ವರದಿಗಾರ (ಜ.20): ಕೇಂದ್ರ ಸರಕಾರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸ್ವೇವಕ ಸಂಘ (ಆರೆಸ್ಸೆಸ್) ದ ವರಿಷ್ಠರ ವಿರುದ್ಧ ಕಟು ಟೀಕೆಗಳನ್ನು ಮುಂದುವರಿಸಿರುವ ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಪದಚ್ಯುತಗೊಳಿಸಲು ಆರೆಸ್ಸೆಸ್ ಮುಂದಾಗಿದೆ.
ತೊಗಾಡಿಯಾ, ರೆಡ್ಡಿ ಮತ್ತು ಉಪಾಧ್ಯಾಯ ಅವರು ತಮ್ಮದೇ ಕಾರ್ಯಸೂಚಿ ಅನುಷ್ಠಾನಗೊಳಿಸುವ ಮೂಲಕ ಕೇಂದ್ರ ಸರಕಾರ ಮತ್ತು ಬಿಜೆಪಿ ಮುಖಂಡರಿಗೆ ತೀವ್ರ ಮುಜುಗರ ತಂದಿದ್ದಾರೆ ಎಂಬುದು ಆರೆಸ್ಸೆಸ್ ನಾಯಕರ ಆರೋಪ. ಫೆಬ್ರವರಿಯಲ್ಲಿ ವಿಎಚ್ಪಿ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
ವಿಎಚ್ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ರಾಘವ ರೆಡ್ಡಿ ಹಾಗೂ ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಬೃಜೇಶ್ ಉಪಾಧ್ಯಾಯ ಅವರನ್ನೂ ಸಹ ಉಚ್ಚಾಟನೆ ಮಾಡಲು ಸಂಘಪರಿವಾರ ನಾಯಕರು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
