ವರದಿಗಾರ ದಮ್ಮಾಮ್ (ಜ 24) : ಹಿರಿಯ ಸಾಮಾಜಿಕ, ಧಾರ್ಮಿಕ ಮುಂದಾಳು, ಅಹಿಂದ ಮುಖಂಡ ಹಾಗೂ ಶೋಷಿತ ಸಮುದಾಯದ ಧ್ವನಿಯಾಗಿದ್ದ ಹಾಜಿ ಹಮೀದ್ ಖಂದಕ್ ರವರ ಅಕಾಲಿಕ ನಿಧನಕ್ಕೆ ದಮ್ಮಾಮ್ ಇಂಡಿಯನ್ ಸೋಷಿಯಲ್ ಫೋರಂ, ಕರ್ನಾಟಕ ಘಟಕ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಪ್ರಭಾವೀ ವ್ಯಕ್ತಿಯಾಗಿ ತನ್ನ ಜೀವನದುದ್ದಕ್ಕೂ ಅಲ್ಪಸಂಖ್ಯಾತರ ದಮನಿತರ ಹಾಗೂ ಹಿಂದುಳಿದ ವರ್ಗದ ಪರ ನಿಷ್ಟುರವಾಗಿ ಧ್ವನಿಯೆತ್ತಿದ್ದ ಹಮೀದ್ ಖಂದಕ್ ರವರ ಮರಣ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು , ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೂ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂದು ದಮ್ಮಾಮ್ ಇಂಡಿಯನ್ ಸೋಷಿಯಲ್ ಫೋರಂ, ಕರ್ನಾಟಕ ಘಟಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Indian Social Forum, Karnataka
Eastern Provicne
