ಜಿಲ್ಲಾ ಸುದ್ದಿ

ಮಧ್ಯರಾತ್ರಿಯಲ್ಲೂ ‘ಜನಪ್ರತಿನಿಧಿ’ ಮೊಯಿದಿನ್ ಬಾವಾರ ಮಾದರಿ ಜನಸೇವೆ !

ವರದಿಗಾರ (ಜ 23 ) : ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದಿನ್ ಬಾವ ಪ್ರತಿಯೊಂದರಲ್ಲೂ ತನ್ನ ವ್ಯತ್ಯಸ್ಥ ಕಾರ್ಯಶೈಲಿಗೆ ಹೆಸರು ವಾಸಿಯಾದವರು. ಶಾಸಕರ ಅನುದಾನದಡಿಯಲ್ಲಿ ತನ್ನ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಬಾವಾರವರ ಸಮಾಜಮುಖಿ ವ್ಯಕ್ತಿತ್ವವನ್ನು ಜನರಿಗೆ ಪರಿಚಯಿಸುತ್ತದೆ. ಅದರೊಂದಿಗೆ ಕೆಲವೊಮ್ಮೆ ತನ್ನ ಮಾನವೀಯ ಕೆಲಸ ಕಾರ್ಯಗಳಿಗೂ ಜನರಿಗೆ ಅಚ್ಚುಮೆಚ್ಚಿನ “ಬಾವಾಕ” ಆಗುತ್ತಾರೆ. ಅಂತಹದ್ದೇ ಘಟನೆಯೊಂದು ನಿನ್ನೆ ರಾತ್ರಿ ಪಣಂಬೂರು ಎಂ ಸಿ ಎಫ್ ಸಮೀಪ ನಡೆದಿದ್ದು, ಮೊಯಿದಿನ್ ಬಾವಾರವರ ತಕ್ಷಣದ ಸ್ಪಂದನೆಗೆ ಜನ ಮತ್ತೊಮ್ಮೆ ಭೇಷ್ ಎಂದಿದ್ದಾರೆ.

ತನ್ನ ದೈನಂದಿನ ರಾಜಕೀಯ ಚಟುವಟಿಕೆಯ ಕಾರ್ಯಕ್ರಮಗಳನ್ನು ಮುಗಿಸಿ, ಮಧ್ಯ ರಾತ್ರಿ 12ರ ವೇಳೆಗೆ ಮನೆಯ ಕಡೆಗೆ ಪ್ರಯಾಣಿಸುತ್ತಿದ್ದ ಶಾಸಕ ಮೊಯಿದಿನ್ ಬಾವಾ, ಪಣಂಬೂರು ಎಂ ಸಿ ಎಫ್ ಸಮೀಪ ಕಾರೊಂದು ಅಲ್ಲಿನ ರೈಲ್ವೇ ತಡೆ ಗೇಟ್ ಗೆ ಡಿಕ್ಕಿಯಾಗಿ ನಿಂತಿರುವುದನ್ನು ಕಂಡಿದ್ದಾರೆ. ಅಪಘಾತದ ಆಘಾತಕ್ಕೆ ಸಿಲುಕಿ ಏನೂ ಮಾಡಲು ತೋಚದೆ ಕಾರಿನಲ್ಲಿದ್ದ ಕುಟುಂಬಕ್ಕೆ ಕೂಡಲೇ ಶಾಸಕ ಮೊಯಿದಿನ್ ಬಾವಾ ಆಸರೆಯಾಗಿದ್ದಾರೆ. ಅಪರೂಪಕ್ಕೊಮ್ಮೆ ಹಾಕುವ ಎಂ ಸಿ ಎಫ್ ರೈಲ್ವೇ ಗೇಟ್ ಗೆ ಪಡೀಲ್ ನಿವಾಸಿಗಳು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ಶಾಸಕರು ಆ ದಾರಿಯಾಗಿ ಬರುವ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಕೂಡಲೇ ಶಾಸಕರು ಗಾಯಾಳುಗಳನ್ನು ತನ್ನ ಆಪ್ತರ ಕಾರಿನ ಮೂಲಕ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರಲ್ಲದೆ, ಪೊಲೀಸ್ ಅಧಿಕಾರಿಗಳು ಹಾಗೂ ಎಂ ಸಿ ಎಫ್ ಮುಖ್ಯಸ್ಥರನ್ನು ಘಟನಾ ಸ್ಥಳಕ್ಕೆ ಕರೆಸಿ, ಘಟನೆಯ ಕುರಿತು ವಿವರಿಸಿ ಮುಂದಿನ ವ್ಯವಸ್ಥೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಮತ್ತೊಮ್ಮೆ ಜನರ ಪಾಲಿಗೆ ನೈಜ “ಜನಸೇವಕ”ರಾಗಿ ಗುರುತಿಸಲ್ಪಟ್ಟರು

ಮೋದಿ ಸರಕಾರವು ರೈತ ವಿರೋಧಿಯೇ?

This poll has been finished and no longer available to vote !

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group