ರಾಷ್ಟ್ರೀಯ ಸುದ್ದಿ

ಭಾಷಾ ವಿವಾದ: ಕೇಂದ್ರ ಸಚಿವರ ಹಿಂದಿ ಪತ್ರಕ್ಕೆ ಒಡಿಯ ಭಾಷೆಯಲ್ಲಿ ಉತ್ತರಿಸಿದ ಲೋಕಸಭಾ ಸದಸ್ಯ

ವರದಿಗಾರ: ಕೇಂದ್ರ ಸರಕಾರವು ಹಿಂದಿಯೇತರ ಭಾಷಾ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ಪ್ರಯತ್ನಿಸುತ್ತಿದೆ ಎಂಬ ಆರೋಪ ಹಾಗೂ ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂಬ ಬೇಡಿಕೆ ಕಾವೇರುತ್ತಿರುವಾಗಲೇ ಒಡಿಸ್ಸಾದ ಲೋಕಸಭಾ ಸದಸ್ಯರೊಬ್ಬರು ಹಿಂದಿ-ಹೇರಿಕೆಯ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿ ಜನರ ಮನ ಗೆದ್ದಿದ್ದಾರೆ.

ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್’ರವರು ಒಡಿಸ್ಸಾದ ಲೋಕಸಭಾ ಸದಸ್ಯರಾದ ತಥಾಗತ ಸತ್ಪಥಿಯವರಿಗೆ ಕಳುಹಿಸಿದ ಅಧಿಕೃತ ಪತ್ರವು ಹಿಂದಿ ಭಾಷೆಯಲ್ಲಾಗಿತ್ತು.
ಹಿಂದಿ ಭಾಷೆಯನ್ನು ಚೆನ್ನಾಗಿ ಅರ್ಥೈಸಲಾಗದ ಸತ್ಪಥಿ, ಕೇಂದ್ರ ಸಚಿವರಿಗೆ ಹಿಂದಿ ಅರ್ಥೈಸುವುದರಲ್ಲಿ ತನಗಿರುವ ಕಷ್ಟವನ್ನು ತನ್ನ ಭಾಷೆಯಾದ ಒಡಿಯಾದಲ್ಲಿ ಬರೆದು ಕಳುಹಿಸಿದ್ದಾರೆ.
ನಂತರ ಪತ್ರದ ಪ್ರತಿಯನ್ನು ಟ್ವಿಟ್ಟರ್’ನಲ್ಲಿ ತನ್ನ ಅಭಿಮಾನಿ-ಅನುಯಾಯಿಗಳ ಜೊತೆ ಹಂಚಿಕೊಂಡಿದ್ದಾರೆ.

ಬಲವಂತವಾದ ಹಿಂದಿ ಹೇರಿಕೆಯ ವಿರುದ್ಧ ಇದು ಒಂದು ವಿಶಿಷ್ಟ ಪ್ರತಿಭಟನೆಯಾಗಿದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group