ರಾಜ್ಯ ಸುದ್ದಿ

ಕೋರೆಗಾಂವ್ ದಾಳಿ ; ಮನುವಾದಿಗಳ ವಿರುದ್ಧ ಶೋಷಿತರೆಲ್ಲರೂ ಒಗ್ಗಟ್ಟಾಗಬೇಕಾಗಿದೆ : ಅಬ್ದುಲ್ ಮಜೀದ್

ವರದಿಗಾರ (ಜ 2) : ಮಹಾರಾಷ್ಟ್ರದ ಕೋರೆಗಾಂವ್ ನಲ್ಲಿ ‘ಭೀಮ ಕೋರೆಗಾಂವ್’ ಸಂಗ್ರಾಮದ ವಿಜಯೋತ್ಸವದ 200ನೇ ವರ್ಷಾಚರಣೆಯ ಸಂದರ್ಭದಲ್ಲಿ ದಲಿತ ಬಾಂಧವರ ಮೇಲೆ ಮನುವಾದಿ ಪ್ರೇರಿತ ಸಂಘಪರಿವಾರದವರು ನಡೆಸಿರುವ ದಾಳಿಯು ಅತ್ಯಂತ ಹೇಯ ಕೃತ್ಯವಾಗಿದ್ದು, ಇದನ್ನು ನಾವೆಲ್ಲರೂ ಕಟು ಶಬ್ದಗಳಲ್ಲಿ ಖಂಡಿಸಬೇಕಾಗಿದೆ.  ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಈ ಮನುವಾದಿಗಳು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ದೇಶದ ದಲಿತ, ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗದ ಜನರ ಮೇಲೆ ನಿರಂತರ ದೌರ್ಜನ್ಯಗಳನ್ನು ನಡೆಸಲಾಗುತ್ತಿದೆ. ಈ ಮನುವಾದಿ ಶಕ್ತಿಗಳನ್ನು ಸೋಲಿಸಲು “ಕೋರೆಗಾಂವ್ ಸಂಗ್ರಾಮ” ನಮಗೆಲ್ಲರಿಗೂ ಸ್ಪೂರ್ತಿಯಾಗಬೇಕು ಹಾಗೂ ಮನುವಾದಿಗಳ ವಿರುದ್ಧ ಹೋರಾಡಲು ಶೋಷಿತ ವರ್ಗಗಳಾದ ದಲಿತ, ಮುಸ್ಲಿಮ್ ಹಾಗೂ ಎಲ್ಲಾ ಹಿಂದುಳಿದವರು ಒಗ್ಗಟ್ಟಾಗಬೇಕಾಗಿರುವುದು ಕಾಲದ ಬೇಡಿಕೆಯಾಗಿದೆ ಎಂದು ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಮಜೀದ್ ರವರು ಅಭಿಪ್ರಾಯ ಪಟ್ಟಿದ್ದಾರೆ.

1818 , ಜನವರಿ 1 ರಂದು ಅಸ್ಪೃಶ್ಯತೆಯ ಪ್ರತೀಕವಾಗಿದ್ದ ಎರಡನೇ ಬಾಜೀರಾಯನ ಸುಮಾರು 28000 ರಷ್ಟಿದ್ದ ಸೈನ್ಯದ ವಿರುದ್ಧ ಬ್ರಿಟಿಷ್ ಸೈನ್ಯದಲ್ಲಿದ್ದ ಮಹಾರ್ ರೆಜಿಮೆಂಟ್ ನ ಕೇವಲ 500 ಮಂದಿ ಮಹಾರ್ ಸೈನಿಕರು ಹೋರಾಡಿ ಜಯ ಗಳಿಸಿದ ‘ಕೋರೆಗಾಂವ್ ಸಂಗ್ರಾಮ’ ವು ಒಂದು ಐತಿಹಾಸಿಕ ಘಟನೆಯಾಗಿದೆ. ಆದರೆ ಈ ಯುದ್ಧಕ್ಕೆ ಇತಿಹಾಸದ ಪುಟಗಳಲ್ಲಿ ಸಿಗಬೇಕಾಗಿದ್ದ  ಪ್ರಾಮುಖ್ಯತೆ ದೊರೆಯದಿರುವುದು ಇತಿಹಾಸದ ದುರಂತವೆನ್ನಬಹುದಾಗಿದೆ.

1818 ರಲ್ಲಿ ಚಿತ್ಪಾವಣಾ ಬ್ರಾಹ್ಮಣನಾಗಿದ್ದ ಎರಡನೇ ಬಾಜೀರಯನ ವಿರುದ್ಧದ ಹೋರಾಟವು ಅಂದಿನ ಅಸ್ಪೃಶ್ಯತೆ ಹಾಗೂ ಮನುವಾದಿಗಳ ವಿರುದ್ಧದ ಹೋರಾಟವಾಗಿತ್ತು. ಮನುವಾದಿ ಸಿದ್ಧಾಂತದ ಮೂಲಕ ದಲಿತರನ್ನು ಪ್ರಾಣಿಗಳಿಗಿಂತಲೂ ಕೀಳು ಮಟ್ಟದಲ್ಲಿ ಕಾಣುತ್ತಿದ್ದಂತಹಾ ಸಂದರ್ಭದಲ್ಲಿ, ಮಹಾರ್ ದಲಿತ ಸೈನಿಕರು ಬಾಜೀರಾಯನನ್ನು ಸೋಲಿಸಿದ್ದುದು ಐತಿಹಾಸಿಕವಾಗಿತ್ತು. ಇಂದು ಅದೇ ಮನೋಸ್ಥಿತಿಯ ಮನುವಾದಿ ಶಕ್ತಿಗಳು,  ದಲಿತರು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಜಯಿಸಿದ್ದ ‘ಕೋರೆಗಾಂವ್’ ಸಂಗ್ರಾಮದ ವಿಜಯೋತ್ಸವ ಆಚರಣೆಯ ಮೇಲೆ ದಾಳಿ ಮಾಡಿ ಅಸ್ಪೃಶ್ಯತೆಯ ವಿರುದ್ಧದ ಹೋರಾಟವನ್ನು ದಮನಿಸುವ ಕೆಲಸ ಮಾಡಿದ್ದಾರೆ.  ಇದನ್ನು ಎಲ್ಲಾ ಶೋಷಿತರು ಒಗ್ಗಟ್ಟಾಗಿ ನಿಂತು ಮನುವಾದಿಗಳನ್ನು ಎದುರಿಸಬೇಕಾಗಿದೆ ಎಂದು ಅಬ್ದುಲ್ ಮಜೀದ್ ಕರೆ ಕೊಟ್ಟಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group