ವರದಿಗಾರ(10): ಜನವರಿ6 ರಂದು ಮೂಡಿಗೆರೆ ಪಟ್ಟಣದಲ್ಲಿ ಧನ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ಸಂಘಪರಿವಾರ ಹಾಗೂ ಬಿಜೆಪಿ ನೇರ ಕಾರಣ ಎಂದು ಎ ಸ್ ಡಿ ಪಿ ಐ ಮೂಡಿಗೆರೆ ಕಾರ್ಯದರ್ಶಿ ಮಹಮ್ಮದ್ ಶರೀಫ್ ಆರೋಪಿಸಿದ್ದಾರೆ.
ಈ ಬಗ್ಗೆ ಸೂಕ್ತ ತನಿಕೆ ನಡೆಸುವಂತೆ ಪಕ್ಷದ ವತಿಯಿಂದ ತಹಸಿಲ್ದಾರವರಿಗೆ ಮನವಿ ಸಲ್ಲಿಸಿ ಮಾತಾನಾಡಿದ ಅವರು ಸಹೋದರಿ ಧನ್ಯಳು ಅನ್ಯ ಸಮುದಾಯವನ್ನು ಸಮರ್ಥನೆ ಮಾಡಿದ್ದಾಳೆ ಎನ್ನುವ ಏಕೈಕ ಕಾರಣಕ್ಕೆ ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಧನ್ಯಳಿಗ ಫೋನ್ ಮೂಲಕ ಬೆದರಿಕೆ ಹಾಕಿ ವಾಟ್ಸಾಪ್ ಚಾಟ್ ಗಳನ್ನು ಬೇರೆ ಗ್ರೂಪ್ ಗಳಿಗೂ ಶೇರ್ ಮಾಡಿದ್ದಾರೆ. ಅದಲ್ಲದೆ ಕೆಲವು ಸಂಘಪರಿವಾರ ಹಾಗೂ ಬಿಜೆಪಿ ಕಾರ್ಯಕರ್ತರು ಧನ್ಯಳ ಮನೆಗೆ ಹೋಗಿ ತಂದೆ ತಾಯಿ ಹಾಗೂ ಧನ್ಯಳಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಘಪರಿವಾರ ಹಾಗೂ ಬಿಜೆಪಿಯ ಅನೈತಿಕ ಪೋಲಿಸ್ ಗಿರಿಗೆ ಅಮಾಯಕ ಬಾಲಕಿ ಬಲಿಯಾಗಿರುವುದು ಖೇಧಕರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಇಲಾಖೆ ಈಗಾಗಲೇ ಬಿಜೆಪಿ ಯುವಮೋರ್ಚಾ ನಾಯಕನ್ನು ಬಂಧಿಸಿದ್ದು ಬಜರಂಗದಳ ಸಂಚಾಲಕ ಅವಿನಾಶ್ ತಪ್ಪಿಸಿಕೊಂಡಿದ್ದಾನೆ ಈತನ ಮೇಲೆ ಇತ್ತಿಚೀಗೆ ಮುಸಲ್ಮಾನರ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣ ದಾಖಲಾಗಿದ್ದು ಇತನನ್ನು ಹಾಗೂ ಇನ್ನುಳಿದವರನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಡಿಗೆರೆ ವಿಧಾನಸಭಾ ಅಧ್ಯಕ್ಷ ಮುಹಮ್ಮದ್ ರಫೀಕ್, ಕಾರ್ಯದರ್ಶಿ ಶರೀಫ್ ಎಂ.ಯೂ, ರಿಜ್ವಾನ್ ಹುಸೇನ್, ನದೀಂ, ಅಕ್ರಮ್,ತೌಸೀಫ್,ಮೂಸ ಹಸೈನಾರ್,ಇಮ್ರಾನ್ ಇನ್ನಿತರರು ಉಪಸ್ಥಿತರಿದ್ದರು.
