ರಾಜ್ಯ ಸುದ್ದಿ

ಹಿಂದೂ ಜಾಗರಣಾ ವೇದಿಕೆಯ ಮುಖಂಡನ ತಲವಾರು ದಾಳಿಯ ಕಟ್ಟುಕಥೆಗೆ ಬಶೀರ್ ಹತ್ಯೆಯ ಸಿಸಿಟಿವಿ ವೀಡಿಯೋವನ್ನು ಪ್ರಸಾರ ಮಾಡಿದ ‘ಪಬ್ಲಿಕ್ ಟಿವಿ’ !

ವರದಿಗಾರ (ಜ 10 ) : ಜನವರಿ 8 ರಂದು ಸುರತ್ಕಲ್ ಹಿಂದೂ ಜಾಗರಣಾ ವೇದಿಕೆಯ ಸಹ ಸಂಚಾಲಕನೆನ್ನಲಾದ ಭರತ್ ರಾಜ್ ಎನ್ನುವವ, ಸುಮಾರು ರಾತ್ರಿ 7.45 ರ ವೇಳೆಗೆ ನನ್ನ ಮೇಲೆ ನಾಲ್ಕು ಮಂದಿಯ ತಂಡವೊಂದು ತಲವಾರುಗಳಿಂದ ದಾಳಿ ಮಾಡಿದ್ದು, ನಾನು ಪಕ್ಕದ ಮನೆಗೆ ಒಡಿ ತಪ್ಪಿಸಿಕೊಂಡೆ ಎಂದು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಸುದ್ದಿ ಅದಾಗಲೇ ದೀಪಕ್ ಹಾಗೂ ಬಶೀರ್ ರವರ ಹತ್ಯೆಗಳಿಂದ ಜರ್ಜರಿತಗೊಂಡಿದ್ದ ದಕ್ಷಿಣ ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಮಾಧ್ಯಮಗಳಲ್ಲಿ ಬ್ರೇಕಿಂಗ್ ಸುದ್ದಿಗಳಾಗಿ ಬರತೊಡಗಿದವು. ಅಚ್ಚರಿಯೆಂಬಂತೆ ಘಟನೆ ನಡೆದ ಕ್ಷಣಾರ್ಧದಲ್ಲಿ ಪಬ್ಲಿಕ್ ಟಿವಿಯ ವರದಿಗಾರರು ಸುರತ್ಕಲ್ ಪರಿಸರದಲ್ಲಿ ಹಾಜರಾಗಿ, ದಾಳಿಗೊಳಗಾದೆನೆಂದು ಹೇಳಿಕೊಂಡ ಭರತ್ ರಾಜ್ ನ ಸಂದರ್ಶನ ನಡೆಸಿ ಆತನ ಹೇಳಿಕೆಯನ್ನು ಪಡೆದುಕೊಂಡು ಅದನ್ನು ಪ್ರಸಾರ ಮಾಡಿತು. ಆದರೆ ಈ ಘಟನೆಯ ವರದಿಗೆ ಪಬ್ಲಿಕ್ ಟಿವಿ ಆರಿಸಿಕೊಂಡಿದ್ದು ಜನವರಿ 7 ರಂದು ಮೃತರಾಗಿದ್ದ ಬಶೀರ್ ರವರ ಮೇಲೆ ಜನವರಿ 3 ರಂದು ನಡೆದಿದ್ದ ದಾಳಿಯ ಸಿಸಿಟಿವಿ ವೀಡೀಯೋವನ್ನು ! ಈ ಮೂಲಕ ಜಿಲ್ಲೆಯ ಜನರನ್ನು ಮತ್ತಷ್ಟು ಪ್ರಚೋದಿಸುವ ಪ್ರಯತ್ನ ಮಾಡಿತು.

ಇದೀಗಾಗಲೇ ಸುಳ್ಳು ಸುದ್ದಿಗಳನ್ನು ಪ್ರಸಾರಿಸುವ ಚಾನೆಲ್ ಎಂಬ ಕೆಟ್ಟ ಹೆಸರಿರುವ ಪಬ್ಲಿಕ್ ಟಿವಿಯ ಈ ಪ್ರಚೋದನಕಾರಿ ವರ್ತನೆಯನ್ನು ಸಾಮಾಜಿಕ ತಾಣಗಳಲ್ಲಿ ಜನರು ಭೇದ ಭಾವವಿಲ್ಲದೆ ಖಂಡಿಸಲಾರಂಭಿಸಿದರು. ಜಿಲ್ಲೆಯ ಜನರು ಮೊದಲೇ ಕೋಮು ಸಂಘರ್ಷಗಳಿಂದ ಜರ್ಜರಿತರಾಗಿರುವ ಸಂದರ್ಭದಲ್ಲೇ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯೋರ್ವ ಹಣೆದ ಕಟ್ಟುಕಥೆಗೆ,  ಸಂಬಂಧಪಡದ ಘಟನೆಯೊಂದರ ಕೋಮುಪ್ರಚೋದಕ ಸಿಸಿಟಿವಿ ವೀಡಿಯೋವನ್ನು ಹಾಕಿ ಜನರನ್ನು ಇನ್ನಷ್ಟು ಪ್ರಚೋದಿಸುವ ರೀತಿಯ ಈ ವರ್ತನೆ ಪಬ್ಲಿಕ್ ಟಿವಿಯ ಕುರಿತು ಜನರು ಅಸಹ್ಯಪಡುವಂತೆ ಮಾಡಿತು. ಕೋಮು ಸಂಘರ್ಷಗಳ ಸಂದರ್ಭದಲ್ಲಿ ಜನರಿಗೆ ಸೌಹಾರ್ದತೆಯ ಕುರಿತು ತಿಳಿ ಹೇಳಬೇಕಾದ ಮಾಧ್ಯಮಗಳೇ ಈ ರೀತಿ ವರ್ತಿಸಿದ್ದು ಮಾತ್ರ ಖೇದಕರ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದ ಆಕ್ರೋಶ

 

ಭರತ್ ರಾಜ್ ನ ತಲವಾರು ದಾಳಿಯು ಒಂದು ಕಟ್ಟುಕಥೆಯಾಗಿದ್ದು, ಖುದ್ದು ಮಂಗಳೂರು ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಅದನ್ನು ತನಿಖೆ ಮಾಡಿ ಭರತ್ ರಾಜ್ ನ ನಾಟಕವನ್ನು ಬಯಲಿಗೆಳೆದಿದ್ದರು. ಸ್ಥಳಕ್ಕೆ ಧಾವಿಸಿದ್ದ ಕಮಿಷನರ್, ಭರತ್ ರಾಜ್ ನನ್ನು ತನಿಖೆ ನಡೆಸಿದಾಗ ತದ್ವಿರುದ್ಧ ಹೇಳಿಕೆಗಳನ್ನು ನೀಡಿ ಅಲ್ಲಿಂದ ಆತ ಕಾಲ್ಕಿತ್ತಿದ್ದ. ಆದರೆ ಘಟನೆಯ ಸುದ್ದಿಯನ್ನು ವರದಿ ಮಾಡುವಾಗ ಪಬ್ಲಿಕ್ ಟಿವಿ ಮಾತ್ರ ಬೇರೆಯದೇ ಘಟನೆಯ ವೀಡೀಯೋ ಪ್ರಸಾರ ಮಾಡಿ ಜನರನ್ನು ಇನ್ನಷ್ಟು ಆತಂಕಿತರಾಗುವಂತೆ ಮಾಡಿತು. ಮಾಧ್ಯಮಗಳು ಇನ್ನಾದರೂ ಕೋಮು ಸೂಕ್ಷ್ಮತೆಗಳನ್ನು ಅರಿತುಕೊಂಡು ಜವಬ್ದಾರಿಯುತವಾಗಿ  ವರ್ತಿಸಬೇಕಾದುದು ಆದ್ಯ ಕರ್ತವ್ಯವಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group