Uncategorized

ಕರೆನ್ಸಿ ನೋಟ್ ಮುದ್ರಿಸುವ ಕಛೇರಿ ಅಧಿಕಾರಿಯಿಂದಲೇ ನೋಟ್ ಕಳ್ಳತನ ! ಆತನ ಬಳಿ ಇತ್ತು ಬರೋಬ್ಬರಿ 90 ಲಕ್ಷ !!

ವರದಿಗಾರ (ಜ 25 ) :  ಮಧ್ಯಪ್ರದೇಶದ ದೇವಸ್ ನಲ್ಲಿರುವ ಅತಿ ಉನ್ನತ ಮಟ್ಟದ ಭದ್ರತೆಯನ್ನು ಹೊಂದಿರುವ ಬ್ಯಾಂಕ್ ನೋಟ್ ಪ್ರೆಸ್ (BNP) ನ ಅಧಿಕಾರಿಯಾಗಿರುವ ಮನೋಹರ್ ವರ್ಮಾ ಎನ್ನುವಾತ ತಾನು ಕೆಲಸ ನಿರ್ವಹಿಸುತ್ತಿದ್ದ ಕಛೇರಿಯಿಂದಲೇ ಪ್ರತಿ ದಿನ ಕರೆನ್ಸಿಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದನೆನ್ನಲಾಗಿದ್ದು, ಇದೀಗ ಆತನನ್ನು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ಸೆರೆ ಹಿಡಿಯಲಾಗಿದೆ. ಆತನ ಬಳಿ ಒಟ್ಟು 90, 93,000 ರೂಪಾಯಿಗಳ 500 ಹಾಗೂ 200 ರ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಅತಿ ಸೂಕ್ಷ್ಮ ಭದ್ರತೆಗಳನ್ನು ಹೊಂದಿದ್ದರೂ ಚಾಣಾಕ್ಷನಾಗಿದ್ದ ಮನೋಹರ್ ವರ್ಮಾ ತನ್ನ ಶೂ ಹಾಗೂ ಸಾಕ್ಸ್’ಗಳೊಳಗೆ ಪ್ರತಿ ದಿನ ನಿಯಮಿತವಾಗಿ ಕರೆನ್ಸಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಇದರಿಂದ ಭದ್ರತಾ ತಪಾಸಣೆಯ ವೇಳೆ ಕೂಡಾ ಆತ ಸಿಕ್ಕಿ ಹಾಕಿಕೊಂಡಿರಲಿಲ್ಲವೆನ್ನಲಾಗಿದೆ. ಇದಕ್ಕಾಗಿ ಆತ ತನ್ನ ಕಾಲಿನ ಅಳತೆಗಿಂತಲೂ ದೊಡ್ಡದಾದ ಶೂ ಒಂದನ್ನು ಧರಿಸಿಕೊಂಡು ಬರುತ್ತಿದ್ದ ಎಂದು ಕಛೇರಿಯ ಉದ್ಯೋಗಿಗಳು ತಿಳಿಸಿದ್ದಾರೆ. ಆ ಮೂಲಕ ಶೂನಲ್ಲಿ ಹೆಚ್ಚು ಹೆಚ್ಚು ಕರೆನ್ಸಿಗಳನ್ನು ಹಾಕಲು ಆತನಿಗೆ ಸಾಧ್ಯವಾಗುತ್ತಿತ್ತು.

1984 ರಲ್ಲಿ ಬ್ಯಾಂಕ್ ನೋಟ್ ಪ್ರೆಸ್ಸಿನಲ್ಲಿ ಕೆಳಹಂತದ ಕ್ಲರ್ಕ್ ಆಗಿ ಸೇರಿದ್ದ ಮನೋಹರ್ ವರ್ಮಾ ನಂತರ ಹಿರಿಯ ಅಧಿಕಾರಿಯಾಗಿ ಭಡ್ತಿ ಹೊಂದಿ, ಮೂರು ತಿಂಗಳ ಹಿಂದೆ ತಿರಸ್ಕೃತ ನೋಟುಗಳ ವಿಭಾಗಕ್ಕೆ ನೇಮಕಗೊಂಡಿದ್ದ. ತಿರಸ್ಕೃತ ನೋಟುಗಳನ್ನಿಟ್ಟ ಪೆಟ್ಟಿಗೆಗಳ ಬಳಿ ಅನುಮಾನಾಸ್ಪದವಾಗಿ ಸುಳಿದಾಡುತ್ತಿದ್ದ ಈತನ ವರ್ತನೆಗಳಿಂದ ಸಂಶಯಗೊಂಡ ಹಿರಿಯ ಅಧಿಕಾರಿಗಳು ಸಿಸಿಟಿವಿ ಮುಖಾಂತರ ಈತನ ಚಲನವಲನಗಳ ಮೇಲೊಂದು ಕಣ್ಣಿಟ್ಟಿದ್ದರು. ಕಳೆದ ಶುಕ್ರವಾರ ಆತ ತನ್ನ ಕೆಲಸ ಮುಗಿಸಿಕೊಂಡು ಹೊರ ಹೋಗುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಆತನನ್ನು ಪರಿಶೀಲಿಸಿದಾಗ ಆತನ ಶೂನೊಳಗೆ ಬಚ್ಚಿಟ್ಟುಕೊಂಡಿದ್ದ 200 ರ ಮುಖ ಬೆಲೆಯ 40,000 ರೂಪಾಯಿಗಳೊಂದಿಗೆ ಆತನನ್ನು ಬಂಧಿಸಲಾಗಿದೆ. ಕೂಡಲೇ ಸಾಕೇತ್ ನಗರದಲ್ಲಿರುವ ಮನೋಹರ್ ವರ್ಮಾನ ಮನೆಗೆ ದಾಳಿ ಮಾಡಿದ ಎಎಸ್ಪಿ ಅನಿಲ್ ಪಾಟೀದಾರ್ ನೇತೃತ್ವದ ಪೊಲೀಸ್ ತಂಡ, ಆತನ ಮನೆಯಲ್ಲಿ 64,00,000 ಹಾಗೂ 26,93,000 ರೂಗಳಿರುವ ಎರಡು ಬ್ಯಾಗುಗಳನ್ನು ವಶಪಡಿಸಿಕೊಂಡಿದ್ದಾರೆ.

ಮುದ್ರಣದ ವೇಳೆ ಉಂಟಾಗುವ ಸಣ್ಣ ಮಟ್ಟದ ದೋಷಗಳುಳ್ಳ ನೋಟುಗಳನ್ನು ತಿರಸ್ಕೃತ ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಿರ್ದಿಷ್ಟ ಸಮಯದ ಬಳಿಕ ಅವುಗಳೆಲ್ಲವನ್ನು ನಾಶಪಡಿಸಲಾಗುತ್ತದೆ. ತಿರಸ್ಕೃತ ನೋಟುಗಳ ಕುರಿತು ಯಾವುದೇ ದಾಖಲಾತಿಗಳಿಲ್ಲದಿರುವುದರಿಂದ ಆರೋಪಿಗೆ ತನ್ನ ಕೃತ್ಯ ನಡೆಸಲು ಬಹಳ ಸುಲಭವಾಗುತ್ತಿತ್ತು, ಮಾತ್ರವಲ್ಲ ಮುದ್ರಣ ದೋಷಗಳು ಬಹಳ ಸಣ್ಣ ಮಟ್ಟದ್ದಾಗಿರುವುದರಿಂದ ಅವುಗಳನ್ನು ಮಾರುಕಟ್ಟೆಯಲ್ಲಿ ಚಲಾಯಿಸುವುದು ಕೂಡಾ ಕಷ್ಟವಿರಲಿಲ್ಲ.

ನೋಟುಗಳೊಂದಿಗೆ ಸಿಕ್ಕಿಬಿದ್ದ ವೀಡಿಯೋ ವೀಕ್ಷಿಸಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group