ವರದಿಗಾರ (ಜ 5 ) : ದಕ್ಷಿಣ ಕನ್ನಡ ಜಿಲ್ಲೆಯ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಮುದಾಯಕ್ಕೆ ಆಸರೆಯಾಗಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸರಕಾರದೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳುವ ಸಲುವಾಗಿ ಸರ್ವ ಮುಸ್ಲಿಮರ ಸಾಮುದಾಯಿಕ, ರಾಜಕೀಯ ನೇತಾರರ ತುರ್ತು ಸಭೆ ಇಂದು ಮಂಗಳೂರಿನಲ್ಲಿ ನಡೆಯಿತು. ಈ ಸಭೆಯಲ್ಲಿ ಕೆಂಪಿ ಮುಸ್ತಫಾ ಹಾಜಿ, ಹಮೀದ್ ಹಾಜಿ ಕಂದಕ್, ಹನೀಫ್ ಖಾನ್ ಕೊಡಾಜೆ, ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ರಶೀದ್ ಹಾಜಿ, ನವಾಝ್ ಉಳ್ಳಾಲ, ಕೂಳೂರು ಜಮಾಅತ್ ಅಧ್ಯಕ್ಷ ಶರೀಫ್ ಇವರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಗಂಭೀರ ಸ್ಥಿತಿಯಲ್ಲಿದ್ದಾರೆಂದು ಹೇಳಲಾಗುವ ಬಶೀರ್ ರವರ ಆಗು ಹೋಗುಗಳ ಕುರಿತಂತೆ ನಿಗಾ ವಹಿಸಲು ಸಮಿತಿಯು ಸಂಪೂರ್ಣ ಜವಾಬ್ದಾರಿ ವಹಿಸಿದೆ. ಅದೇ ರೀತಿ ಮುಂದಕ್ಕೆ ನಡೆಯುವ ಎಲ್ಲಾ ಆಗು ಹೋಗುಗಳಲ್ಲೂ ಸಮುದಾಯದ ಎಲ್ಲಾ ಸ್ತರದ ನಾಯಕರು ಈ ಸಮಿತಿಯೊಂದಿಗೆ ನೇರ ಸಂಪರ್ಕ ಮಾಡಬೇಕೆಂದು ಕರೆ ಕೊಟ್ಟಿದ್ದಾರೆ
ಮಾಧ್ಯಮದ ಕಾರ್ಯಕ್ರಮದ ನಿಮಿತ್ತ ಸಭೆಗೆ ಗೈರು ಹಾಜರಾದ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಮಾಜಿ ಮೇಯರ್ ಕೆ. ಅಶ್ರಫ್ ರವರು ಕೂಡಾ ತಮ್ಮ ಬೆಂಬಲವನ್ಶು ಸೂಚಿಸಿದ್ದು, ಸಮಿತಿಯ ನಾಯಕರನ್ನು ಭೇಟಿಯಾಗಿದ್ದಾರೆ.
