ರಾಷ್ಟ್ರೀಯ ಸುದ್ದಿ

ಗೋರಖ್’ಪುರ ದುರಂತ: ಯೋಗಿಯ ಸ್ವಚ್ಚ ಉತ್ತರಪ್ರದೇಶವೆಂಬ ಹೊಸ ವರಸೆ

ವರದಿಗಾರ-ರಾಜಕೀಯ ವಿಮರ್ಶೆ: ಗೋರಖ್’ಪುರದಲ್ಲಿ ಆಕ್ಸಿಜನ್ ಇಲ್ಲದೆ 100 ಕ್ಕಿಂತಲೂ ಹೆಚ್ಚು ಹಸುಳೆಗಳು ಮರಣವನ್ನಪ್ಪಿದ ಘಟನೆಯ ಹಳಿ ತಪ್ಪಿಸಲು ಮತ್ತು ಅದರ ನೈಜ ಕಾರಣವನ್ನು ಮರೆಮಾಚಲು ಹಲವಾರು ಪ್ರಯತ್ನಗಳ ಮಧ್ಯೆಯೂ ಗೋರಖ್’ಪುರ ಜಿಲ್ಲಾಮ್ಯಾಜಿಸ್ಟ್ರೇಟ್, ಮರಣಗಳು ಆಕ್ಸಿಜನ್ ಕೊರತೆಯಿಂದಲೇ ಸಂಭವಿಸಿದೆ ಎಂಬ ಆಘಾತಕಾರಿ ವರದಿ ಸಲ್ಲಿಸಿದೆ. ಇದರ ಮಧ್ಯೆ ಮೋದಿ ನೇತೃತ್ವದ ಕೇಂದ್ರ ಸರಕಾರೀ ಪ್ರಾಯೋಜಿತ ತನಿಖಾ ತಂಡವೊಂದು ಮರಣಗಳು ಆಕ್ಸಿಜನ್ ಕೊರತೆಯಿಂದ ನಡೆದಿಲ್ಲ ಎಂಬ ವರದಿ ಸಲ್ಲಿಸಿ ಘಟನೆಯ ಹಳಿ ತಪ್ಪಿಸುವ ಪ್ರಯತ್ನ ನಡೆಸಿತು. ಪೋಷಕರು ಉತ್ತರಪ್ರದೇಶದ ಆರೋಗ್ಯ ಸಚಿವರ ವಿರುದ್ಧವೇ ಕೇಸು ದಾಖಲಿಸುವ ಮಟ್ಟದ ಜನಾಕ್ರೋಶದ ಮುಂದೆ ಸತ್ಯವನ್ನು ಮರೆಮಾಚುವ ಪ್ರಯತ್ನಗಳು ವಿಫಲವಾಗಿದ್ದವು.

ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ “ಸ್ವಚ್ಚ ಉತ್ತರ ಪ್ರದೇಶ, ಸ್ವಸ್ಥ ಉತ್ತರಪ್ರದೇಶ” ಎಂಬ ಹೊಸ ಅಭಿಯಾನಕ್ಕೆ ಗೋರಖ್’ಪುರದಿಂದ ಚಾಲನೆ ನೀಡಿದ್ದಾರೆ. ಆದರೆ ಇದು ಘಟನೆಯ ನೈಜತೆಯನ್ನು ಮರೆಮಾಚುವ ಪ್ರಯತ್ನದ ಭಾಗವೆಂದು ವಿರೋಧ ಪಕ್ಷಗಳು ಟೀಕೆ ಮಾಡಿದೆ. ಪೊರಕೆ ಹಿಡಿದು ಸ್ವಚ್ಚತಾ ಅಭಿಯಾನ ನಡೆಸಿದ ಯೋಗಿ, “ಮೆದುಳು ಜ್ವರ ನಿರ್ಮೂಲನಕ್ಕೆ ನಾವೆಲ್ಲರೂ ಬದ್ಧರಾಗಬೇಕಾಗಿದೆ” ಎನ್ನುತ್ತಾ ಗೋರಖ್’ಪುರ ದುರಂತ ಮೆದುಳು ಜ್ವರದಿಂದ ಸಂಭವಿಸಿತೆಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.

ಗೋರಖ್’ಪುರ ಘಟನೆಗೆ ರಾಜಕೀಯ ಬಣ್ಣ ಹಚ್ಚಬೇಡಿ ಎನ್ನುತ್ತಿದ್ದ ಬಿಜೆಪಿ ನಾಯಕರು, ಸ್ವಚ್ಚ ಉತ್ತರಪ್ರದೇಶವೆಂಬ ರಾಜಕೀಯ ಅಸ್ತ್ರದ ಮೂಲಕ ಘಟನೆಗೆ ರಾಜಕೀಯ ಬಣ್ಣ ಲೇಪಿಸಿ ಜನರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿರುವುದು ಮಾತ್ರ ಪೋಷಕರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ ಎನ್ನುವುದು ಮಾತ್ರ ಸುಳ್ಳಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group