ವರದಿಗಾರ (ಜ.17): ಹಿಂದೂಪರ ಸಂಘಟನೆಯೊಂದರ ಕಾರ್ಯಕರ್ತರು ‘ಜೈ ಶ್ರೀರಾಮ್’ ಹೇಳುವಂತೆ ಒತ್ತಾಯಿಸಿ ದಲಿತ ಯುವಕನ ಮೇಲೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮುಜಾಫರ್ನಗರದ ಮೇಘಾಶಿಕಾರ್ಪುರ್ ಗ್ರಾಮದಿಂದ ತಡವಾಗಿ ಬೆಳಕಿಗೆ ಬಂದಿದೆ.
ಹಿಂದೂಪರ ಸಂಘಟನೆಯೊಂದರ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿರುವ ಯುವಕನನ್ನು ವಿಪಿನ್ ಕುಮಾರ್ ಎಂದು ಗುರುತಿಸಲಾಗಿದೆ.
ಜನವರಿ 14ರಂದು ಈ ಘಟನೆ ನಡೆದಿದೆ. ದಲಿತರಲ್ಲಿ ಕೆಲವು ಮಂದಿ ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ಬಯಸಿದ್ದರು ಎನ್ನಲಾಗಿದೆ. ಅದಲ್ಲದೇ ಮತಾಂತರಗೊಳ್ಳಲು ಇಚ್ಚಿಸಿದ್ದವರು ತಮ್ಮ ಮನೆಗಳಲ್ಲಿ ಹಿಂದೂ ದೇವತೆಗಳ ಫೊಟೋಗಳನ್ನು ಇಡಲು ನಿರಾಕರಿಸಿದ್ದರು ಎಂದು ಮೂಲ ವರದಿಗಳು ತಿಳಿಸಿವೆ.
ಸದ್ಯ ಹಲ್ಲೆ ನಡೆಸಿರುವ ವಿಡಿಯೋ ಪೊಲೀಸರಿಗೆ ಲಭ್ಯವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಹಲ್ಲೆಗೊಳಗಾದ ಯುವಕ ವಿಪಿನ್ ಕುಮಾರ್ ನ ತಂದೆ ಕೆಲವರ ವಿರುದ್ದ ಇಲ್ಲಿನ ಪುರ್ಕಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
https://twitter.com/ANINewsUP/status/953477399353503744/photo/1
