ಸುತ್ತ-ಮುತ್ತ

ಉಪ್ಪಳದಲ್ಲಿ ‘ಬ್ಲಡ್ ಡೋನರ್ಸ್ ಹಾಗೂ ಎಸ್. ಎನ್ ಸ್ಪೋರ್ಟ್ಸ್ ಕ್ಲಬ್’ ವತಿಯಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ

ವರದಿಗಾರ ಉಪ್ಪಳ (ಜ 22 ) :  ಎಸ್.ಎನ್.ಸ್ಪೋರ್ಟ್ಸ್ ಕ್ಲಬ್ ಉಪ್ಪಳ ಗೇಟ್, ಶಾಫಿ ನಗರ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಆಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರವು ದಿನಾಂಕ 21-1-2018 ರವಿವಾರ ಎಸ್.ಎನ್‌ ಸ್ಪೋರ್ಟ್ಸ್ ಕ್ಲಬ್ ಉಪ್ಪಳ ಇದರ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಎಸ್ ಎನ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಉಪ್ಪಳ ಇದರ ಅಧ್ಯಕ್ಷ ಮಹಮ್ಮದ್ ಬೂನ್ ಉಪಾಧ್ಯಕ್ಷರಾದ ಶಂಸು ಎಸ್ ಎನ್ ,  ಲೆತೀಫ್ ಕೆ.ಎ, ರಝಾಕ್ ಫಕೀರ್ ಸೆಕ್ರೇಟರಿ ಎಸ್ ಎನ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಉಪ್ಪಳ, ಎಸ್ ಎನ್ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಉಪ್ಪಳ ಇದರ ಸದಸ್ಯರಾದ ಸಲೀಂ MH, ನಿಯಾಝ್ KM, ಸಿದ್ದೀಕ್ ಸಿದ್ದಿ, ಅಲ್ತಾಫ್ ಎಸ್ ಎನ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಮುಸ್ತಫಾ ಕೆ.ಸಿ ರೋಡ್ ಕಾರ್ಯದರ್ಶಿ ಬ್ಲಡ್ ಡೋನರ್ಸ್ ಮಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉತ್ಸಾಹಿ ರಕ್ತದಾನಿಗಳು ಹಾಗೂ ಊರಿನ ನಾಗರಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ 50 ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ನೀಡಿ ಸಹಕರಿಸಿದರು.

ವರದಿ:  ಬ್ಲಡ್ ಡೋನರ್ಸ್ ಮಂಗಳೂರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group