ರಾಜ್ಯ ಸುದ್ದಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗೆ ಸೋಲಿನ ಭಯ ಪ್ರಾರಂಭವಾಗಿದೆ : ಸಿದ್ದರಾಮಯ್ಯ

ವರದಿಗಾರ (ಜ.9): ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಯಾವ ತಂತ್ರವೂ, ರಣತಂತ್ರವೂ ಕರ್ನಾಟಕದಲ್ಲಿ ನಡೆಯಲ್ಲ. ಅಮಿತ್ ಷಾ ಗೌಪ್ಯ ಸಭೆ ಮಾಡಲಿ. ಅವರಿಗೆ ಸೋಲಿನ ಭಯ ಪ್ರಾರಂಭವಾಗಿದೆ . ಉಪಚುನಾವಣೆಯಲ್ಲೇ ರಾಜ್ಯದ ದಿಕ್ಸೂಚಿಯ ಅರಿವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನನ್ನ ಆತ್ಮೀಯರನ್ನು, ಆಪ್ತರನ್ನು ಹುಡುಕಿ ಹುಡುಕಿ ದಾಳಿ ಮಾಡುತ್ತಿದ್ದಾರೆ. ಶಿವಣ್ಣ ಮನೆಗೆ ಕೂಡಾ ದುರುದ್ದೇಶದ ದಾಳಿಯಾಗಿದೆ. ನರೇಂದ್ರ ಮೋದಿ ವಿದೇಶಕ್ಕೆ ಯಾರ ಹಣದಲ್ಲಿ ಸುತ್ತುತ್ತಾರೆ ? ತನ್ನ ಸ್ವಂತ ಹಣದಲ್ಲಿ ಓಡಾಡ್ತಾರಾ ? ಎಂದು ಪ್ರಶ್ನಿಸುತ್ತಾ,  ನಾವು ಸರಕಾರಿ ಕಾರ್ಯಕ್ರಮಕ್ಕೆ ಓಡಾಟ ಮಾಡ್ತೇವೆ ಎಂದು ಬೆನ್ನು ತಟ್ಟಿ ಕೊಂಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಬಗ್ಗೆ ಮಾತನಾಡುತ್ತಾ, ಉತ್ತರ ಪ್ರದೇಶ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು, ಯೋಗಿ ಆದಿತ್ಯನಾಥ್ ರಾಜ್ಯದ ಅಭಿವೃದ್ಧಿ ನೋಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದ್ದಾರೆ.  ದೇವೆಗೌಡರನ್ನು ಬಹಳ ವರ್ಷದಿಂದ ನೋಡಿದ್ದೇನೆ. ಪದೇ ಪದೇ ತೋರಿಸೋದಕ್ಕೆ ಏನಿದೆ, ಅವರ ಜೊತೆಗಿದ್ದೂ ಬಹಳ ನೋಡಿದ್ದೇನೆ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group