ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಿಕೊಳ್ಳುವುದು ಸಾಮಾನ್ಯ. ಆದರೆ ಅದಕ್ಕೂ ಒಂದು ಮಿತಿಯಿದೆಯಲ್ಲವೇ? ಟೀಕೆ, ವಿಮರ್ಶೆಗಳು ಆರೋಗ್ಯಕರವಾಗಿದ್ದರೆ ಉತ್ತಮ. ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳ ಅರೋಗ್ಯಕರ ಚರ್ಚೆ, ಟೀಕೆ, ವಿಮರ್ಶೆಗಳು ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಮೇಲಿರುವ ಗೌರವವನ್ನು ಹೆಚ್ಚುವಂತೆ ಮಾಡುತ್ತದೆ. ಆದರೆ, ಇನ್ನೊಬ್ಬರನ್ನು ಟೀಕಿಸುವ ಭರದಲ್ಲಿ ರಾಜಕೀಯ ಪಕ್ಷದ ಪದಾಧಿಕಾರಿಗಳು ಅತ್ಯಂತ ನೀಚ ಮಟ್ಟಕ್ಕೆ ಇಳಿದರೆ ಹೇಗೆ??
ಹೌದು, ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಈ ರೀತಿಯ ಕೊಳಕು ಮನೋಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಜನವರಿ 9ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯರ ಅತ್ಮೀಯತೆಯನ್ನು ಎತ್ತಿ ತೋರಿಸುತ್ತಿರುವ ವೀಡಿಯೋ ಹಾಕಿ ನೀಚ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಮಾಡಿ ತನ್ನ ಕೈ ಸುಟ್ಟುಕೊಂಡಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಸೆಲ್ಫೀ ತೆಗೆಯಲು ಪ್ರಯತ್ನಿಸುತ್ತಿದ್ದ ಯುವತಿಯ ಕೈ ಹಿಡಿದು ಮುಖ್ಯಮಂತ್ರಿಯವರು ತನ್ನ ಬಳಿ ನಿಂತು ಸೆಲ್ಫೀ ತೆಗೆಯಲು ಅನುಮತಿಸಿದ್ದರು. ವೀಡಿಯೋ ನೋಡಿದರೆ ನೀವೇ ಅರ್ಥಮಾಡಿಕೊಳ್ಳಬಹುದು.
Can @siddaramaiah keep his hands off women in public? pic.twitter.com/bk6pKHAR0c
— Amit Malviya (@malviyamit) January 9, 2018
ಈ ವಿಡಿಯೋ ಟ್ವೀಟ್ ಮಾಡಿದ ಅಮಿತ್ ಮಾಳವೀಯ, “ಸಿದ್ದರಾಮಯ್ಯರು ಆ ಯುವತಿಯ ಮೈಯಿಂದ ಕೈ ತೆಗೆಯಬಹುದೇ” ಎಂದು ಪ್ರಶ್ನಿಸಿದ್ದರು. ಆತನ ಬೆಂಬಲಿಗರು ಅದನ್ನು ರಿಟ್ವೀಟ್ ಮಾಡಿ, ಅದೇ ಭಾಷೆಯಲ್ಲಿ ಕಮೆಂಟ್ ಹಾಕಿ ಆನಂದಿಸಿದರೂ, ಪ್ರಜ್ಞಾವಂತರು ಈ ಟ್ವೀಟ್ ಡಿಲೀಟ್ ಮಾಡಿ ಮುಖ್ಯಮಂತ್ರಿಯವರಲ್ಲಿ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಶಾಸಕರು, ಅತ್ಯಾಚಾರ, ಕಿರುಕುಳ ನೀಡಿರುವ ಶಾಸಕ, ಸಂಸದರನ್ನು ಹೊಂದಿರುವ ಪಕ್ಷದ ಪದಾಧಿಕಾರಿಯೊಬ್ಬನಿಂದ ಇದನ್ನಲ್ಲದೇ ಇನ್ನೇನು ನಿರೀಕ್ಷಿಸಬಹುದು ಎಂದು ಇನ್ನು ಕೆಲವರು ಕಿಡಿಕಾರಿದರು. ಕಾಮಾಲೆ ರೋಗಿಗಳಿಗೆ ಜಗತ್ತೇ ಹಳದಿ ಎಂದೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಬೆಂಬಲಿಗರು ಮಾತ್ರವಲ್ಲದೇ ವಿರೋಧಿಗಳ ಮನಸ್ಸನ್ನೂ ಗೆದ್ದಿರುವ ಜನಪರ ಮುಖ್ಯಮಂತ್ರಿಯೋರ್ವರನ್ನು ಈ ರೀತಿ ನೀಚ ರೀತಿಯಲ್ಲಿ ಬಿಂಬಿಸಲು ಪ್ರಯತ್ನಿಸಿದ ಬಿಜೆಪಿಯ ಐಟಿ ಸೆಲ್ ನ ರಾಷ್ಟ್ರೀಯ ಮುಖ್ಯಸ್ಥನಿಗೆ, ಇದೀಗ ಸಿದ್ದರಾಮಯ್ಯರಿಗೆ ಜನರ ಮನಸ್ಸಿನಲ್ಲಿರುವ ಪ್ರೀತಿ ಹಾಗೂ ಗೌರವ ತಿಳಿದಿರಬಹುದು.
A dirty mind has dirty thoughts..@malviyamit you are a classic example. https://t.co/07aYfRloO4
— Dinesh Gundu Rao (@dineshgrao) January 10, 2018
Delete the tweet, apologise to our CM @siddaramaiah and resign from IT cell in-charge! ….Let me tell you, this tweet is shocking and revolting and won’t be taken lightly by anyone including die-hard Modi/bjp supporters. https://t.co/nJKibGV7rT
— VADIRAJ C S (@vschanna) January 10, 2018
ನಿಮ್ಮ ಆರೋಪ ಸಂಘ ಪರಿವಾರದ @RSSorg & ಬಿಜೆಪಿ @BJP4India ಪಕ್ಷದ ಪರಂಪರೆ , ಸಂಸ್ಕೃತಿ & ಎಂತಾ ವಿಕ್ರುತ ಮನಸ್ಸುಳ್ಳವರು ಎಂಬುದನ್ನ ಎತ್ತಿ ತೋರಿಸುತ್ತದೆ.
— ಬಸವರಾಜು.ಎ.ಪಿ. (@sribasavaraju) January 9, 2018
ನಿಮ್ಮ ಯೋಚನೆ ಸರಿಯಾಗಿದ್ದರೆ ಈ ರೀತಿಯ ಮಾತು ನಿಮ್ಮಿಂದ ಬರ್ತಿತ್ತ. @siddaramaiah @CMofKarnataka ಅವರನ್ನು ಟೀಕಿಸುವ ಭರದಲ್ಲಿ ಒಂದು ಹೆಣ್ಣನ್ನು ಅಪಮಾನಿಸಿದ್ದೀರಿ. ಅವರಿಬ್ಬರ ವಯಸ್ಸಿನ ಅಂತರ ನೋಡಿ ಮಾತಾಡಿ ಸ್ವಾಮಿ.
— Youth Supporters HDK (@HDKsupporters) January 9, 2018
Seriously!! If u think that u can push down 40+ years experienced seasoned politician by these cheap tricks, it will boomerang. @INCKarnataka should not get trapped like how Iyer did in Guj elections.
— Kiran (@kodlady) January 9, 2018
