ವರದಿಗಾರ (ಜ 9) : ಅಪ್ರಾಪ್ತೆ ದಲಿತ ವಿದ್ಯಾರ್ಥಿನಿ ದಾನಮ್ಮ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ದಲಿತ, ದಮನಿತರ ಮತ್ತು ಪ್ರಗತಿಪರರು ಒಂದಾಗಿ ಆಯೋಜಿಸಿದ ಬಿಜಾಪುರ ಚಲೋ ಪ್ರತಿಭಟನಾ ಕಾರ್ಯಕ್ರಮವನ್ನು ಪೊಲೀಸರು ಅನಗತ್ಯ ತಡೆಯೊಡ್ಡಿ ಶೋಷಿತ ಸಮುದಾಯದ ಪರ ನಿರಂತರವಾಗಿ ಯಾವುದೇ ಮುಲಾಜಿಲ್ಲದೇ ಹೋರಾಟ ಮಾಡುವ ಭಾಸ್ಕರ್ ಪ್ರಸಾದ್ ರವರನ್ನು ಸೇರಿದಂತೆ ಹೋರಾಟಗಾರರನ್ನು ಅಕ್ರಮವಾಗಿ ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಎಂಬ ನೆಪವೂಡ್ಡಿಕೊಂಡು ಹೋರಾಟವನ್ನು ದಮನಿಸಿರುವ ಪೊಲೀಸ್ ಇಲಾಖೆ ದಾನಮ್ಮಗೆ ಯಾವ ರೀತಿ ನ್ಯಾಯ ಒದಗಿಸುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಬವವಾಗುತ್ತಿದೆ. ಪೊಲೀಸರು ಮತ್ತು ಅಲ್ಲಿನ ಜಿಲ್ಲಾಡಳಿತದ ಈ ನಡೆಯು ಬಹಳ ಅನುಮಾನಸ್ಪದವಾಗಿದೆಯಲ್ಲದೆ, ಇದು ಶಾಂತಿಯುತವಾಗಿ ಹೋರಾಟದ ಮೂಲಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಸಂವಿಧಾನಬದ್ದ ಹಕ್ಕಿನ ನಿರಾಕರಣೆಯಾಗಿದೆ ಎಂದು ಹನ್ನಾನ್ ರವರು ಅಭಿಪ್ರಾಯಿಸಿದ್ದಾರೆ. ದಾನಮ್ಮ ಹತ್ಯೆ ಅಮಾನವೀಯ. ಆ ಹೆಣ್ಣು ಮಗುವಿನ ವಿಷಯದಲ್ಲಿ ಸರ್ಕಾರ ಯಾವುದೇ ರಾಜಕೀಯ ಮಾಡದೇ, ಪ್ರಗತಿಪರ ಹೋರಾಟಗಾರರ ಬಿಜಾಪುರ ಚಲೋ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸ ಬೇಕು ಹಾಗೂ ಬಂಧಿಸಲ್ಪಟ್ಟಿರುವ ಎಲ್ಲಾ ಹೋರಾಟಗಾರರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕೆಂದು SDPI ಆಗ್ರಹಿಸುತ್ತದೆ ಎಂದು ಪಕ್ಷದ ರಾಜ್ಯ ಮಾಧ್ಯಮ ಮುಖ್ಯಸ್ಥರಾದ ಅಬ್ರಾರ್ ಅಹ್ಮದ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
