ವರದಿಗಾರ (ಜ 12 ) : ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ತಮ್ಮ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದ ಸುಪ್ರೀಮ್ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರುಗಳನ್ನು ಬಹುಮುಖ್ಯವಾಗಿ ಕಾಡಿದ ಐದು ಅಂಶಗಳು ಬಹಿರಂಗಗೊಡಿದೆ.
1. ನಾಲ್ವರು ಹಿರಿಯ ನ್ಯಾಯಾಧೀಶರುಗಳ ಪ್ರಕಾರ ದೇಶದ ಪ್ರಮುಖ ವಿಷಯಗಳ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಬಳಿ ಇಟ್ಟುಕೊಳ್ಳುತ್ತಾರೆ. ಅದನ್ನು ಇತರೆ ಹಿರಿಯ ನ್ಯಾಯಾಧೀಶರುಗಳ ನ್ಯಾಯಪೀಠಕ್ಕೆ ಹಂಚಿಕೆ ಮಾಡುವುದಿಲ್ಲ.
2. ದೇಶದಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಲ್ಲ ಹಲವು ಪ್ರಮುಖ ಕೇಸುಗಳ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶರು, ತಮಗೆ ಬೇಕಾದ ಹಾಗೂ ತಮ್ಮದೇ “ಆಯ್ದ” ಕೆಲವೊಬ್ಬರು ನ್ಯಾಯಾಧೀಶರುಗಳ ನ್ಯಾಯಪೀಠಕ್ಕೆ ವಿಚಾರಣೆ ನಡೆಸಲು ನೀಡಿದ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇಲ್ಲಿ ದೇಶದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುವುದು ನಾಲ್ವರು ನ್ಯಾಯಾಧೀಶರ ವಾದ. “ಇದನ್ನು ಯಾವ ಬೆಲೆ ತೆತ್ತಾದರೂ ತಡೆಯಬೇಕು” ಎಂಬುವುದು ಇವರ ಆಗ್ರಹವಾಗಿದೆ.
3. ಬಹುಮುಖ್ಯವಾಗಿ ಈ ನಾಲ್ವರು ನ್ಯಾಯಾಧೀಶರುಗಳನ್ನು ಕಾಡಿದ ಒಂದಂಶವೆಂದರೆ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಮುಖ ಆರೋಪಿಯಾಗಿದ್ದ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ನ್ಯಾಯಾಯಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಜಸ್ಟಿಸ್ ಲೋಯಾರವರ “ನಿಗೂಢ ಸಾವಿ”ನ ಕುರಿತಾಗಿನ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯ ಹೊಣೆಯನ್ನು ಸುಪ್ರೀಮ್ ಕೋರ್ಟಿನ ಮೊದಲ ನಾಲ್ಕು ನ್ಯಾಯಪೀಠಕ್ಕೆ ವಹಿಸದೆ ಅದನ್ನು ಕೋರ್ಟ್ ಸಂಖ್ಯೆ 10ಕ್ಕೆ ವಿಚಾರಣೆಗಾಗಿ ನೀಡಲಾಗಿದೆ. ಇಂತಹಾ ಅತ್ಯಂತ ಜಟಿಲ ಪ್ರಕರಣವೊಂದನ್ನು ಕಿರಿಯ ಹಂತದ ಕೋರ್ಟಿಗೆ ವಿಚಾರಣೆ ನಡೆಸಲು ನೀಡಿದ್ದು ಇವರ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ
4. ವೈದ್ಯಕೀಯ ಕಾಲೇಜು ನೇಮಕಾತಿ ಹಗರಣದ ತನಿಖೆ ಜಸ್ಟಿಸ್ ಚೆಲಮೇಶ್ವರ್ ನೇತೃತ್ವದ ನ್ಯಾಯಪೀಠದಿಂದ ನಡೆಯುತ್ತಿತ್ತು. ತದನಂತರ ತನಿಖೆಯನ್ನುಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಮಂದಿಯ ನ್ಯಾಯಪೀಠಕ್ಕೆ ವರ್ಗಾಯಿಸಲಾಯಿತು. ಆ ಪೀಠದಲ್ಲಿ ದೀಪಕ್ ಮಿಶ್ರಾ, ಚೆಲಮೇಶ್ವರ್, ಗೊಗೊಯಿ, ಲೋಕುರ್ ಹಾಗೂ ಜೋಸೆಫ್ ಕುರಿಯನ್ ಅವರನ್ನೊಳಗೊಂಡಿತ್ತು. ಕೊನೆಯಲ್ಲಿ ಇದರ ತನಿಖೆಯನ್ನು ನಡೆಸಲು ಕೋರ್ಟ್ ಸಂಖ್ಯೆ 7ಕ್ಕೆ ವರ್ಗಾಯಿಸಲಾಗಿತ್ತು. ಈ ಕುರಿತು ಇಂದು ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ಹಿರಿಯ ನ್ಯಾಯಾಧೀಶರು ತಮ್ಮ ಅಸಮಧಾನ ಹೊರ ಹಾಕಿದ್ದರು.
ವೈದ್ಯಕೀಯ ಕಾಲೇಜು ನೇಮಕಾತಿ ಹಗರಣ, ಹಾಲಿ ಮತ್ತು ಮಾಜಿ ಹೈಕೋರ್ಟ್ ನ್ಯಾಯಾಧೀಶರುಗಳು ಸುಪ್ರೀಮ್ ಕೊರ್ಟಿನ ಆದೇಶವನ್ನು ಉಲ್ಲಂಘಿಸಿ ಖಾಸಗಿ ಕಾಲೇಜುಗಳಿಗೆ ಎಂ ಬಿ ಬಿ ಎಸ್ ವಿದ್ಯಾರ್ಥಿಗಳನ್ನು ಸೇರಿಸುವ ಕುರಿತಾಗಿ ಆದೇಶ ನೀಡಿತ್ತು. ಇದು ದೇಶದಾದ್ಯಂತ ಚರ್ಚೆಗೊಳಪಟ್ಟಿತ್ತು
5. ಐದು ಮಂದಿಯ ನ್ಯಾಯಪೀಠದಿಂದ ಒಮ್ಮೆ ವಿಚಾರಣೆ ನಡೆಸಿದ ಪ್ರಕರಣದ ದಾಖಲೆಗಳನ್ನು ಪರಿಶೀಲಿಸುವುದು ಹಾಗೂ ಸಣ್ಣ ನ್ಯಾಯಾಧೀಶರುಗಳ ಒಂದು ಹೊಸ ನ್ಯಾಯಪೀಠ ರಚಿಸಿ ಅದನ್ನು ಓರ್ವ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರು ಮುನ್ನಡೆಸಿದ್ದು ಬಹುದೊಡ್ಡ ತಪ್ಪಾಗಿತ್ತು ಎಂಬುವುದು ಈ ನಾಲ್ವರ ವಾದವಾಗಿತ್ತು
