ವಿದೇಶ ಸುದ್ದಿ

 ಭಾರತ ತಲುಪಿದ ವಿಕ್ರಂ ಸಿಂಗ್  ಮೃತ ದೇಹ: ISF ಸೇವೆಗೆ ಸಾರ್ವಜನಿಕ ಪ್ರಶಂಸೆ

ವರದಿಗಾರ- ಸೌದಿ ಅರೇಬಿಯಾ: ಇಲ್ಲಿನ ಮುಷೈತ್ ನಲ್ಲಿ ನಡೆದ ಅಪಘಾತದಿಂದ ಮೃತಪಟ್ಟಿದ್ದ ಹರ್ಯಾಣ ಮೂಲದ ವಿಕ್ರಂ ಸಿಂಗ್ ರ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡುವಲ್ಲಿ ಇಂಡಿಯನ್ ಸೋಶಿಯಲ್ ಫಾರಂ (ISF) ಯಶಸ್ವಿಯಾಗಿದ್ದು, ಅನಿವಾಸಿಯಾಗಿದ್ದುಕೊಂಡು ತಮ್ಮ ಯಶಸ್ವೀ ಸಮಾಜಸೇವೆಗೆ  ಸಾರ್ವಜನಿಕ ವಲಯದಿಂದ ಪ್ರಶಂಸನೆ ವ್ಯಕ್ತವಾಗಿದೆ. 
ಕಮೀಸ್ ಮುಷೈತ್  ನಗರದಲ್ಲಿ ಟ್ಯಾಂಕರ್  ಚಾಲಕರಾಗಿ  ದುಡಿಯುತ್ತಿದ್ದ ಹರ್ಯಾಣ ರಾಜ್ಯದ ನಿವಾಸಿ ವಿಕ್ರಂ ಸಿಂಗ್ ರವರು  ಟ್ಯಾಂಕರ್ ಅಫಘಾತಗೊಂಡು  ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿರುವ ಮೃತದೇಹದವನ್ನು ಅಂತ್ಯಕ್ರಿಯೆಗಾಗಿ ಸ್ವಗ್ರಾಮಕ್ಕೆ ಕಳುಹಿಸಿಕೊಡುವ  ಹಿನ್ನೆಲೆಯಲ್ಲಿ  ಮೃತರ ವಾರೀಸುದಾರರು ಯಾರೂ ಇಲ್ಲದ ಕಾರಣ ಇಂಡಿಯನ್ ಎಂಬೆಸ್ಸಿಯವರು, ಜಿದ್ದ ಎಂಬೆಸ್ಸಿ ಕಾನ್ಸುಲೇಟ್ ಸದಸ್ಯ, ಇಂಡಿಯನ್  ಸೋಶಿಯಲ್ ಫೋರಂನ ಕಮೀಸ್ ಮುಷೈತ್ ಘಟಕದ ಅಧ್ಯಕ್ಷರಾದ ಹನೀಫ್  ಮಂಜೇಶ್ವರ್ ರನ್ನು ಸಂಪರ್ಕಿಸಿ ನೆರವಿಗಾಗಿ ಮನವಿ ಮಾಡಿದ್ದರು.
ಎಂಬೆಸ್ಸಿಯ ಮನವಿಗೆ ಸ್ಪಂದಿಸಿ, ಹನೀಫ್  ಮಂಜೇಶ್ವರ,  ಸಾದಿಕ್ ಉಳ್ಳಾಲ,  ತನ್ವೀರ್ ಮೈಂದಾಳ, ಸಾದಿಕ್ ಉಳ್ಳಾಲ್, ಫಾರೂಕ್ ಉಳ್ಳಾಲ್, ನೌಶಾದ್ ಏರ್ ಅರೇಬಿಯಾ ಇವರನ್ನೊಳಗೊಂಡ  ತಂಡವು ತಕ್ಷಣವೇ ಸ್ಪಂದಿಸಿ ಸೌದಿ ಅರೇಬಿಯಾದ ಕಾನೂನಿನಂತೆ ಪೊಲೀಸ್ ಠಾಣೆ ಮತ್ತು ಅವರ ಕಫೀಲ್ (ವೀಸಾ ಪ್ರಾಯೋಜಕ) ನ್ನು ನಿರಂತರವಾಗಿ  ಭೇಟಿಮಾಡಿ, ಕಾನೂನಿನ ಅವಶ್ಯಕತೆಗೆ ಬೇಕಾಗಿದ್ದ ದಾಖಲೆಗಳನ್ನು ಸರಿಪಡಿಸಿ ವ್ಯವಸ್ಥಿತಗೊಳಿಸಿದರು.
ಇಂಡಿಯನ್ ಸೋಶಿಯಲ್ ಫೋರಂ (ISF) ಕಮೀಸ್ ಮುಷ್ಯತ್ ಘಟಕದ ಸತತ ಪರಿಶ್ರಮದ ಫಲವಾಗಿ  ಮೃತದೇಹವನ್ನು ಆಗಸ್ಟ್ 17ರಂದು  ಅಭಾ ವಿಮಾನ ನಿಲ್ದಾಣದಿಂದ ಚಂಢೀಗಡ್   ವಿಮಾನ ನಿಲ್ದಾಣದ  ಮೂಲಕ  ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಯಿತು.
ಇಂಡಿಯನ್ ಸೋಶಿಯಲ್ ಫೋರಂನ ನಿಸ್ವಾರ್ಥ ಸೇವೆಗೆ, ಮೃತರ ಮಗ, ಪತ್ನಿ   ಹಾಗೂ  ಸಂಬಂಧಿಕರು ಕಣ್ಣೀರಿನೊಂದಿಗೆ ಹೃದಯದ ಮಾತಿನಿಂದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಮೃತರ ಅಕಾಲಿಕ ಮರಣಕ್ಕೆ ಇಂಡಿಯನ್ ಸೋಶಿಯಲ್ ಫಾರಂ ಪ್ರಕಣೆಯಲ್ಲಿ ಸಂತಾಪ ವ್ಯಕ್ತಪಡಿಸಿದೆ.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group