ರಾಷ್ಟ್ರೀಯ ಸುದ್ದಿ

ತಮ್ಮದೇ ಕಾರ್ಯಕರ್ತನ ಕಾರಿಗೆ ಬೆಂಕಿ ಕೊಟ್ಟು ಕೈ ಸುಟ್ಟುಕೊಂಡ ಕರ್ಣಿ ಸೇನೆಯ ದುಷ್ಕರ್ಮಿಗಳು !

ವರದಿಗಾರ(24-01-2018): ಭೋಪಾಲದಲ್ಲಿ ಹಿಂಸಾಚಾರ ನಡೆಸುತ್ತಿದ್ದ ಕರ್ಣಿ ಸೇನೆಯ ಭಯೋತ್ಪಾದಕರು ಅರಿವಿಲ್ಲದೆ ತಮ್ಮದೇ ಸಹ ಕಾರ್ಯಕರ್ತನೊಬ್ಬನ ಕಾರಿಗೆ ಬೆಂಕಿ ಹಚ್ಚಿದ ಘಟನೆ ಬೆಳಕಿಗೆ ಬಂದಿದೆ.

ಪದ್ಮಾವತ್ ಚಲನಚಿತ್ರ ಪ್ರದರ್ಶನದ ವಿರುದ್ಧ ಕರ್ಣಿ ಸೇನೆ ಹಾಗೂ ಇನ್ನಿತರ ಕೆಲವು ಸಂಘಟನೆಗಳು ಭೋಪಾಲದ ಜ್ಯೋತಿ ಟಾಕೀಸ್ ಇಂಟರ್ ಸೆಕ್ಷನ್ ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರು. ಕೆಲವೇ ಕ್ಷಣಗಳಲ್ಲಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿತು. ಅಲ್ಲೇ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಮಾರುತಿ ಸ್ವಿಫ್ಟ್ ಕಾರಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದರು. ನಂತರ ಬೆಂಕಿ ಹಚ್ಚಲಾದ MP 04 HC 9653 ನಂಬರಿನ ಕಾರು ಸುರೇಂದ್ರ ಸಿಂಗ್ ಚೌಹಾನ್ ಎಂಬ ಕರ್ಣಿ ಸೇನೆಯ ಕಾರ್ಯಕರ್ತನಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಹಿಂದೂ ಜಾಗರಣ ಮಂಚ್ ನ ಸದಸ್ಯರೂ ಹಿಂಸಾಚಾರ ನಿರತ ದುಷ್ಕರ್ಮಿಗಳೊಂದಿಗೆ ಕೈಜೋಡಿಸಿ ಬಿಜೆಪಿ ನಾಯಕರು ಹಾಗೂ ಮಂತ್ರಿಗಳ ಪೋಸ್ಟರ್ ಗಳನ್ನು ಹರಿದು ಹಾಕಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸುಮಾರು 10-12 ಮಂದಿಯನ್ನು ಎಂಪಿ ನಗರ ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದರು. ಠಾಣೆಯನ್ನು ಸುತ್ತುವರಿದ ಕರ್ಣಿ ಸೇನೆಯ ಕಾರ್ಯಕರ್ತರು, ಕಾರಿನ ಯಜಮಾನ ದೂರು ನೀಡದ ಕಾರಣ ಕೇಸು ದಾಖಲಿಸಬಾರದೆಂದು ಬೇಡಿಕೆಯಿತ್ತರು.

ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group