ರಾಷ್ಟ್ರೀಯ ಸುದ್ದಿ

ಮುಸ್ಲಿಮರಿಲ್ಲದಿರುತ್ತಿದ್ದರೆ ನಾವು ಸತ್ತೇ ಹೋಗುತ್ತಿದ್ದೆವು: ಮಹಾರಾಜ್ ಸ್ವಾಮಿ

ವರದಿಗಾರ- ಮೀರತ್: ‘ಒಂದು ವೇಳೆ ಮುಸ್ಲಿಮರಿಲ್ಲದಿರುತ್ತಿದ್ದರೆ ನಾವು ಸತ್ತೇ ಹೋಗುತ್ತಿದ್ದೆವು’. ನಮ್ಮ ಜೀವ ಉಳಿಸಿದ ಮುಸ್ಲಿಮರಿಗೆ ಅಭಾರಿಯಾಗಿದ್ದೇವೆ ಎಂದು ಶನಿವಾರ ಸಂಭವಿಸಿದ ಮೀರತ್ ರೈಲು ದುರಂತದಲ್ಲಿ ಬದುಕುಳಿದ ಮಹಾರಾಜ್ ಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಿನ್ನೆ ಮೀರಟ್ ನಲ್ಲಿ ಉತ್ಕಲ್ ಎಕ್ಸ್ ಪ್ರೆಸ್ಸ್ ರೈಲು ದುರಂತದಲ್ಲಿ ಬದುಕುಳಿದ ಭಗವಾನ್ ದಾಸ್ ಮಹರಾಜ್ ಸ್ವಾಮೀಜಿ ಹಾಗೂ ಅವರ ಸಂಗಡಿಗರು ಆ ಭಯಾನಕ ಘಟನೆಯ ಸಂದರ್ಭದಲ್ಲಿ ಆಪತ್ಭಾಂಧವರಾದ ಮುಸ್ಲಿಮರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನನ್ನ ತಲೆಯು ಮುಂದಿನ ಸೀಟಿಗೆ ಹೊಡೆದುಕೊಳ್ಳುತ್ತಾ ಅಲ್ಲಿಂದಿಲ್ಲಿಗೆ ಎಸೆಯಲ್ಪಡುತ್ತಿದೆ. ಒಂದೆಡೆ ಅಸಾಧ್ಯವಾದ ನೋವು, ಮತ್ತೆಲ್ಲಾ ಕಡೆಯಿಂದ ಮಕ್ಕಳು ಮಹಿಳೆಯರೆನ್ನದೆ ಚೀರಾಡುವ ಧ್ವನಿ. ರಕ್ಷಣೆಗಾಗಿ ಕೂಗು, ಆ ಸಮಯದಲ್ಲಿ ಸ್ಥಳೀಯರು ಆಪತ್ಭಾಂಧವರಾಗಿ ಘಟನಾ ಸ್ಥಳಕ್ಕೆ ಧಾವಿಸಿ ನಮ್ಮನ್ನು ಹೊರಗೆಳೆದು ಪ್ರಾಣ ಕಾಪಾಡಿದರು. ನಿಜವಾಗಿಯೂ, ಅವರು ಅಲ್ಲಿ ಇರದೇ ಹೋಗಿದ್ದರೆ,  ಬದುಕುಳಿತಿರಲಿಲ್ಲ ಎಂದು ಸ್ವಾಮೀಜಿ ಹಾಗೂ ಅವರ ಸಂಗಡಿಗರು ಹೇಳಿದ್ದಾರೆ.

ಸಂತರು ತನ್ನ ಆರು ಮಂದಿ ಸಂಗಡಿಗರೊಂದಿಗೆ ಪ್ರಯಾಣ ಬೆಳೆಸಿದ್ದರು. ಗಂಗಾ ನದಿಯಲ್ಲಿ ಸ್ಥಾನ ಮಾಡಲು ಹರಿದ್ವಾರಕ್ಕೆ ರೈನಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದ್ದು. ಆ ಸಮಯದಲ್ಲಿ ಸ್ಥಳೀಯ ಮುಸ್ಲಿಮರು ನಮ್ಮ ಸಹಾಯಕ್ಕೆ ಬಂದು, ನಮಗೆ ನೀರು, ಆಹಾರ ಹಾಗೂ ವೈದ್ಯರ ಸಹಾಯ ನೀಡಿ ನಮ್ಮ ಪ್ರಾಣ ಉಳಿಸಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯದ ಓಲೈಕೆಗಾಗಿ ಹಿಂದು ಮುಸ್ಲಿಮರ ನಡುವೆ ಸಾಮರಸ್ಯದ  ವೀಷ ಬೀಜವನ್ನು ಭಿತ್ತಿ, ದ್ವೇಷವನ್ನು ಹುಟ್ಟು ಹಾಕಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ. ಮತ್ತು ಜನಸಾಮನ್ಯರಲ್ಲಿ ಪರಸ್ಪರ ಪ್ರೀತಿ,ಸೌಹಾರ್ಧತೆ, ವಿಶ್ವಾಸ ಎಂದಿನಂತೆ ಇನ್ನೂ ಇದೆ. ಕಾಳಿಂಗ ಉತ್ಕಾಲ್ ಎಕ್ಸ್’ಪ್ರೆಸ್ ರೈಲಿನ 14 ಬೋಗಿಗಳು ನಿನ್ನೆ ಮುಝಫ್ಫರ್ ನಗರದ ಖಟೌಳಿ ಬಳಿ ಹಳಿತಪ್ಪಿವೆ.

ಇದುವರೆಗೆ ಬಂದ ಮಾಹಿತಿ ಪ್ರಕಾರ,  23 ಮಂದಿ ಗಾಯಗೊಂಡಿದ್ದು ನಗರದ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈಧ್ಯಾಧಿಕಾರಿ ಡಾ. ರಾಜ್ ಕುಮಾರ್ ಚೌಧರಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ PL Sharma ಜಿಲ್ಲಾ ಆಸ್ಪತ್ರೆ ಹಾಗೂ LLMR ಮೆಡಿಕಲ್ ಕಾಲೇಜ್ ಸಹಾಯವಾಣಿ ದೂರವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.   ಸಹಾಯವಾಣಿ ಸಂಖ್ಯೆ: +919410609434 , 0121-2604977.

‘ಮುಸ್ಲಿಮರು ಇಲ್ಲದೇ ಇರುತ್ತಿದ್ದರೆ ನಾವು ಬದುಕಿರುತ್ತಿರಲಿಲ್ಲ’

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group