸಿದ್ದು ಅದಲ್ಲದೇ ನಗರ ವ್ಯಾಪ್ತಿಯ ಕೇರಿಗಳಲ್ಲಿ ವಾಸವಿರುವ ಸುಮಾರು 500 ಕ್ಕೂ ಮಿಕ್ಕಿದ ಬಡ ಜನರಿಗೆ ಬಟ್ಟೆಬರೆಗಳನ್ನು ವಿತರಿಸಿದೆ.

ಮಂಗಳೂರಿನ ಸಿಟಿ ಸೆಂಟರ್ ಶಾಪಿಂಗ್ ಮಾಲ್ ನಲ್ಲಿ ಕ್ಲೋತ್ ಬಾಕ್ಸನ್ನು ಸ್ಥಾಪಿಸುವುದರ ಮುಖಾಂತರ ಹಾಗೂ ಕೊಡುಗೈ ದಾನಿಗಳ ಸಹಕಾರದೊಂದಿಗೆ ಹೊಸ ಹಾಗೂ ಉತ್ತಮ ಬಟ್ಟೆ ಬರೆಗಳನ್ನು ಸಂಗ್ರಹಿಸುತ್ತಿರುವ ತಂಡವು ನವ ವಿವಾಹಿತರಾಗುವ ಆರ್ಥಿಕವಾಗಿ ಹಿಂದುಳಿದ ತೀರಾ ಬಡ ಕುಟುಂಬದ ದಂಪತಿಗಳಿಗೂ ಮದುವೆ ವಸ್ತ್ರಗಳನ್ನು ನೀಡುತ್ತಾ ಬಂದಿದೆ.

ಮಾತ್ರವಲ್ಲದೇ ವಧು ವರರನ್ನು ಸಂಪರ್ಕಿಸುವ ಕೊಂಡಿಯಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕಾರ್ಯ ನಿರ್ವಹಿಸುತ್ತಿದ್ದು ವಾಟ್ಸಾಪ್ ಗ್ರೂಪ್ ಮುಖಾಂತರ ಸುಮಾರು 120 ನವ ವಧುವಿಗೆ ಹಾಗೂ ಸರಿ ಸುಮಾರು 30 ವಿಧವೆಯರಿಗೆ ವರದಕ್ಷಿಣೆ ರಹಿತ ವೈವಾಹಿಕ ಜೀವನಕ್ಕೆ ಉತ್ತಮ ವರರನ್ನು ಹುಡುಕಿಕೊಡುವಲ್ಲಿ ತಂಡವು ಸಫಲವಾಗಿದೆ ಅದ್ಭುತ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಅಬಿನಂದನಾರ್ಹ.

ತಂಡವು ನಗರದ ಇನ್ನಷ್ಟು ಭಾಗಗಳಲ್ಲಿ ಕ್ಲೋತ್ ಬಾಕ್ಸನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದು ಇನ್ನಷ್ಟು ಕಾರ್ಯ ಚಟುವಟಿಕೆಗಳಲ್ಲಿ ಜಿಲ್ಲೆಯ ಹೃದಯವಂತ ನಾಗರಿಕರು ಬ್ಯಾರಿ ನಿಖಾಃ ಹೆಲ್ಪ್ ಲೈನ್ ತಂಡದ ಜೊತೆ ಕೈ ಜೋಡಿಸಬೇಕಾಗಿ ಅಪೇಕ್ಷಿಸುತ್ತಾ ಬಡ ಜನರು ಇದರ ಸದುಪಯೋಗವನ್ನು ಪಡೆಯಬೇಕಾಗಿ ತಂಡದ ಕಾರ್ಯದರ್ಶಿ ಮಜೀದ್ ಬಿಕರ್ನಕಟ್ಟೆ ವಿನಂತಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಏರಿಯಾ ಕಾರ್ಯದರ್ಶಿ ಗಳಾದ ಝೈನಿ ಬೊಳ್ಳಾಯಿ, ಸುಹೈಲ್ , ಆರಿಪ್, ಪೈರೊಝ್ ಮಂಗಳೂರು ಉಪಸ್ಥಿತಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group