ವರದಿಗಾರ (ಜ.1): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ರಿಗೆ ಕರ್ನಾಟಕದಲ್ಲಿ ಬೆಂಕಿ ಹಚ್ಚಲು ಅಷ್ಟು ಸುಲಭದಲ್ಲಿ ನಾವು ಬಿಡುವುದಿಲ್ಲ. ಅವರು ಬೆಂಕಿ ಹಚ್ಚಿದ ತಕ್ಷಣ ನಂದಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಗಲಭೆ ನಡೆಸಲು ಅಮಿತ್ ಷಾ ಸೂಚಿಸಿದ್ದರೆಂದು ಸಂಸದ ಪ್ರತಾಪ್ ಸಿಂಹ ಈ ಹಿಂದೆ ಹೇಳಿಕೊಂಡಿದ್ದರು. ಒಬ್ಬ ರಾಜಕಾರಣಿಯಾದವನು ಸಮಾಜದಲ್ಲಿ ಸಾಮರಸ್ಯವಿರಬೇಕೆಂದು ಇಚ್ಛೆಪಡಬೇಕೇ ಹೊರತು ಸಾಮರಸ್ಯವನ್ನು ಹಾಳು ಮಾಡುವಂತೆ ಹೇಳುವವರು ರಾಜಕಾರಣಿಗಳಲ್ಲ, ಅವರು ನನ್ನ ಪ್ರಕಾರ ಮನುಷ್ಯರೇ ಅಲ್ಲ’ ಎಂದು ಗುಡುಗಿದ್ದಾರೆ.
