ವರದಿಗಾರ (ಜ.22): ‘ಮನುವಾದ ಪ್ರತಿಪಾದನೆಯೇ ಅನಂತ್ ಕುಮಾರ್ ಹೆಗಡೆಯಂತವರ ಕೆಲಸ. ಇವರೇ ನಿಜವಾದ ಅಪರಾಧಿಗಳು’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ
ಇತ್ತೀಚೆಗೆ ಬಳ್ಳಾರಿಯಲ್ಲಿ ‘ರಸ್ತೆಯಲ್ಲಿ ಯಾವುದೋ ನಾಯಿಗಳು ಕೂಗಿದರೆ ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
‘ಹೆಗಡೆ ಬಾಯಿಂದ ಪ್ರಧಾನಿಯವರೇ ಈ ರೀತಿ ಹೇಳಿಸುತ್ತಿದ್ದಾರೆ’ ಎಂದು ಅವರು ಗಂಭೀರ ಆರೋಪಿಸಿದ್ದಾರೆ. ಮೋದಿ ಮನಸ್ಸು ಮಾಡಿದ್ದರೆ ಇದನ್ನು ನಿಲ್ಲಿಸಬಹುದು. ಸಂಸತ್ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಜನರ ಹಕ್ಕು. ಪ್ರತಿಭಟನೆ, ಸತ್ಯಾಗ್ರಹ ಮಾಡುವುದು ಬೇಡ ಅಂದರೆ ಹೇಗೆ ಎಂದೂ ಪ್ರಶ್ನಿಸಿದ್ದಾರೆ
ಅನಂತ್ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ- ಇದನ್ನೂ ಓದಿ:
ನಾಯಿಗಳು ಕೂಗಿದ್ರೆ ತಲೆ ಕೆಡಿಸಿಕೊಳ್ಳಲ್ಲ: ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆ
