ವಿದೇಶ ಸುದ್ದಿ

ಘಾನಾ ಪ್ರಜೆಯ ಹಜ್ ಕನಸನ್ನು ನನಸಾಗಿಸಿದ ಟರ್ಕಿ ಸರಕಾರ; ನೆರವಾದ ಸಾಮಾಜಿಕ ತಾಣ

ಅಲ್ ಹಸನ್ ಅಬ್ದುಲ್ಲಾ ಎಂಬ ಓರ್ವ ಘಾನಾದ ಬಡ ವ್ಯಕ್ತಿಯ ಕಥೆ ಟರ್ಕಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಅವರೀಗ ಈ ಬಾರಿ ಸೌದಿ ಅರೇಬಿಯಾಕ್ಕೆ ಹಜ್ ಯಾತ್ರೆ ಕೈಗೊಳ್ಳುವ ಟರ್ಕಿಯ ರಾಜಾತಿಥ್ಯದ ಸ್ವೀಕರಿಸುವ “ಗಣ್ಯ” ವ್ಯಕ್ತಿ !!

ಟರ್ಕಿಯ ಸಿನೆಮಾ ತಯಾರಕನೋರ್ವ ಸಿನಿಮಾ ಶೂಟಿಂಗ್’ಗೆಂದು ಘಾನಾದ ಹಿಂದುಳಿದ ಪ್ರದೇಶವೊಂದರಲ್ಲಿ ತನ್ನ ಡ್ರೋಣ್ ಕ್ಯಾಮೆರಾದೊಂದಿಗೆ ಬಂದಿದ್ದರು. ಕೈಯ್ಯಲ್ಲಿದ್ದ ಡ್ರೋಣನ್ನು ನೋಡಿದ ಹಸನ್ ಅಬ್ದುಲ್ಲಾ ಮುಗ್ಧರಾಗಿ “ನಮಗೆಲ್ಲಾ ಸಣ್ಣ ವಿಮಾನದಂತಿರುವ ಇದರಲ್ಲಿ ಹಜ್ ಯಾತ್ರೆಗೆ ಹೋಗಲು ಸಾಧ್ಯವಿಲ್ಲ ತಾನೇ? ಇದಕ್ಕಿಂತ ದೊಡ್ಡ ಗಾತ್ರದ್ದು ಬೇಕಾಗಬಹುದಲ್ಲವೇ” ಎಂದು ಪ್ರಶ್ನಿಸಿದ್ದರು. ಇದನ್ನು ಕೇಳಿದ್ದ ಆ ಸಿನಿಮಾ ತಯಾರಕ ಅವರ ಚಿತ್ರದೊಂದಿಗೆ ಇದನ್ನು ಟ್ವಿಟ್ಟರ್’ನಲ್ಲಿ ಹಾಕಿದ್ದರು. ಇದನ್ನರಿತ ಟರ್ಕಿ ವಿದೇಶಾಂಗ ಸಚಿವ ಮೆವ್ಲೂತ್ ಕಪುಸೋಗ್ಲು ಘಾನಾದಲ್ಲಿ ಕಾರ್ಯಾಚರಿಸುತ್ತಿರುವ ದತ್ತಿ ಸಂಸ್ಥೆಯೊಂದನ್ನು ಸಂಪರ್ಕಿಸಿ ಹಸನ್ ಅಬ್ದುಲ್ಲಾರ ಹಜ್ ಯಾತ್ರೆಗೆ ಸಹಕರಿಸುವಂತೆ ನಿರ್ದೇಶನ ನೀಡಿದ್ದರು.

ವಿದೇಶಾಂಗ ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಆ ದತ್ತಿ ಸಂಸ್ಥೆಯ ಮುಖ್ಯಸ್ಥ ಸಿಹಾದ್ ಗೋಕ್ದೆಮೀರ್, ಘಾನ ಮತ್ತು ಟರ್ಕಿಯನ್ನು ಕೇಂದ್ರೀಕರಿಸಿ ಕಾರ್ಯಾಚರಿಸುವ ಎಲ್ಲಾ ಕಂಪನಿ ಮತ್ತು ಉದ್ಯಮಿಗಳ ಮೂಲಕ ಹಸನ್ ಅಬ್ದುಲ್ಲಾರನ್ನು ಕಂಡು ಹುಡುಕುವ ಪ್ರಯತ್ನ ಮಾಡಿದ್ದರು. ಕೊನೆಗೂ ಘಾನಾದಲ್ಲಿರುವ ಟರ್ಕಿ ರಾಯಭಾರ ಕಛೇರಿಯ ಪೋಲೀಸ್ ಅಧಿಕಾರಿಯೊಬ್ಬರ ಪ್ರಯತ್ನದ ಫಲವಾಗಿ ಹಸನ್ ಅಬ್ದುಲ್ಲಾ ಕಳೆದ ಶುಕ್ರವಾರ ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಸಿಹಾದ್ ಅವರೇ ಖುದ್ದಾಗಿ ಹಸನ್’ರನ್ನು ಬರಮಾಡಿಕೊಂಡರು.

ತನ್ನ ಕನಸನ್ನು ಸಾಕಾರಗೊಳಿಸಿದ ಟರ್ಕಿ ಸರಕಾರಕ್ಕೆ ಮತ್ತು ನೆರವಾದ ಎಲ್ಲರಿಗೆ ಧನ್ಯವಾದ ಸಲ್ಲಿಸಿದ ಹಸನ್ ಅಬ್ದುಲ್ಲಾ, ಖಂಡಿತವಾಗಿಯೂ ಇದು ಮುಸ್ಲಿಮರ ಮಧ್ಯೆ ಸಹಬಾಳ್ವೆ ಮತ್ತು ಸಹೋದರತ್ವ ವೃದ್ಧಿಗೆ ಸಹಕಾರಿಯಾಗುತ್ತದೆ ಮಾತ್ರವಲ್ಲ ಎಲ್ಲರ ಒಳಿತಿಗೆ ದೇವರಲ್ಲಿ ಪ್ರಾರ್ಥಿಸುವುದಾಗಿಯೂ ಹೇಳಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group