ರಾಷ್ಟ್ರೀಯ ಸುದ್ದಿ

‘ನರೇಂದ್ರ ಮೋದಿ ಪಕೋಡಾ ಸ್ಟಾಲ್’ : ಪ್ರಧಾನ ಮಂತ್ರಿಯ ‘ಪಕೋಡಾ’ ಹೇಳಿಕೆಯ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ

ವರದಿಗಾರ( 27-01-2018): ಕೆಲವು ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಝೀ ಟಿವಿ ಚಾನೆಲ್ ನ ಸುಧೀರ್ ಚೌಧರಿಗೆ ನೀಡಿದ ಸಂದರ್ಶನದಲ್ಲಿ, ಉದ್ಯೋಗಾವಕಾಶಗಳ ಭರವಸೆ-ಸಾಧನೆಗಳ ಬಗ್ಗೆ ಮಾತನಾಡುತ್ತಾ “ಝೀ ಟಿವಿ ಕಚೇರಿ ಹೊರಗಡೆ ಪಕೋಡಾ ಮಾರಾಟ ಮಾಡುತ್ತಿರುವುದೂ ಒಂದು ರೀತಿಯ ಉದ್ಯೋಗವಲ್ಲವೇ?” ಎಂದು ಕೇಳಿದ್ದರು. ಈ ಹೇಳಿಕೆಯು ವಿರೋಧ ಪಕ್ಷಗಳು ಹಾಗೂ ಮೋದಿ ಬೆಂಬಲಿಗರನ್ನೊಳಗೊಂಡಂತೆ ಪ್ರಜ್ಞಾವಂತ ನಾಗರಿಕರಿಂದ ತೀವ್ರ ಟೀಕೆಗೀಡಾಗಿತ್ತು.

ಪ್ರಧಾನ ಮಂತ್ರಿಯ ‘ಪಕೋಡಾ’ ಹೇಳಿಕೆಯನ್ನು ವಿರೋಧಿಸಿ ಬಿ ಎಸ್ ಪಿ ಪಕ್ಷಕ್ಕೆ ಸೇರಿದ ದಲಿತ ನಾಯಕ ದೇವಾಶಿಷ್ ಜರಾರಿಯಾ ನೇತೃತ್ವದಲ್ಲಿ ಕೆಲವು ಯುವಕರು ಜನವರಿ 23ರಂದು ದೆಹಲಿಯ ಸಿಪಿ ಪ್ರದೇಶದಲ್ಲಿ ಪಕೋಡಾ ಮಾರಾಟ ಮಾಡಿದ್ದರು. ಇದರಿಂದ ಪ್ರೇರಿತರಾಗಿ ಇದೀಗ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ.

ಬೆಂಗಳೂರಿನ ಬಿಜೆಪಿ ಕಚೇರಿಯ ಬಳಿ ‘ನರೇಂದ್ರ ಮೋದಿ ಪಕೋಡಾ ಸ್ಟಾಲ್’ ಪ್ರತಿಭಟನೆಯ ಚಿತ್ರಗಳನ್ನು ಟ್ವೀಟ್ ಮಾಡಿದ ದಲಿತ ನಾಯಕ, ಶಾಸಕ ಜಿಗ್ನೇಶ್ ಮೇವಾನಿಯವರು ಈ ಪ್ರತಿಭಟನೆಯನ್ನು ದೇಶದಾದ್ಯಂತ ನಡೆಸುವಂತೆ ಕೇಳಿಕೊಂಡಿದ್ದಾರೆ.

“2014ರಲ್ಲಿ ‘ಚಾಯ್ ಪೆ ಚರ್ಚಾ’ ನರೇಂದ್ರ ಮೋದಿಯನ್ನು ಅಧಿಕಾರಕ್ಕೇರಿಸಿದ ಹಾಗೆಯೇ 2019ರಲ್ಲಿ ‘ಪಕೋಡಾ ಉದ್ಯೋಗ ಯೋಜನೆ’ಯು ಅವರನ್ನು ಅಧಿಕಾರದಿಂದ ಕೆಳಗಿಳಿಸಲಿದೆ” ಎಂದು ದೇವಾಶಿಷ್ ಜರಾರಿಯಾ ಟ್ವೀಟ್ ಮಾಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group