ಸುತ್ತ-ಮುತ್ತ

ಕೆಸಿಎಫ್ ಬವಾದಿ ಸೆಕ್ಟರ್ ಅಧೀನದಲ್ಲಿ ಯಶಸ್ವಿಯಾದ ಜಶ್’ನೇ ಮುಬಾರಕ್ ಕಾರ್ಯಕ್ರಮ

ಜಿದ್ದಾ : ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬವಾದಿ ಸೆಕ್ಟರ್ ಅಧೀನದಲ್ಲಿ ಕಳೆದ 41 ದಿನವಸಗಳ ಕಾಲ ನಡೆಸಿಕೊಂಡು ಬರುತ್ತಿದ ಸಹಿಷ್ಣುತೆಯ ಪ್ರವಾದಿ (ﷺ) ಕಾರ್ಯಕ್ರಮದ ಸಮಾರೋಪ ಸಮಾರಂಭ, ನೇತಾರರ ಅನುಸ್ಮರಣೆ ಹಾಗೂ ಕುಟುಂಬ ಸಂಗಮವು ಡಿಸಂಬರ್ 28 ರಂದು ಹಂದಾನಿಯ್ಯಾದಲ್ಲಿ ಸೆಕ್ಟರ್ ಅಧ್ಯಕ್ಷರಾದ ಸುಲೈಮಾನ್ ಬಂಡಾಡ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

 

ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಸಯ್ಯದ್ ಅಬೂಬಕ್ಕರ್ ತಂಙಳ್ ರವರ ದುಆದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಹನೀಫ್ ಸಖಾಫಿ ಸಾಲೆತ್ತೂರು ರವರು ಉದ್ಘಾಟಿಸಿದರು. ನಮ್ಮ ಜೀವನದಲ್ಲಿ ಕೆಸಿಎಫ್ ಎಂಬ ವಿಷಯವಾಗಿ ಮಾತನಾಡಿದ ಉಸ್ತಾದರು ಕೆಸಿಎಫ್ ನಮ್ಮ‌ ಜೀವದಲ್ಲಿ ಯಾಕೆ ಬೇಕು ಎಂಬುದನ್ನು ನೆರೆದವರಿಗೆ ಮನದಟ್ಟು ಮಾಡಿಕೊಟ್ಟರು. ನಂತರ ಪ್ರವಾಸಿಯ ಕುಟುಂಬ ಎಂಬ ವಿಷಯವಾಗಿ ಝೈನುದ್ದೀನ್ ಮುಸ್ಲಿಯಾರ್ ಬೆಳ್ಳಾರೆ ಉಸ್ತಾದರು ಅರ್ಥಪೂರ್ಣವಾಗಿ ಮಾತನಾಡಿದರು.

 

ಐಸಿಎಫ್ ಮಕ್ರೋಣ ಸರ್ಕಲ್ ಅಧ್ಯಕ್ಷರಾದ ಮಹ್’ಸಿನ್ ಸಖಾಫಿ ಉಸ್ತಾದರು ಅನುಸ್ಮರಣ ಭಾಷಣವನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಜೀಲಾನಿ, ತಾಜುಲ್ ಉಲಮಾ ಹಾಗೂ ನೂರುಲ್ ಉಲಮಾರನ್ನು ಅನುಸ್ಮರಿಸಲಾಯಿತು. ಆರ್ ಎಸ್ ಸಿ ಜಿದ್ದಾ ಸರ್ಕಲ್ ಜನರಲ್ ಕನ್ವೀನರ್ ಆದ ‍‍‍‍ನಾಸಿಫ್ ಕಲ್ಲಿಕೋಟೆ ‍‍‍‍‍‍‍‍‍ರವರು ಮಾತನಾಡಿ ಕೆಸಿಎಫ್ ನಡೆಸುತ್ತಿರುವ ಕಾರ್ಯಚಟುವಟಿಕೆಗಳು ಅದರಲ್ಲೂ ಹಜ್ಜಾಜ್ ಗಳ ಸೇವೆಗಾಗಿ ಕಾರ್ಯಾಚರಿಸುತ್ತಿರುವ ಹೆಚ್ ವಿ ಸಿ ಸೇವೆಯನ್ನು ಮೆಚ್ಚಿ ಅಭಿನಂದನೆಗಳನ್ನು ತಿಳಿಸಿದರು.

ಬವಾದಿ ಸೆಕ್ಟರ್ ಅಧೀನದಲ್ಲಿ 41 ದಿನಗಳು ನಡೆಸಲು ಉದ್ದೇಶಿಸಿದ ಸಹಿಷ್ಣುತೆಯ ಪ್ರವಾದಿ (ﷺ) ಮಾದರಿ ಮಜ್ಲಿಸ್ ಅಭಿಯಾನಕ್ಕೆ ನೇತ್ರತ್ವ ನೀಡಿ, ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಉಸ್ತಾದರಿಗೆ ಆಶಿಖುರ್ರಸೂಲ್ ಇಮಾಂ ಅಹ್ಮದ್ ರಝಾ ಖಾನ್ ಅಲ್-ಫಾಳಿಲಿ ಬರೇಲ್ವಿ (رحمة الله عليه) ಅವಾರ್ಡ್ ನೀಡಿ ಗೌರವಿಸಲಾಯಿತು. ಪ್ರವಾಸಿ ಜೀವನಕ್ಕೆ ಅಲ್ಪ ವಿರಾಮ ಹಾಕಿ ಊರಿಗೆ ತೆರಳುತ್ತಿರುವ ಕೆಸಿಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಸಯ್ಯದ್ ಅಬೂಬಕ್ಕರ್ ತಂಙಳ್ ಹಾಗೂ ಕೋಶಾಧಿಕಾರಿ ಸಯ್ಯದ್ ಖಾಲಿದ್ ತಂಙಳ್ ರವರರಿಗೆ  ಬೀಳ್ಕೊಡುಗೆ ನೀಡಲಾಯಿತು.

ಜಿ ಎಂ ಸುಲೈಮಾನ್ ಹನೀಫಿ, ಸಯ್ಯದ್ ಖಾಲಿದ್ ತಂಙಳ್ ಹಾಗೂ ಅಝೀಝ್ ಝುಹ್ರಿ ಬಾಳೆಪುನಿ ಉಸ್ತಾದರ ನೇತ್ರತ್ವದಲ್ಲಿ ನಡೆದ ಆತ್ಮೀಯ ಮಜ್ಲಿಸ್ ನಂತರ ಮುಹಮ್ಮದ್ ಬಿನ್ ರಝಾಕ್ ಹಾಜಿ ಪಾಣೆಮಂಗಳೂರು ರವರು ಆಶಿಖುರ್ರಸೂಲ್ ಇಮಾಂ ಅಹ್ಮದ್ ರಝಾ ಖಾನ್ ಅಲ್-ಫಾಳಿಲಿ ಬರೇಲ್ವಿ (رحمة الله عليه) ರವರ ಮದ್’ಹ್ ಹೇಳಿದರು.

ಕ್ವಿಝ್, ಮೆಮೊರಿ ಟೆಸ್ಟ್, ಮಕ್ಕಳ ಸ್ಪರ್ದೆ ಹಾಗೂ ಮಹಿಳೆಯರಿಗಾಗಿ ಮಹಿಳೆಯರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮಗಳೂ ನಡೆಸಿ ವಿಜೇತರಿಗೆ ಬಹುಮಾನವನ್ನೂ ವಿತರಿಸಲಾಯಿತು.

 ಸಯ್ಯದ್ ಝಕರಿಯಾ ತಂಙಳ್, ಸಯ್ಯದ್ ಮುಹಮ್ಮದ್ ಬುಖಾರಿ ತಂಙಳ್ ಉಚ್ಚಿಲ, ಕೆಸಿಎಫ್ ಜಿದ್ದಾ ಝೋನ್ ಕಾರ್ಯದರ್ಶಿ ಇಬ್ರಾಹಿಂ ಕಿನ್ಯಾ, ಝೋನ್ ಅಧೀನದಲ್ಲಿರುವ ಸೆಕ್ಟರ್ ಗಳ ನೇತಾರರು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ ಈ ಕಾರ್ಯಕ್ರಮಕ್ಕೆ ಇಂಜಿನಿಯರ್ ಮುಹಮ್ಮದ್ ಕಲ್ಲರ್ಬೆ ಯವರು ಸ್ವಾಗತಿಸಿ ಅಬ್ದುಲ್ ಸಲಾಂ ಎಣ್ಮೂರು ಧನ್ಯವಾದಗೈದರು ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಚೇರ್ಮಾನ್ ಸಯ್ಯದ್ ಖಾಲಿದ್ ರಿಪ್ಪನಪೇಟೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group