ರಾಷ್ಟ್ರೀಯ ಸುದ್ದಿ

ಸುಪ್ರೀಮ್ ಕೋರ್ಟಿನಲ್ಲಿ NIA ಗೆ ಮುಖಭಂಗ : ಹಾದಿಯಾಳ ಮದುವೆಯಲ್ಲಿ ಮಧ್ಯಪ್ರವೇಶಿಸಲು ಯಾರಿಗೂ ಹಕ್ಕಿಲ್ಲ

ವರದಿಗಾರ (ಜ 23) : ‘ಲವ್ ಜಿಹಾದ್’ ಎಂಬ ಅಸ್ತಿತ್ವದಲ್ಲಿಲ್ಲದ ಆರೋಪ ಹೊರಿಸಿ ಒಂದು ಹಂತದಲ್ಲಿ ಕೇರಳ ಹೈಕೋರ್ಟ್ ಮದುವೆಯನ್ನೇ ರದ್ದುಪಡಿಸಿದ್ದ ಕೇರಳದ ಹಾದಿಯಾ ಎಂಬ ವೈದ್ಯಕೀಯ ವಿದ್ಯಾರ್ಥಿನಿಯ ವೈಯುಕ್ತಿಕ ತೀರ್ಮಾನದಲ್ಲಿ ಮಧ್ಯಪ್ರವೇಶಿಸಲು ಯಾರಿಗೂ ಹಕ್ಕಿಲ್ಲ ಮಾತ್ರವಲ್ಲ NIA ಈ ಮದುವೆಯ ನ್ಯಾಯಸಮ್ಮತತೆಯ ಕುರಿತು ತನಿಖೆ ನಡೆಸುವ ಅಗತ್ಯವೂ ಇಲ್ಲವೆಂದು ಸುಪ್ರೀಮ್ ಕೋರ್ಟ್ ಇಂದಿಲ್ಲಿ ಹೇಳಿದೆ. ಆ ಮೂಲಕ ಅನಗತ್ಯವಾಗಿ ಈ ವಿಷಯದಲ್ಲಿ ಮೂಗು ತೂರಿಸಿದ್ದ ರಾಷ್ಟ್ರೀಯ ತನಿಖಾ ದಳಕ್ಕೆ ( NIA) ತೀವ್ರ ಮುಖಭಂಗವಾದಂತಾಗಿದೆ.

ಕೇರಳ ಹೈಕೋರ್ಟ್ ರದ್ದುಗೊಳಿಸಿದ್ದ ತನ್ನ ಮದುವೆಯ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದ ಹಾದಿಯಾಳ ಗಂಡ ಶಫಿನ್ ಜಹಾನ್ ಅರ್ಜಿಗೆ ಉತ್ತರಿಸುತ್ತಿದ್ದ ಸುಪ್ರೀಮ್ ಕೋರ್ಟ್ ನ್ಯಾಯಪೀಠ, ‘ಪ್ರೌಢ ಯುವತಿಯೋರ್ವಳನ್ನು ಅವಳ ಪೋಷಕರೊಂದಿಗಿರಲು ಯಾರೂ ಒತ್ತಾಯಪಡಿಸುವಂತಿಲ್ಲ. ಅದನ್ನು ನಿರ್ಧರಿಸುವ ಹಕ್ಕು ಹಾದಿಯಾಳಿಗೆ ಮಾತ್ರ ಇರುವುದು’ ಎಂದಿದೆ.

‘ಇಬ್ಬರು ಪ್ರೌಢ ಯುವಕ ಹಾಗೂ ಯುವತಿಯರು ತಮ್ಮ ಒಪ್ಪಿಗೆಯ ಮೂಲಕ ಆದ ಮದುವೆಯನ್ನು ಕೋರ್ಟ್ ರದ್ದುಪಡಿಸಲು ಸಾಧ್ಯವೇ ? ನಾವು ಈ ಒಂದು ಪ್ರಶ್ನೆಯನ್ನಿಟ್ಟುಕೊಂಡು ಮಾತ್ರ ವ್ಯವಹರಿಸೋಣ’ ಎಂದು ನ್ಯಾಯಪೀಠ ತನ್ನ ಹೇಳಿಕೆಯಲ್ಲಿ ಸೇರಿಸಿದೆ. ಇದರ ವಿಚಾರಣೆಯು ಫೆಬ್ರವರಿ 22 ರಂದು ಸುಪ್ರೀಮ್ ಕೋರ್ಟಿನಲ್ಲಿ ನಡೆಯಲಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group