ರಾಷ್ಟ್ರೀಯ ಸುದ್ದಿ

4% ರಾಜಪೂತರು ‘ಪದ್ಮಾವತ್’ ವಿರುದ್ಧ ಹೋರಾಡಬಹುದಾದರೆ, 14% ಮುಸ್ಲಿಮರು ಶರೀಅತ್’ಗಾಗಿ ಯಾಕೆ ಹೋರಾಡುವುದಿಲ್ಲ?: ಅಸದುದ್ದೀನ್ ಒವೈಸಿ

ವರದಿಗಾರ(24.01.2018): ಎಐಎಮ್ ಐಎಮ್ ನಾಯಕ ಅಸದುದ್ದೀನ್ ಒವೈಸಿ, ಮುಸ್ಲಿಮರಿಗೆ ರಾಜಪೂತರ ‘ಸಂಸ್ಕೃತಿ ರಕ್ಷಣೆಗಾಗಿರುವ ಹೋರಾಟವನ್ನು’ ನೋಡಿ ಕಲಿಯುವಂತೆ ಕರೆ ನೀಡಿದ್ದಾರೆ.

“ಚಿತ್ರದಲ್ಲಿ ಅವರ ರಾಣಿಯನ್ನು ಅವಮಾನಿಸಲಾಯಿತೆಂದು 4% ರಾಜಪೂತರು ಚಲನಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲವೆಂದು ಹೇಳಿ ಹೋರಾಟಕ್ಕಿಳಿದರು. ಚಲನಚಿತ್ರ ಮಂದಿರಗಳನ್ನು ನಾಶಪಡಿಸುತ್ತೇವೆ, ನಟಿಯ ಮೂಗನ್ನು ಕತ್ತರಿಸುತ್ತೇವೆ, ನಿರ್ದೇಶಕನ ತಲೆ ಕಡಿಯುತ್ತೇವೆ, ಆದರೂ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅವರು ಇರುವುದು ಕೇವಲ 4%, ನಾವು 14% ಇದ್ದೇವೆ. ಅವರ ಬೇಡಿಕೆಗಳು ಈಡೇರುತ್ತಿವೆ, ನಾವು ಇನ್ನೂ ಅಸಹಾಯಕರಾಗಿದ್ದೇವೆ” ಎಂದು ಒವೈಸಿ ಹೇಳಿದರು.

ರಾಜಪೂತರು ಮುಸ್ಲಿಮರಿಗೆ ಕನ್ನಡಿ ತೋರಿಸಿದ್ದಾರೆ. ಇದು ಅವರ ಕೋಪ, ಸಾಮರ್ಥ್ಯ. ಹೆಸರನ್ನು ಬದಲಿಸಿದರೂ ಚಲನಚಿತ್ರ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಶರೀಅತ್’ನ ರಕ್ಷಣೆಗೆ ನಾವೇನು ಮಾಡುತ್ತಿದ್ದೇವೆ ಎಂದು ಒವೈಸಿ ಪ್ರಶ್ನಿಸಿದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group