ಜಿಲ್ಲಾ ಸುದ್ದಿ

ಶಾಸಕ ಮೊಯಿದಿನ್ ಬಾವಾರವರ ಮಾನವೀಯತೆಯ ನೆರವಿಗೆ ಕೋಮುವಾದದ ಲೇಪ ಹಚ್ಚಿದ ಸಂಘಪರಿವಾರ !

 ವರದಿಗಾರ (17.01.2018) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಯೊಂದನ್ನು ಕೋಮುವಾದದ ಮಾನದಂಡದಲ್ಲಿ ಅಳೆಯುವ ಸಂಘಪರಿವಾರದ ಕೆಟ್ಟ ಚಾಳಿ, ಜಿಲ್ಲೆಯ ನಾಡಿಮಿಡಿತವನ್ನು ಅರಿತವರಿಗೆಲ್ಲರಿಗೂ ಹೊಸದಲ್ಲ. ಆದರೆ ಮಾನವೀಯತೆಯ ಸಂಬಂಧಗಳನ್ನೂ ಹಾಗೂ ಸಹಾಯಗಳನ್ನೂ ಅದೇ ದೃಷ್ಟಿಕೋನದಲ್ಲಿ ನೋಡುವ ಹೀನಮಟ್ಟಕ್ಕೂ ಇಳಿಯುತ್ತಾರೆಂದರೆ ಅವರ ನೈತಿಕ ಮಟ್ಟ ಯಾವ ಹಂತಕ್ಕಿಳಿದಿದೆ ಎಂದು ಎಲ್ಲರೂ ಯೋಚಿಸುವಂತೆ ಮಾಡುತ್ತದೆ.

ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾರವರು ತನ್ನ ಚುರುಕಿನ ಅಭಿವೃದ್ಧಿ ಹಾಗೂ ಮಾನವೀಯತೆಗೆ ಹೆಸರು ವಾಸಿಯಾದವರು. ಕೋಮುವಾದದ ಬೆಂಕಿಗೆ ನಲುಗುತ್ತಿರುವ ದಕ್ಷಿಣ ಕನ್ನಡದ ಹಲವು ಕ್ಷೇತ್ರಗಳಲ್ಲಿ ಇವರದ್ದೂ ಸೇರಿದೆ. ಆದರೆ ವಿರೋಧಿಗಳ ಎಲ್ಲಾ ಟೀಕೆಗಳಿಗೆ ತನ್ನ ಮುಗುಳ್ನಗೆಯ ಮೂಲಕವೇ ಉತ್ತರಿಸುವ ಬಾವಾರವರು ತನ್ನ ಕ್ಷೇತ್ರದ ಪ್ರತಿಯೊಂದು ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ನಡುವೆ ಓರ್ವ ಜನಪ್ರಿಯ ಶಾಸಕರಾಗಿ ಹೊರಹೊಮ್ಮಿದ್ದಾರೆ. ಅಂತಹಾ ಮೊಯಿದಿನ್ ಬಾವಾರವರನ್ನು ಓರ್ವ ಮೆಚ್ಚಿನ ಜನಪ್ರತಿನಿಧಿಯಾಗಿ ಜನರು ಪರಿಗಣಿಸಿದ್ದಾರೆಯೇ ಹೊರತು ಯಾವುದೇ ಒಂದು ಸಮುದಾಯದ ಪರ ವ್ಯಕ್ತಿಯನ್ನಾಗಿಯಲ್ಲ. ಆದರೆ ಬೆಂಕಿ ಹಚ್ಚಲು ತಯಾರಾಗಿರುವ ಕೋಮುವಾದಿಗಳಿಗೆ ಇದ್ಯಾವುದೂ ಬೇಕಾಗಿಲ್ಲ. ಅವರಿಗೆ ಮೊಯಿದಿನ್ ಬಾವಾರವರ ಸಾಮಾಜಿಕ ಕಳಕಳಿಗಳೂ ತಪ್ಪಾಗಿ ಕಾಣುತ್ತದೆ.

ಸದ್ಯ ಈ ಕೋಮುವಾದಿಗಳ ಕೆಂಗಣ್ಣಿಗೆ ಗುರಿಯಾಗಿರುವುದು ಮಂಗಳೂರು ಹೊರವಲಯದ ಕೃಷ್ಣಾಪುರದ ನಾಲ್ಕನೇ ಬ್ಲಾಕಿನಲ್ಲಿ ತನ್ನ ಸ್ವಂತ ಹಣದಿಂದಲೇ ಶಾಲೆಯೊಂದನ್ನು ನಡೆಸುತ್ತಿರುವ ಓರ್ವ ಶಿಕ್ಷಕಿ ಹಾಗೂ ಅವರ ಶಾಲೆ !

ಈ ಶಾಲೆಯನ್ನು ಬಹಳ ಕಷ್ಟಪಟ್ಟು ನಡೆಸುತ್ತಿರುವ ಈ ಶಿಕ್ಷಕಿ , ಶಾಲೆಯ ಹೊಸ ಕೊಠಡಿಯೊಂದರ ಉದ್ಘಾಟನೆಗೆ ಸ್ಥಳೀಯ ಶಾಸಕ ಮೊಯಿದಿನ್ ಬಾವಾರನ್ನು ಅತಿಥಿಯನ್ನಾಗಿ ಕರೆದಾಗ ಅಲ್ಲಿನ ಸಂಘಪರಿವಾರದಲ್ಲಿ ಗುರುತಿಸಿಕೊಂಡ ಕೆಲವರು, ‘ಮೊಯಿದಿನ್ ಬಾವ ಓರ್ವ ಮುಸ್ಲಿಮ್ ಶಾಸಕ. ಅವರನ್ನೇಕೆ ಅತಿಥಿಯನ್ನಾಗಿ ಕರೆದಿರುವುದು’ ಎಂದು ತಗಾದೆ ತೆಗೆದು, ಶಿಕ್ಷಕಿಗೆ ಮಾನಸಿಕ ಕಿರುಕುಳ ನೀಡಿದ್ದಾರೆನ್ನಲಾಗಿದೆ. ಈ ವಿಷಯವನ್ನು ಶಿಕ್ಷಕಿ ಖುದ್ದು ಮೊಯಿದಿನ್ ಬಾವರವರ ಬಳಿ ಇತ್ತೀಚೆಗೆ ಹೇಳಿಕೊಂಡಿದ್ದರು. ಅದರ ವೀಡಿಯೋ ಕೂಡಾ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಶಿಕ್ಷಕಿ ಅಳುತ್ತಲೇ ತನಗಾದ ನೋವನ್ನು ಹೇಳಿಕೊಂಡಿದ್ದರು. “ನನ್ನ ಓರ್ವ ಮಗ ಕೆಲವೊಂದು ಕಾರಣಗಳಿಂದಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ನನಗೆ ಮಾನಸಿಕ ಕಿರುಕುಳ ನೀಡಿದ ಯಾರೊಬ್ಬರೂ ನನ್ನ ಬೆಂಬಲಕ್ಕೆ ಬಂದಿಲ್ಲ. ಮಗನ ಪರಿಸ್ಥಿತಿಯ ಕುರಿತೂ ಏನೊಂದು ವಿಚಾರಿಸಿರಲಿಲ್ಲ. ಆಗ ನಮ್ಮ ಕುಟುಂಬದ ಎಲ್ಲರಿಗೂ ಮಾನಸಿಕ ಸ್ಥೈರ್ಯ ನೀಡಿದ್ದು ಇದೇ ಮೊಯಿದಿನ್ ಬಾವಾರವರು. ನನ್ನ ಮಗನನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆತನಿಗೆ ತಿಳಿ ಹೇಳಿ , ಅವನನ್ನು ಸರಿದಾರಿಗೆ ತಂದಂತಹಾ ಘನ ವ್ಯಕ್ತಿತ್ವವಾಗಿದೆ ಮೊಯಿದಿನ್ ಬಾವಾರದ್ದು. ಅವರ ಮೇಲೆ ಆ ಗೌರವ ಭಾವನೆ ನನಗೆ ಎಂದೆಂದೂ ಇರುತ್ತದೆ. ಇದೆಲ್ಲಾ ಈ ಮನೋಸ್ಥಿತಿಯವರಿಗೆ ನಾನು ಹೇಗೆ ಅರ್ಥ ಮಾಡಿಕೊಡಲಿ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ನೊಂದ ಶಿಕ್ಷಕಿ.

ಒಟ್ಟಿನಲ್ಲಿ ಮತಾಂಧತೆಯ ಅಮಲೇರಿಸಿಕೊಂಡ ಕೀಳು ಮನೋಸ್ಥಿತಿಯ ಸಂಘಪರಿವಾರದ ಸಂಘಟನೆಗಳಿಂದಾಗಿ ಜನರು ಅನ್ಯಮತೀಯರಿಗೆ ಮಾನವೀಯತೆಯ ನೆರವು ನೀಡುವುದನ್ನು ಕೂಡ ಹಿಂದೆ ಮುಂದೆ ಯೋಚಿಸಿಕೊಂಡು ಮಾಡಬೇಕಾದಂತಹಾ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group