ರಾಜ್ಯ ಸುದ್ದಿ

ಎಬಿವಿಪಿ ಕಾರ್ಯಕರ್ತನ ಕೊಲೆ : ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಂದ ಮುಸ್ಲಿಂ ಮನೆಗಳ ಮೇಲೆ ದಾಳಿ ; ನಗ ನಗದು ಲೂಟಿ !

ವರದಿಗಾರ (ಜ 22 ) : ಕಳೆದ ಶುಕ್ರವಾರ ಕೇರಳದ ಕಣ್ಣೂರಿನಲ್ಲಿ ಎಬಿವಿಪಿ ಕಾರ್ಯಕರ್ತನಾಗಿದ್ದ ಶ್ಯಾಮ್ ಪ್ರಸಾದ್ ಎನ್ನುವ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ತಲವಾರು ದಾಳಿ ನಡೆಸಿ ಹತ್ಯೆ ನಡೆಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಕೇರಳ ಪೊಲೀಸರು ಕೃತ್ಯ ನಡೆಸಿದ್ದ ನಾಲ್ವರನ್ನು ಬಂಧಿಸಿದ್ದರು. ತನಿಖೆಯ ವೇಳೆ ಇದೊಂದು ರಾಜಕೀಯ ಹತ್ಯೆ ಎಂದು ತಿಳಿದು ಬಂದಿತ್ತು. ಹತ್ಯೆಯಾಗುವುದಕ್ಕಿಂತ ಒಂದು ವಾರ ಮೊದಲು ಇದೇ ಶ್ಯಾಮ್ ಪ್ರಸಾದ್ ಮತ್ತು ತಂಡ ಕಣ್ಣೂರಿನಲ್ಲಿ  ಓರ್ವ ಬಡಪಾಯಿ ಡ್ರೈವರ್ ನ ಮೇಲೆ ಭೀಕರ ತಲವಾರು ದಾಳಿ ನಡೆಸಿ ಬರ್ಬರವಾಗಿ ಗಾಯಗೊಳಿಸಿದ್ದನು. ಇದಕ್ಕೆ ಪ್ರತೀಕಾರವಾಗಿ ಶ್ಯಾಮ್ ಪ್ರಸಾದ್ ಹತ್ಯೆ ನಡೆಸಿದ್ದೇವೆಂದು ಬಂಧಿತ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದರು.

ಆರೆಸ್ಸೆಸ್ ಕಾರ್ಯಕರ್ತ ಕೂಡ ಆಗಿದ್ದ ಶ್ಯಾಮ್ ಪ್ರಸಾದ್ ಹತ್ಯೆಯ ಬೆನ್ನಿಗೇ ಆರೆಸ್ಸೆಸ್ ಗೂಂಡಾಗಳು ಕಣ್ಣೂರಿನ ಕೊಮ್ಮೇರಿ ಎಂಬ ಪ್ರದೇಶದಲ್ಲಿ ಹಲವು ಮುಸ್ಲಿಮರ ಮನೆಗಳ ಮೇಲೆ ದಾಳಿ ನಡೆಸಿದ್ದು, ಕೆಲವೊಂದು ಮನೆಗಳಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿದ್ದಾರೆಂದು ನಿವಾಸಿಗಳು ದೂರಿದ್ದಾರೆ. ಈ ಕುರಿತಾಗಿ ಕೇರಳದ ‘ಮೀಡಿಯಾ ಒನ್‘ ಚಾನೆಲ್ ವರದಿ ಮಾಡಿದೆ.

‘ಮೀಡಿಯಾ ಒನ್’ ಚಾನೆಲ್ ನ ವೀಡೀಯೋದಲ್ಲಿ ತೋರಿಸಿರುವಂತೆ, ಹಲವು ಮನೆಗಳ ಮೇಲೆ ಈ ಮತಾಂಧ ಗೂಂಡಾಗಳು ದಾಳಿ ಮಾಡಿದ್ದು, ಮನೆಗಳ ಕಿಟಕಿ ಬಾಗಿಲುಗಳು, ಟಿವಿ, ಕಪಾಟುಗಳನ್ನೆಲ್ಲಾ ಒಡೆದು ಹಾಕಿರುವ ಸ್ಮಶಾನ ಸಮಾನ ದೃಶ್ಯಗಳು ವೀಡೀಯೋದಲ್ಲಿ ಕಂಡು ಬರುತ್ತದೆ. ಖತೀಜಾ ಎನ್ನುವ ವೃದ್ಧ ಮಹಿಳೆಯೋರ್ವಳು ತಿಳಿಸುವಂತೆ, ‘ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಗುರುತಿಸಿಕೊಂಡಿಲ್ಲ. ಆದರೆ ನನ್ನ ಮನೆ ಮೇಲೆ ಯಾಕೆ ದಾಳಿ ಮಾಡಿದ್ದಾರೆಂದು ತಿಳಿಯುತ್ತಿಲ್ಲ. ನನ್ನ ಮಕ್ಕಳು ಕಷ್ಟಪಟ್ಟು ಮಾಡಿದ್ದ ಎಲ್ಲವನ್ನೂ ದಾಳಿ ಮಾಡಿದ ಮತಾಂಧ ಗೂಂಡಾ ಪಡೆ ನಾಶಪಡಿಸಿದೆ’ ಎಂದು ರೋದಿಸುತ್ತಿರುವ ದೃಶ್ಯ ಮನ ಕಲಕುವಂತಿದೆ. ಮತ್ತೋರ್ವ ಮಹಿಳೆ ತನ್ನ 8000 ಸಾವಿರ ರೂಪಾಯಿ ಹಾಗೂ 5 ಪವನ್ ಚಿನ್ನಾಭರಣವನ್ನು ಗೂಂಡಾ ಪಡೆ ಲೂಟಿ ಮಾಡಿದೆ ಎಂದು ತಿಳಿಸಿದ್ದಾರೆ.

ಪುಯಿಯೋಡ್, 17 ಮೈಲ್, ಆಲಪ್ಪಡಂಬ್ ಹಾಗೂ ತೊಕ್ಕಿಲಂಗಾಡಿ ಎಂಬ ಪ್ರದೇಶಗಳಲ್ಲಿರುವ ಮುಸ್ಲಿಮರ ಮನೆಗಳ ಮೇಲೆ ಈ ಮತಾಂಧ ಗೂಂಡಾಗಳು ದಾಳಿ ಮಾಡಿದ್ದು,  ಅಬ್ಬಾಸ್, ಖತೀಜಾ, ಅಬ್ದುಲ್ ಸಲಾಂ, ರಶೀದ್ ಎಂಬವರ ಮನೆಗಳು ಸೇರಿದಂತೆ ಹಲವು ಮನೆಗಳ ಮೇಲೆ ದಾಳಿ ಮಾಡಿದ್ದಾರೆನ್ನಲಾಗಿದೆ. ಮಹಿಳೆಯರು ಮತ್ತು ಮಕ್ಕಳೇ ಇರುವ ಮನೆಗಳ ಮೇಲೆ ಮಾತ್ರ ಈ ಮತಾಂಧ ಗೂಂಡಾಗಳು ದಾಳಿ ಮಾಡಿದೆಯೆಂದು ‘ಮೀಡಿಯಾ ಒನ್’ ಚಾನೆಲ್ ವರದಿ ತಿಳಿಸಿದೆ. ದಾಳಿ ನಡೆಯುತ್ತಿರುವ ವೇಳೆ ಪೊಲೀಸರಿಗೆ ಸುದ್ದಿ ತಲುಪಿಸಿದರಾದರೂ, ಒಳ ಪ್ರದೇಶಗಳಿಗೆ ಬರಲು ಸಾಧ್ಯವಿಲ್ಲ ಎಂದು ಪೊಲಿಸರು ಕೂಡಾ ದಾಳಿಕೋರ ಮತಾಂಧ ಪಡೆಗಳಿಗೆ ಬೆಂಬಲಿಸಿದೆಯೆಂದು ಸ್ಥಳೀಯರು ದೂರಿದ್ದಾರೆಂದು ಚಾನೆಲ್ ವರದಿ ತಿಳಿಸಿದೆ

ವೀಡಿಯೋ ಕೃಪೆ : ಮೀಡಿಯಾ ಒನ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group