ವರದಿಗಾರ (ಜ.22): ‘ದಲಿತರನ್ನು ಮತ್ತು ಪ್ರತಿಭಟನಾನಿರತರರನ್ನು ಬೀದಿನಾಯಿಗಳಿಗೆ ಹೋಲಿಸುವಂತಹ ಅನಂತ್ ಕುಮಾರ್ ಹೆಗಡೆಯವರ ಹೇಳಿಕೆ ಅವರ ಅತ್ಯಂತ ಕೊಳಕು ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
‘ಅನಂತ್ ಕುಮಾರ್ ಹೆಗಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿಯ ವಕ್ತಾರ. ಉದ್ದೇಶ ಪೂರ್ವಕವಾಗಿಯೇ ಇಂತಹ ಹೇಳಿಕೆ ನೀಡುವಂತೆ ಹೆಗಡೆಗೆ ಕುಮ್ಮಕ್ಕು ನೀಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಪ್ರಧಾನಿ ಮೋದಿಯೇ ಅನಂತ್ ಕುಮಾರ್ ಹೆಗಡೆಯನ್ನು ಕೇಂದ್ರ ಸಚಿವ ಮಾಡಿದ್ದಾರೆ. ಈ ರೀತಿ ಹೇಳಿಕೆ ನೀಡಲೆಂದೇ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ’ ಎಂದೂ ಅವರು ಆರೋಪ ಮಾಡಿದ್ದಾರೆ.
