ರಾಷ್ಟ್ರೀಯ ಸುದ್ದಿ

ಕತಾರ್ ಫಿಫಾ ವಿಶ್ವಕಪ್ ನ ಭದ್ರತೆಗಾಗಿ ಮುಂಬೈ 26/11 ರ ದಾಳಿಯನ್ನು ಹಿಮ್ಮೆಟ್ಟಿಸಿದ ಭಾರತದ ವೀರ ಯೋಧರು !!

ವರದಿಗಾರ (ಜ 24 ) : 2022 ರಲ್ಲಿ ಕತಾರ್ ನಲ್ಲಿ ನಡೆಯುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಪ್ರಾಯೋಜಕರು ಅಲ್ಲಿನ ಭದ್ರತೆಯನ್ನು ನೋಡಿಕೊಳ್ಳಲು, 2008ರ 26/11 ಮುಂಬೈ ಭಯೋತ್ಪಾದಕ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಭಾರತೀಯ ವೀರ ಯೋಧರ ಕಮಾಂಡೋ ಪಡೆಯ ಮುಖ್ಯಸ್ಥರು ಹಾಗೂ ಸರಕಾರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹಾ ವಿಚಾರವಾಗಿದೆ.

ಇದಕ್ಕೆ ಸ್ಪಂದಿಸಿರುವ  ಭಾರತದ ಗೃಹ ಇಲಾಖೆ, ಭಾರತದ ವಿವಿಧ ಭಾಗಗಳ 20 ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಇವರೆಲ್ಲರೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಕತಾರ್ ರಾಜಧಾನಿ ದೋಹಾದಲ್ಲಿ ನಡೆಯುವ ಮೊದಲ ಭದ್ರತಾ ಸೆಮಿನಾರ್ ನಲ್ಲಿ ಭಾಗವಹಿಸಲಿದ್ದಾರೆ.  ಫಿಫಾದಿಂದ ಈ ಕುರಿತಾಗಿನ ವಿನಂತಿ ಬಂದ ನಂತರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ತಮ್ಮ ರಾಜ್ಯದ ಸೂಕ್ತ ಅಧಿಕಾರಿಗಳನ್ನು ಇದಕ್ಕಾಗಿ ನಾಮನಿರ್ದೇಶನ ನೀಡುವಂತೆ ಕೇಳಿಕೊಳ್ಳಲಾಗಿದೆ. “ಇದು ನಮಗೆ ದೊರೆತ ಗೌರವಾಗಿದೆ. ನಮ್ಮೆಲ್ಲಾ ಅಧಿಕಾರಿಗಳಿಗೆ ಈ ಮೂಲಕ ಉತ್ತಮ ಅನುಭವ ದೊರಕಲಿದೆ” ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ದಾಳಿಯ ವೇಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮಹಾರಾಷ್ಟ್ರ ಪೊಲೀಸ್ ಹಾಗೂ ಕಮಾಂಡೋ ಪಡೆಯ ಎಸ್ಪಿ ಮತ್ತು ಡಿಐಜಿ ರ‍್ಯಾ0ಕಿನ ಅಧಿಕಾರಿಗಳನ್ನು ನಾಮನಿರ್ದೇಶನದಲ್ಲಿ ಸೇರಿಸುವಂತೆ ಕೇಳಿಕೊಳ್ಳಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group