ವರದಿಗಾರ (ಜ 25 ) : ತಲೆಗೆ ಹೊಯ್ದ ನೀರು ಕಾಲಿಗೆ ಬರಲೇ ಬೇಕೆಂಬ ನಿಯಮದಂತೆ ಯುಪಿಎ ಆಡಳಿತ ಕಾಲದಲ್ಲಿ ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ಟ್ವೀಟ್ ಮಾಡಿದ್ದ ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಲವೀಯ ಅವರು, ನಂತರ ಬಿಜೆಪಿ ಆಡಳಿತದಲ್ಲಿ ಪೆಟ್ರೋಲ್ ಬೆಲೆಯೇರಿಕೆ ಆದಾಗ, ನಾವು ಖರೀದಿಸುವ ಪೆಟ್ರೋಲ್ ನಮ್ಮ ದೇಶ ನಿರ್ಮಾಣಕ್ಕೆ ಸಹಾಯಕವಾಗುತ್ತದೆ ಎಂಬ ಟ್ವೀಟ್ ಮಾಡಿದ್ದರು. ನೆಟಿಝೆನ್ ಗಳು ಮಾಲವೀಯ ಅವರ ಹಳೆಯ ಎರಡೂ ಟ್ವೀಟ್ ಗಳನ್ನು ಇದೀಗ ಜಾಲತಾಣದಲ್ಲಿ ವೈರಲ್ ಮಾಡಿದ್ದು, ತೈಲ ಬೆಲೆಯೇರಿಕೆಯ ಬಗ್ಗೆ ಬಿಜೆಪಿಗರ ದ್ವಂದ್ವ ನಿಲುವುಗಳ ನಿಜ ಬಣ್ಣ ಬಯಲು ಮಾಡಿದ್ದಾರೆ.
2011ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಅವಧಿಯಲ್ಲಿ ಪೆಟ್ರೋಲ್ ಬೆಲೆಯೇರಿಕೆ ಮಾಡಿದ್ದಾಗ, ಅಮಿತ್ ಮಾಲವೀಯ ಟ್ವೀಟ್ ಒಂದನ್ನು ಮಾಡಿದ್ದರು. ಅದೆಂದರೆ, ‘ನಾವು ಖರೀದಿಸುವ ಪ್ರತಿ ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಗೆ 50 ಶೇಖಡಾ ತೆರಿಗೆ ಪಾವತಿ ಮಾಡುತ್ತೇವೆ. ಜನಸಾಮಾನ್ಯರಿಗೆ ಬೆಲೆಯೇರಿಕೆ ಹೊರೆಯಾಗದಂತೆ ತಡೆಯಲು ಈ ತೆರಿಗೆಯನ್ನು ಕಡಿತಗೊಳಿಸಬೇಕಾಗಿದೆ‘ ಎಂದವರು ಸರಕಾರವನ್ನು ಆಗ್ರಹಿಸಿದ್ದರು. ಆದರೆ ನಂತರದ ಬಿಜೆಪಿ ನೇತೃತ್ವದ ಸರಕಾರದ ಆಡಳಿತದಲ್ಲಿ ಇಂದು ಪೆಟ್ರೋಲ್ ಅತಿ ದುಬಾರಿ ಮಟ್ಟ ಅಂದ್ರೆ, ಲೀಟರಿಗೆ 80 ರೂ ವರೆಗೆ ತಲುಪಿದೆ. ಈ ಕುರಿತು ಯಾವುದೇ ಬಿಜೆಪಿಗರು ಧ್ವನಿ ಎತ್ತುತ್ತಿಲ್ಲ. ಆದರೆ 2017 ರಲ್ಲಿ ಬಿಜೆಪಿ ಅಧಿಕಾರವಧಿಯಲ್ಲಿ ಪೆಟ್ರೋಲ್ ಬೆಲೆಯೇರಿಕೆಯಾದಾಗ ಇದೇ ಅಮಿತ್ ಮಾಲವೀಯ ಅವರು ಟ್ವಿಟ್ಟರ್ ನಲ್ಲಿ, ‘ನೀವು ಪ್ರತಿ ಬಾರಿ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಿದಾಗ, ರಾಷ್ಟ್ರ ನಿರ್ಮಾಣಕ್ಕೆ ನೀವು ಸಹಾಯ ಮಾಡಿದಂತಾಗುತ್ತದೆ. ಬೆಲೆಯೇರಿಕೆಯು ಸಂವೇದನಾಶೀಲವಾಗಿರುತ್ತದೆ ಮತ್ತು ಸರಾಗವಾಗಿಸುತ್ತದೆ‘ ಎಂಬರ್ಥದ ಟ್ವೀಟ್ ಮಾಡಿದ್ದರು. ಇವೆರಡು ಟ್ವೀಟ್ ಗಳು ಈಗ ವೈರಲ್ ಆಗುತ್ತಿದೆ ಮತ್ತು ಬಿಜೆಪಿಗರ ನಿಜ ಬಣ್ಣವನ್ನು ಬಯಲು ಮಾಡುತ್ತಿದೆ.
2013 ರಲ್ಲಿ ಒಮ್ಮೆ ಪೆಟ್ರೋಲ್ ಬೆಲೆಯೇರಿಕೆ ನಡೆದಾಗಲೂ, ಅಮಿತ್ ಮಾಲವೀಯ ‘ದೇಶ ಮುನ್ನಡೆಸಲು ಆಗದಿದ್ದರೆ ತೊಲಗಿ’ ಎಂದು ಯುಪಿಎ ಸರಕಾರಕ್ಕೆ ಕರೆ ಕೊಟ್ಟಿದ್ದರು. ಇದೀಗ ಸ್ವಂತ ಪಕ್ಷದ ಸರಕಾರವಿರುವಾಗ ಈ ಕುರಿತು ಸುಮ್ಮನಿದ್ದು ತಮ್ಮ ಪಕ್ಷದ ದ್ವಂದ್ವ ನಿಲುವುಗಳಿಗೆ ಸಾಕ್ಷಿಯಾಗಿದ್ದಾರೆ.
Desh nahin chala sakte to quit ! RT @PTI_News: Petrol prices hiked by Rs 1.55 per litre with effect from from midnight tonight.
— Amit Malviya (@malviyamit) July 14, 2013
