ರಾಜ್ಯ ಸುದ್ದಿ

ಸರಕಾರದಿಂದ ಸೈಟ್‌ ಪಡೆದುಕೊಳ್ಳಲು ಕೆಲವರು ಸಾಹಿತಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದಾರೆ: ಅನಂತ್ ಕುಮಾರ್ ಹೆಗಡೆ

‘ಮೊದಲು ಮಾನವನಾಗಬೇಕೆಂದು ಹೇಳುವವರೇ, ಇಷ್ಟು ದಿನ ನಾವೇನು ದನಗಳಾಗಿದ್ದೇವಾ?’ 

ವರದಿಗಾರ (ಜ.17): ‘ಸರಕಾರದಿಂದ ಸೈಟ್‌ ಪಡೆದುಕೊಳ್ಳಲು ಕೆಲವರು ಸಾಹಿತಿ ಎನ್ನುವ ಪಟ್ಟ ಕಟ್ಟಿಕೊಂಡಿದ್ದಾರೆ. ಬರೆದಿದ್ದೇ ಸಾಹಿತ್ಯ, ಗೀಚಿದ್ದೇ ಕವಿತೆ ಎನ್ನುವಂತಾಗಿದೆ. ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ತುದಿಯೂ ಇಲ್ಲ, ಬುಡವೂ ಇಲ್ಲ’ ಎಂದು ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತೆ ಜಾತ್ಯಾತೀತರನ್ನು ಟೀಕಿಸಿದ್ದಾರೆ.

ಅವರು ಬೆಳಗಾವಿಯ ಸ್ಕಿಲ್‌ ಇಂಡಿಯಾ ಆಯೋಜಿಸಿರುವ ‘ಸ್ಕಿಲ್‌ ಆನ್‌ ವ್ಹೀಲ್ಸ್‌’ ಕೌಶಲ ಅಭಿವೃದ್ಧಿ ಕುರಿತು ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದಾರೆ.

ಜೀವನದಲ್ಲಿ ಏನಾಗಬೇಕೆಂದು ಕೇಳಿದರೆ ಕೆಲ ಬುದ್ಧಿ ಜೀವಿಗಳು ಮೊದಲು ಮಾನವನಾಗಬೇಕು ಎಂದು ಹೇಳುತ್ತಾರೆ. ಹಾಗಾದರೆ ಇಷ್ಟು ದಿನ ನಾವೇನು ದನಗಳಾಗಿದ್ದೇವಾ? ಮನುಷ್ಯರಾಗಿ ಹುಟ್ಟಿದ ಮೇಲೆ ನಾವು ಮನುಷ್ಯರಲ್ಲವೇ?’ ಎಂದು ಮತ್ತೊಮ್ಮೆ ಕೇಂದ್ರ ಕೌಶಲ್ಯಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಜಾತ್ಯಾತೀತರ ವಿರುದ್ಧ ಹರಿಹಾಯ್ದಿದ್ದಾರೆ.

‘ಮನುಷ್ಯರಾಗಿ ಹುಟ್ಟಿದ ಮೇಲೆ ಮತ್ತೆ ಮನುಷ್ಯರಾಗುವುದರಲ್ಲಿ ವಿಶೇಷ ಏನಿದೆ? ಅವರಿಗೆ ದೃಷ್ಟಿದೋಷವಿರಬೇಕು. ಸಂಸ್ಕೃತದಲ್ಲಿ ಶ್ಲೋಕವೊಂದಿದೆ. ಮನುಷ್ಯರಾಗಿ ಹುಟ್ಟಿದವರು ದೇವರಾಗಲು ಪ್ರಯತ್ನಿಸಬೇಕು. ನಾವೆಲ್ಲ ದೇವರಾಗಲು ಪ್ರಯತ್ನಿಸಬೇಕು’ ಎಂದು ಇದೇ ಸಂದರ್ಭ ಹೇಳಿದ್ದಾರೆ.

‘ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಹೆಚ್ಚಾಗಲಿದೆ. ಬಲಿಷ್ಠರು ಮಾತ್ರ ಬದುಕುವಂತಹ ಸ್ಥಿತಿ ಬರಲಿದೆ. ದುರ್ಬಲರನ್ನು ದೇವರಲ್ಲ, ಅವರ ತಾಯಿ ಕೂಡ ರಕ್ಷಿಸಲಾರಳು. ಅದಕ್ಕಾಗಿ ಯುವಕರು ಬಲಿಷ್ಠರಾಗಲು ಪ್ರಯತ್ನಿಸಬೇಕು. ನಾವು ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೊಂದಬೇಕು. ಹುಟ್ಟಿದ್ದು ಆಳಲಿಕ್ಕೋಸ್ಕರ ಎನ್ನುವ ಧ್ಯೇಯದೊಂದಿಗೆ ಯುವಕರು ಮುನ್ನುಗ್ಗಬೇಕು’ ಎಂದು ಹೇಳಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group