ವರದಿಗಾರ (ಜ 26): ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಸುಳ್ಳು ವರದಿ ನೀಡಿ ಭಾರಿ ಮುಖ ಭಂಗಕ್ಕೆ ತುತ್ತಾಗಿ ಕೆಲವು ದಿನಗಳು ಕಳೆಯುವ ಮೊದಲೇ ಅದೇ ರೀತಿಯ ಸುಳ್ಳು ವರದಿಯೊಂದನ್ನು ಮತ್ತೊಮ್ಮೆ ಅಮಿತ್ ಶಾ ರಾಜ್ಯದ ಜನತೆಯ ಮುಂದೆ ಓದಿರುವುದು ವಿಪರ್ಯಾಸವೇ ಸರಿ. ಅಲ್ಲದೇ ಯಾವುದೇ ಪ್ರಕರಣಗಳು ಇಲ್ಲದೆ ಇರುವ ಎಸ್ಡಿಪಿಐ ಪಕ್ಷದ ಎಲ್ಲಾ ಕೇಸ್ ಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ ಎಂಬ ಅಧಾರ ರಹಿತ ಹೇಳಿಕೆ ನೀಡಿರುವ ಅಮಿತ್ ಶಾ ಒಬ್ಬ ಮಹಾ ಸುಳ್ಳುಗಾರ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಟೀಕಿಸಿದ್ದಾರೆ. ಅಮಿತ್ ಶಾ ತನ್ನ ಸುಳ್ಳು ಹೇಳಿಕೆಯನ್ನು ಹಿಂಪಡೆಯದಿದ್ದಲ್ಲಿ ಕಾನೂನಿನ ಕ್ರಮವನ್ನು ಎದುರಿಸ ಬೇಕಾಗುತ್ತದೆ ಎಂದು ಹನ್ನಾನ್ ರವರು ತಿಳಿಸಿದ್ದಾರೆ.
ಮಹದಾಯಿ ಯೋಜನೆ ಜಾರಿ ಗೊಳಿಸುವುದರಲ್ಲಿ ವಿಫಲವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಹಾ ಮೋಸ ಮಾಡಿದೆ. ಇಂದು ಕನ್ನಡಿಗರು ನ್ಯಾಯಕ್ಕಾಗಿ ಬಂದ್ ಚಳುವಳಿ ಮಾಡುತ್ತಿದ್ದರೆ ಇತ್ತ ಬಿಜೆಪಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ಕಾರ್ಯಕ್ರಮ ಮಾಡಿರುವುದು ಅತ್ಯಂತ ಖಂಡನೀಯ. ಸೋಲಿನ ಭೀತಿಯಲ್ಲಿರುವ ಬಿಜೆಪಿ ನಾಯಕರು, ಎಸ್ಡಿಪಿಐ ಕುರಿತು ಸುಳ್ಳು ಭರಿತ, ಕಪ್ಪೋಲಕಲ್ಪಿತ ಮಾತುಗಳನ್ನು ಆಡುತ್ತಿರುವುದು ಜನರ ಗಮನ ಬೇರೆ ಕಡೆ ಸೆಳೆಯುವ ತಂತ್ರ ಅಲ್ಲದೇ ಮತ್ತೇನು ಅಲ್ಲ ಎಂಬುದಾಗಿ ಹನ್ನಾನ್ ರವರು ಅಭಿಪ್ರಾಯಿಸಿದ್ದಾರೆ. ಬಿಜೆಪಿ ಯ ಗೆಲುವಿಗೆ ಎಸ್ಡಿಪಿಐ ದೊಡ್ಡ ಅಡ್ಡಗಾಲಾಗಿದೆ ಎಂಬ ಸತ್ಯ ಗುಜರಾತಿನ ಚುನಾವಣೆಯಲ್ಲಿ ಅಮಿತ್ ಶಾ ಕಂಡಿದ್ದಾರೆ. ಈ ಭಯ ಬಿಜೆಪಿ ಗೆ ಸದಾ ಕಾಡಲಿದೆ ಎಂಬ ಸತ್ಯ ಯಾರಿಂದಲೂ ಮರೆ ಮಾಚುವುದಕ್ಕೆ ಸಾಧ್ಯವಿಲ್ಲ ಎಂದು ಹನ್ನಾನ್ ರವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
