ವರದಿಗಾರ:ಕೇರಳದಲ್ಲಿ ಇತ್ತೀಚೆಗೆ ಭಾರೀ ಸುದ್ದಿಗೀಡಾಗಿ ರಾಷ್ಟ್ರೀಯ ಗಮನ ಸೆಳೆದಿದ್ದ ಮತಾಂತರ ಪ್ರಕರಣವನ್ನು ಇದೀಗ ಸುಪ್ರೀಮ್ ಕೋರ್ಟ್ ಅದೇಶದ ಮೇರೆಗೆ ಎನ್ ಐ ಎ ಕೈಗೆತ್ತಿಕೊಂಡಿದೆ.
ಹಿಂದು ಯುವತಿ ಅಖಿಲಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಹಾದಿಯ ಎಂದು ಬದಲಿಸಿಕೊಂಡಿದ್ದಳು. ನಂತರ ಮುಸ್ಲಿಂ ಯುವಕ ಶಫೀನ್ ಜಹಾನ್’ನನ್ನು ವಿವಾಹವಾಗಿದ್ದಳು.
ಈ ಮೊದಲು ತನಿಖೆ ನಡೆಸಿದ್ದ ಕೇರಳ ಪೋಲೀಸರು, ಕೇರಳ ಪೋಲೀಸ್ ಕಾಯ್ದೆಯ ಸೆಕ್ಷನ್ 57ರ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ಕೇರಳ ಸರಕಾರವು ಈ ಜೋಡಿಯ ವಿವಾಹವನ್ನು ತಥಾಕಥಿತ ‘ಲವ್ ಜಿಹಾದ್’ ನ ಭಾಗವೆಂದು ಪರಿಗಣಿಸಿ ಅಸಿಂಧುವೆಂದು ಘೋಷಿಸಿತ್ತು.
ನಂತರ ಮೇ 25ರಂದು ಕೇರಳ ಉಚ್ಚ ನ್ಯಾಯಾಲಯವು ಈ ಜೋಡಿಯ ವಿವಾಹವನ್ನು ಅಸಿಂಧುವೆಂದು ಘೋಷಿಸಿ ಅವಳನ್ನು ಹೆತ್ತವರ ಬಳಿ ಮರಳುವಂತೆ ಆದೇಶಿಸಿತ್ತು.
ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಶಫೀನ್ ಉಚ್ಚ ನ್ಯಾಯಾಲಯದ ಆದೇಶವು ‘ ಭಾರತದಲ್ಲಿರುವ ಸ್ತ್ರೀ ಸ್ವಾತಂತ್ರ್ಯದ ಅವಮಾನ‘ ಎಂದು ವಾದಿಸಿದರು.ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಆರ್.ವಿ.ರವೀಂದ್ರನ್ ಎನ್ ಐ ಎ ತನಿಖೆಯ ಮೇಲುಸ್ತುವಾರಿ ವಹಿಸಲಿದ್ದಾರೆ.
