ರಾಜ್ಯ ಸುದ್ದಿ

ಸಿದ್ದು ಸರಕಾರದ ಅಪ್ರತಿಮ ಸಾಧನೆ ; ನೀಡಿದ್ದ 165 ಆಶ್ವಾಸನೆಗಳಲ್ಲಿ 155 ಪೂರ್ತಿ!

ವರದಿಗಾರ (ಜ.11): 2013ರ ವಿಧಾನಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ 165 ಆಶ್ವಾಸನೆಗಳನ್ನು ಕರುನಾಡಿನ ಜನತೆಗೆ ನೀಡಿತ್ತು. ಈದೀಗ ಕರ್ನಾಟಕವು ಮತ್ತೊಮ್ಮೆ ವಿಧಾನಸಭೆಯ ಚುನಾವಣೆಗೆ ತಯಾರಾಗುತ್ತಿದ್ದಂತೆ ಕಾಂಗ್ರೆಸ್, ತನ್ನ ಚುನಾವಣಾ ಪೂರ್ವ 165 ಆಶ್ವಾಸನೆಗಳಲ್ಲಿ 155 ಆಶ್ವಾಸನೆಗಳನ್ನು ಈಡೇರಿಸಲಾಗಿದೆ ಎಂದು ತಿಳಿಸಿದೆ. ಹೌದು, ಇದೇನೂ ದೊಡ್ಡ ವಿಷಯವಲ್ಲ ಎಂದು ನೀವು ಹೇಳಬಹುದು. ಆದರೆ, ಭಾರತೀಯ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷಗಳ ಸಾಧನೆಯನ್ನು ಗಮನಿಸಿದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರವು ತನ್ನ ಆಶ್ವಾಸನೆಗಳಲ್ಲಿ 94% ಈಡೇರಿಸಿದ್ದರೆ ಅದನ್ನು ಸಾಧನೆ ಎಂದೇ ಹೇಳಬಹುದು.

ಚುನಾವಣೆಗೆ ಮುನ್ನ ಹಲವು ಕನಸುಗಳನ್ನು ತೋರಿಸಿ, ಚುನವಣಾ ವಿಜಯದ ನಂತರ ಅವೆಲ್ಲವೂ ‘ಜುಮ್ಲಾ’ಗಳೆಂದು ಹೇಳಿ ತಪ್ಪಿಸಿಕೊಳ್ಳುವ ರಾಜಕಾರಣಿಗಳೇ ಹೆಚ್ಚಾಗಿರುವಾಗ ಈ ರೀತಿಯ ಸಾಧನೆಗಳನ್ನು ಅಭಿನಂದನಾರ್ಹವಾಗಿವೆ. ತನ್ನ ಚುನಾವಣಾ ಪೂರ್ವ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ದೆಹಲಿಯ ಆಪ್ ಸರಕಾರ ಹಾಗೂ ಪಂಜಾಬಿನ ಕಾಂಗ್ರೆಸ್ ಸರಕಾರ ಜನಮನ ಗೆದ್ದಿವೆ. ಇದೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡಾ ಈ ಪಟ್ಟಿಗೆ ಸೇರಿದೆ.

ಕಡೆಗಣಿಸಲಾಗದ ವಿಫಲತೆಗಳು:

94% ಚುನಾವಣಾ ಪ್ರಣಾಳಿಕೆಯ ಆಶ್ವಾಸನೆಗಳನ್ನು ಈಡೇರಿಸಿದ ಸರಕಾರವನ್ನು ಅಭಿನಂದಿಸುವ ಭರದಲ್ಲಿ ಕೆಲವೊಂದು ಪ್ರಮುಖ ವಿಫಲತೆಗಳನ್ನು ಕಡೆಗಣಿಸುವಂತಿಲ್ಲ. ಅಲ್ಪಸಂಖ್ಯಾತರ ಅಭಿವೃದ್ಧಿಯ ಬಗ್ಗೆ ನೀಡಿದ ಆಶ್ವಾಸನೆಗಳಲ್ಲಿ ಕಾಂಗ್ರೆಸ್, ಜಸ್ಟಿಸ್ ರಂಗನಾಥ್ ಹಾಗೂ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಈ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ ಹಾಗೂ ಇದು ಇತ್ತೀಚೆಗಿನ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೀಡಾಗುತ್ತಿರುವ ವಿಷಯವಾಗಿದೆ. ಸಿದ್ದರಾಮಯ್ಯರ ಜಾತ್ಯತೀತ ಸರಕಾರವನ್ನು ಬೆಂಬಲಿಸುವ ಅಲ್ಪಸಂಖ್ಯಾತ ಮತದಾರರಲ್ಲೂ ಈ ಕುರಿತು ತೀವ್ರ ಅಸಮಾಧಾನವಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group