ವರದಿಗಾರ (ಜ.22): ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ರನ್ನು ಸದ್ಯದಲ್ಲೆ ಕಿತ್ತೆಸೆಯಲಾಗುವುದು ಎಂದು ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯ ಸ್ವಾಮಿ ಚಿನ್ಮಯಾನಂದ ಹೇಳಿದ್ದಾರೆ.
ಕಳೆದ ವಾರ ಕೆಲ ಗಂಟೆಗಳ ಕಾಲ ನಾಪತ್ತೆಯಾಗಿ ಬಳಿಕ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ವಿ ಹೆಚ್ ಪಿ ನಾಯಕ ಪ್ರವೀಣ್ ತೊಗಾಡಿಯ ‘ರಾಜಸ್ಥಾನ ಪೊಲೀಸರು ನನ್ನನ್ನು ಗುಂಡಿಕ್ಇ ಕೊಲ್ಲಲು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದ್ದರು.
ಕೇಂದ್ರ ಸರಕಾರ, ರಾಜಸ್ಥಾನ ಸರಕಾರದ ವಿರುದ್ಧವಾಗಿ ಹೇಳಿಕೆ ನೀಡುತ್ತಿರುವ ತೊಗಾಡಿಯಾ ಅವರ ಅಶಿಸ್ತಿನ ವರ್ತನೆ ಮುಂದುವರಿದಿರುವುದರಿಂದ ಅವರನ್ನು ಸದ್ಯದಲ್ಲೇ ಸಂಘಟನೆಯಿಂದ ಕಿತ್ತೆಸೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
