ವರದಿಗಾರ-ಮಂಗಳೂರು (ಜ.15): ಪ್ರವಾಸಿ ನಂದಾವರ ಚಾರಿಟೇಬಲ್ ಟ್ರಸ್ಟ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಬಂಟ್ವಾಳ ತಾಲೂಕಿನ ಸ.ಹಿ.ಪ್ರಾ.ಶಾಲೆ ನಂದವಾರದಲ್ಲಿ ಆದಿತ್ಯವಾರ ಬೃಹತ್ ರಕ್ತದಾನ ಶಿಬಿರವು ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಫಿ ಸ ಅದಿ ಬೆಂಗಳೂರು, ಮನುಷ್ಯ ವರ್ಗಕ್ಕೆ ಮಾನವೀಯತೆಯು ಅತೀ ಮುಖ್ಯವಾಗಿರುತ್ತದೆ. ರಕ್ತದಾನದಲ್ಲಿ ವ್ಯಕ್ತಿಯ ಜೀವ ಉಳಿಸುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕಾಗಿದೆ.ಈಗಿನ ಕಾಲದಲ್ಲಿ ಕರಾವಳಿ ಪ್ರದೇಶಗಳಲ್ಲಿ ನಡೆಯುವ ಕೋಮು ಸಂಘರ್ಷಕ್ಕೆ ರಕ್ತದಾನದಂತಹ ಮಾನವೀಯ ಸೇವೆಗಳ ಮೂಲಕ ಮಾನವೀಯತೆಯನ್ನು ಮೆರೆಯುವುದರ ಮೂಲಕ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಪ್ರವಾಸಿ ನಂದಾವರದ ಹಮ್ಮಿಕೊಂಡಿರುವ ರಕ್ತದಾನ ಶಿಬಿರವು ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ ಎಂದರು.
ಈ ಸಂದರ್ಭದಲ್ಲಿ ಮಜೀದ್ ದಾರಿಮಿ (ಖತೀಬರು ಕೇಂದ್ರ ಜುಮಾ ಮಸೀದಿ ನಂದಾವರ), ಎಂ.ಬಿ ಆದಂ ಸಾಲಿ (ಅಧ್ಯಕ್ಷರು ಜುಮಾ ಮಸೀದಿ ನಂದಾವರ), ಹನೀಫ್ ಖಾನ್ ಕೊಡಾಜೆ(ಜಿಲ್ಲಾಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ), ಗೋಪಾಲಚಾರ್ಯ(ಅಧ್ಯಕ್ಷರು, ನಂದವಾರ ಶಾಲೆ), ಶರೀಫ್( ಅಧ್ಯಕ್ಷರು, ಸಜಿಪ ಗ್ರಾಮ ಪಂಚಾಯತ್), ಸಿದ್ದೀಖ್ ಮಂಜೇಶ್ವರ (ಅಧ್ಯಕ್ಷರು, ಬ್ಲಡ್ ಡೋನರ್ಸ್ ಮಂಗಳೂರು), ಮುಹಮ್ಮದ್ (ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೆಸ್ ಪಾಣೆಮಂಗಳೂರು), ಕರೀಮ್ (ಅಧ್ಯಕ್ಷರು, ಪ್ರೌಢ ಶಾಲೆ ನಂದಾವರ),ಕಲಂದರ್ ಶಾಫಿ(ನಂದವಾರ), ಲತೀಪ್ ಉಪ್ಪಿನಂಗಡಿ, ಮುಸ್ತಾಫ ಕೆ.ಸಿ.ರೋಡ್ (ಕಾರ್ಯನಿರ್ವಾಹಕರು ಬ್ಲಡ್ ಡೋನರ್ಸ್ ಮಂಗಳೂರು) ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಮ್ಮದ್ ಸವಾದ್ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಫಿ ಸಅದಿ ಬೆಂಗಳೂರು ಇವರು ರಕ್ತದಾನ ಮಾಡಿ ಯುವಕರಿಗೆ ಮಾದರಿಯಾದರು.ಹಲವಾರು ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಪ್ರವಾಸಿ ನಂದಾವರ ಚಾರಿಟೇಬಲ್ ಟ್ರಸ್ಟ್ ಇದರ ಸಂಘಟಕರು,ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇದರ ಸಿಬ್ಬಂದಿ ವರ್ಗದವರು ಹಾಗೂ ಊರಿನ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಕ್ಬರ್ ಆಲಿ ನಂದಾವರ ನಿರೂಪಿಸಿ ಸಮದ್ ನಂದಾವರ ವಂದಿಸಿದರು.
