ರಾಜ್ಯ ಸುದ್ದಿ

ಪಬ್ಲಿಕ್ ಟಿವಿಯ ಸುಳ್ಳಿನ ಜಾತಕ ಬಯಲು ಮಾಡಿದ TV9 ! ಸುಳ್ಳಿನ ಕಂತೆಗಳಿಗೆ TV9 ನ ‘ಬರ್ನಲ್ ಶಾಕ್’ !

ವರದಿಗಾರ (ಡಿ 30 ) : ಪತ್ರಿಕಾ ಧರ್ಮವನ್ನು ಪಾಲಿಸದೆ ಸದಾ ಸುಳ್ಳು ಸುದ್ದಿಗಳ ಕಾರಣದಿಂದಲೇ ಹೆಸರುವಾಸಿಯಾಗಿರುವ ‘ಪಬ್ಲಿಕ್ ಟಿವಿ’ ಎಂಬ ಕನ್ನಡ ಚಾನೆಲ್ ವಿರುದ್ಧ ಕನ್ನಡದ  ಖ್ಯಾತ ಚಾನೆಲ್ ಹಾಗೂ ರಾಜ್ಯದ ಪ್ರಪ್ರಥಮ ಸುದ್ದಿ ವಾಹಿನಿಯಾಗಿರುವ  TV9,  ಯುದ್ಧದ ಅಖಾಡಕ್ಕೆ ಬಂದು ತೊಡೆ ತಟ್ಟಿದೆ. ಮಾತ್ರವಲ್ಲ ಪಬ್ಲಿಕ್ ಟಿವಿಯ ಸುಳ್ಳಿನ ಸರಮಾಲೆಗಳಿಗೆ ಮರ್ಮಾಘಾತ ನೀಡಿ, ಇಡೀ ರಾಜ್ಯದ ಜನರ ಮುಂದೆ ಪಬ್ಲಿಕ್ ಟಿವಿಯನ್ನು ಬೆತ್ತಲಾಗಿಸಿದೆ.

ಕಳೆದ 11 ವರ್ಷಗಳಿಂದ ಯಾವುದೇ ರೀತಿಯ ಹಿತಾಸಕ್ತಿಗಳಿಗೆ ಅಥವಾ ಒತ್ತಡಗಳಿಗೆ ಬಲಿ ಬೀಳದೆ ಹಲವು ಸುದ್ದಿವಾಹಿನಿಗಳ ಪ್ರವೇಶಗಳ ಭರಾಟೆಗಳ ನಡುವೆಯೂ ತನ್ನದೇ ಆದ ಛಾಪು ಮೂಡಿಸುತ್ತಾ ಸಾಗುತ್ತಿದ್ದ TV9, ಪ್ರೇಕ್ಷಕರ ಜೊತೆಯೊಂದು ಆತ್ಮೀಯ ಸಂಬಂಧ ಬೆಳೆಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ನಡೆದಿದ್ದ ಗುಜರಾತ್ ಚುನಾವಣೆಯ ಫಲಿತಾಂಶದ ದಿನದ ಪ್ರೇಕ್ಷಕರ ವೀಕ್ಷಣೆಯಲ್ಲಿ (TRP) ನಾವೇ ‘ನಂಬರ್ ವನ್’ ಎಂದು ಬೊಗಳೆ ಬಿಟ್ಟಿದ್ದ ಪಬ್ಲಿಕ್ ಟಿವಿಯ ಚಳಿ ಬಿಡಿಸಿದೆ ಈ TV9. ಪ್ರೇಕ್ಷಕರ ವೀಕ್ಷಣೆಯ ಅಂಕಿ ಅಂಶ ನೀಡುವ ಸಂಸ್ಥೆಯಾದ BARC ಗೆ ವಂಚಿಸಿ ಜನರಿಗೆ ತಪ್ಪು ಸಂದೇಶ ಕೊಟ್ಟದ್ದನ್ನು TV9 ದಾಖಲೆಗಳ ಸಹಿತ ಬಯಲು ಮಾಡಿದೆ. ಮಾತ್ರವಲ್ಲ ಜನರಿಗೆ ಸುಳ್ಳು ಸುದ್ದಿ ಬಿತ್ತರಿಸಿದ ಕುರಿತು BARC ಗೆ ದೂರು ನೀಡುವುದಾಗಿಯೂ ಹೇಳಿಕೊಂಡಿದೆ. ಸೃಜನಶೀಲ ಪತ್ರಿಕೋದ್ಯಮಗಳ ವಿಷಯದಲ್ಲಿ TV9 ಹತ್ತಿರಕ್ಕೂ ಸುಳಿಯಲಾರದ ಈ ಪಬ್ಲಿಕ್ ಟಿವಿಗೆ ಕೇವಲ ಸುಳ್ಳುಗಳೇ ಜೀವಾಳ ಎಂಬುವುದನ್ನು TV9 ದಾಖಲೆಗಳ ಸಹಿತ ಬಿತ್ತರಿಸಿದೆ. TV9 ವರದಿಯಲ್ಲಿ ತಿಳಿಸಿರುವಂತೆ ಗುಜರಾತ್ ಚುನಾವಣಾ ಫಲಿತಾಂಶದ ದಿನ BARC ಅಂಕಿ ಅಂಶದ ಪ್ರಕಾರ 31.32 ರೇಟಿಂಗ್ ನೊಂದಿಗೆ TV9 ಪ್ರಥಮ ಸ್ಥಾನದಲ್ಲಿದ್ದರೆ, ಪಬ್ಲಿಕ್ ಟಿವಿಯ ರೇಟಿಂಗ್ 25.35 ಮಾತ್ರ.  ಆದರೆ ಪಬ್ಲಿಕ್ ಟಿವಿ ಇದನ್ನು ತಿರುಚಿ ನಾವೇ ನಂಬರ್ ವನ್ ಎಂದು ಬಿಂಬಿಸಿಕೊಂಡು ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಹೋಗಿ ಈಗ ನಗೆಪಾಟಲಿಗೀಡಾಗಿರುವುದು ಮಾತ್ರ ಸುಳ್ಳಲ್ಲ.

ಹೌದು, ಸುಳ್ಳುಗಳು ಹೆಚ್ಚು ಕಾಲ ಬಾಳಲ್ಲವೆನ್ನುತ್ತಾರೆ ಹಿರಿಯರು. ಕಳೆದ ವರ್ಷ ಆರ್ ಬಿ ಐ ಹೊರ ತಂದಿದ್ದ 2000 ರೂಪಾಯಿಯ ಹೊಸ ನೋಟಿನಲ್ಲಿ ಒಂದು ಗುಪ್ತ ಚಿಪ್ ಇದೆ,  ಯಾರಾದರೂ ಈ ಹೊಸ ನೋಟನ್ನು ಎಲ್ಲೇ ಅಡಗಿಸಿಟ್ಟರೂ ಉಪಗ್ರಹದ ಮೂಲಕ ಅದನ್ನು ಕಂಡು ಹಿಡಿಯಬಹುದಾದಂತಹಾ ಹೊಸ ನೋಟ್ ಇದು ಎಂದು ತನ್ನ ಚಾನೆಲಿನಲ್ಲಿ ಇಬ್ಬರು ಆರ್ಥಿಕ ತಜ್ಞರನ್ನು ಕೂರಿಸಿಕೊಂಡು, ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸುವ ಭರದಲ್ಲಿ ನಗೆಪಾಟಲಿಗೀಡಾಗಿದ್ದರು ಚಾನೆಲಿನ ಮುಖ್ಯಸ್ಥ ರಂಗನಾಥ್ ! ಘಟನೆ ನಡೆದು ವರ್ಷ ಕಳೆದರೂ ರಂಗನಾಥ್ ರವರ ಆ ವೀಡಿಯೋ ಮಾತ್ರ ಇನ್ನೂ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಾ ಪಬ್ಲಿಕ್ ಟಿವಿಯವರ ಬಂಡವಾಳ ಬಯಲು ಮಾಡುತ್ತಲೇ ಇದೆ.

TV9 ಬಿಡುಗಡೆಗೊಳಿಸಿದ ವೀಡಿಯೋ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group