ರಾಜ್ಯ ಸುದ್ದಿ

ಕೋಮು ರಾಜಕಾರಣವನ್ನು ಜನತೆ ತಿರಸ್ಕರಿಸಲಿ : ಅಬ್ದುಲ್ ಹನ್ನಾನ್

ವರದಿಗಾರ (ಜ 12) : ಕಳೆದ ಕೆಲ ತಿಂಗಳುಗಳಿಂದ ಕರ್ನಾಟಕದಲ್ಲಿ ತೀವ್ರ ಸ್ವರೂಪದ ಕೋಮು ರಾಜಕಾರಣದ ಮೂಲಕ ಮತ ಗಳಿಕೆಯ ಕಸರತ್ತಿನಲ್ಲಿ ಬಿಜೆಪಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ರವರು ತಿಳಿಸಿದ್ದಾರೆ.

ಕೊಲೆ, ಅತ್ಯಾಚಾರ, ಉದ್ರೇಕಕಾರಿ ಹೇಳಿಕೆ, ವಿದ್ಯಾರ್ಥಿನಿಯರ ಸ್ವಾತಂತ್ರ್ಯ ನಿಯಂತ್ರಣ, ಪ್ರತಿಭಟನೆಯ ನೆಪವೂಡ್ಡಿ ಶಾಂತಿ ಭಂಗ ಮಾಡುವುದು ಹಾಗೂ ಮಾಧ್ಯಮಗಳ ಮೂಲಕ ಪ್ರಚೋದನೆ ಹೇಳಿಕೆ ನೀಡುವುದು ಇತ್ಯಾದಿ ಸಮಾಜಕ್ಕೆ ಮಾರಕವಾದ ಕೆಲಸ- ಕಾರ್ಯಗಳಲ್ಲಿ ತೊಡಗಿಸಿ ಕೊಂಡಿರುವ ಕೋಮುವಾದಿ ಬಿಜೆಪಿ ಮತ್ತು ಸಂಘಟನೆಗಳು ರಾಜ್ಯದಲ್ಲಿ ಕೋಮು ಗಲಭೆ ನಡೆಸಲು ಸಂಚು ರೂಪಿಸಿದ್ದು, ಅದರ ಪರಿಣಾಮವಾಗಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಕೆಲ ಅನಾಹುತಗಳನ್ನು ಮಾಡಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಎಲ್ಲಾ ಹುನ್ನಾರಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಾತಿ, ಧರ್ಮ, ಭಾಷಿಗರು ಒಂದಾಗಿ ಕೋಮುವಾದ ರಾಜಕಾರಣಕ್ಕೆ ಅಂತ್ಯವನ್ನು ಹಾಡ ಬೇಕಾಗಿದೆ.

ಕರ್ನಾಟಕಕ್ಕೆ ಸೌಹಾರ್ದದ ದೊಡ್ಡ ಇತಿಹಾಸವಿದೆ. ನಮ್ಮ ನಾಡಿನಲ್ಲಿ ಹಲವಾರು ದೇಶ-ರಾಜ್ಯದವರು ಬಹಳ ಅನ್ಯೋನ್ಯವಾಗಿ ಬಾಳುತ್ತಿದ್ದು, ರಾಜ್ಯದ ಅಭಿವೃದ್ಧಿಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜನತೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಮ್ಮ ಈ ರಾಜ್ಯವನ್ನು ಇನ್ನೂ ಸಮೃದ್ಧಿಯಾಗಿ ಬೆಳೆಸ ಬೇಕು. ಅಮಾಯಕರ ಜೀವವನ್ನು ಬಲಿ ಪಡೆದು ರಾಜಕಾರಣ ಮಾಡುವ ಶವ ರಾಜಕಾರಣಕ್ಕೆ ಜನತೆ ತಿಲಾಂಜಲಿ ಹಾಡಲಿ. ಈ ಸಂದರ್ಭದಲ್ಲಿ ಮಾಧ್ಯಮದವರ ಜವಾಬ್ದಾರಿಯೂ ಸಹ ಹೆಚ್ಚಿದೆ. ಕಪೋಲಕಲ್ಪಿತ ಹಾಗೂ ಪೂರ್ವ ಗ್ರಹ ಪೀಡಿತ ಸುದ್ದಿಯನ್ನು ಬಿತ್ತರಿಸದೆ ಮಾಧ್ಯಮ ತನ್ನ ಜವಾಬ್ದಾರಿಯನ್ನು ಅರಿತು ನೈಜ ಸುದ್ದಿ ಪ್ರಚಾರ ಪಡಿಸಲಿ ಎಂದು ಹನ್ನಾನ್ ರವರು ಆಶಿಸಿದ್ದಾರೆ.

ರಾಜ್ಯದಲ್ಲಿ ಶಾಂತಿ ಭಂಗ ಮಾಡುವವರ ಮೇಲೆ ಯಾವುದೇ ಮುಲಾಜಿಲ್ಲದೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ಕೋಮುವಾದಿ ಗೂಂಡಾಗಳನ್ನು ನಿಯಂತ್ರಣದಲ್ಲಟ್ಟು ರಾಜ್ಯದ ಶಾಂತಿ ಕಾಪಾಡುವಂತೆ SDPI ಆಗ್ರಹಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group